ಹಾಸನ:2020-21ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶವು ನಿನ್ನೆ(ಆ.9) ಪ್ರಕಟಗೊಂಡಿದ್ದು, ಓರ್ವ ವಿದ್ಯಾರ್ಥಿ ಹೊರತಾಗಿ ಎಲ್ಲ ವಿದ್ಯಾರ್ಥಿಗಳೂ ಪಾಸ್​ ಆಗಿರುವುದು ಈ ಷರ್ವದ ವಿಶೇಷ. ಇದರ ಜತೆಗೆ ಮತ್ತೊಂದು ವಿಷೇಶ ಇದೆ. ಈ ಬಾರಿ ಒಟ್ಟಿಗೆ ಪರೀಕ್ಷೆ ಬರೆದಿದ್ದ ಅಮ್ಮ-ಮಗ ಇಬ್ಬರೂ ಪಾಸ್​ ಆಗಿದ್ದಾರೆ!
ಹೌದು, ಕಳೆದ ಜುಲೈ 29 ಮತ್ತು 31ರಂದು ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸಕಲೇಶಪುರ ತಾಲೂಕಿನ ಲಕ್ಷ್ಮೀಪುರ ಗ್ರಾಮದ ಸಿ.ಎನ್.ತೀರ್ಥ ಮತ್ತು ಅವರ ಮಗ ಬಿ.ಆರ್.ಹೇಮಂತ್ ಇಬ್ಬರೂ ಬಾಳ್ಳುಪೇಟೆಯ ರಂಗನಾಥ ಪ್ರೌಢಶಾಲೆಯಲ್ಲಿ ಬರೆದಿದ್ದರು.
ಎಂಟನೇ ತರಗತಿ ಓದುತ್ತಿರುವಾಗಲೇ ತೀರ್ಥ ಅವರು ಅರ್ಧಕ್ಕೆ ಶಾಲೆ ಬಿಟ್ಟಿದ್ದರು. ಬಳಿಕ ಮದುವೆ ಆಗಿತ್ತು. ತೀರ್ಥ ಅವರ ಮಗ ಹೇಮಂತ್​, ವಳಲಹಳ್ಳಿ ಗ್ರಾಮದ ಶ್ರೀ ಮಲ್ಲೇಶ್ವರ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದ. ಈ ಬಾರಿ ಅಮ್ಮ-ಮಗ ಇಬ್ಬರೂ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಮಗ 562 ಅಂಕ ಪಡೆದರೆ, ಅಮ್ಮ 235 ಅಂಕ ಪಡೆದು ಪಾಸಾಗಿದ್ದಾರೆ.
ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟ: ಓರ್ವ ವಿದ್ಯಾರ್ಥಿ ಬಿಟ್ಟು ಎಲ್ಲರೂ ಪಾಸ್​! ಯಾರಿಗೆ ಯಾವ ಗ್ರೇಡ್​? ಇಲ್ಲಿದೆ ಮಾಹಿತಿ

ಅಮ್ಮನ ಮಾತು ಕೇಳಿದ್ದರೆ ವಿವೇಕ್​ ಸಾಯುತ್ತಲೇ ಇರಲಿಲ್ಲ..! ಮುಗಿಲುಮುಟ್ಟಿದೆ ಹೆತ್ತವ್ವನ ಆಕ್ರಂದನ

ನನ್ನ ತಾಯಾಣೆ.. ಅಷ್ಟೊಂದು ಹಣವನ್ನು ಜೀವನದಲ್ಲಿ ನೋಡಿಯೇ ಇರಲಿಲ್ಲ: ಮಂಜು ಪಾವಗಡ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − 3 =
Remember me
