ವಿಜಯಪುರ:2021-22ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಗ್ರಾಮೀಣ ಭಾಗದ ಕೂಲಿ ಕಾರ್ಮಿಕಳ ಮಗನೊಬ್ಬ 625ಕ್ಕೆ 625 ಅಂಕ ಪಡೆದು ಟಾಪರ್ ಆಗಿ ಹೊರ ಹೊಮ್ಮಿದ್ದಾನೆ. ಸಣ್ಣ ಮಗುವಿದ್ದಾಗಲೇ ತಂದೆಯನ್ನು ಕಳೆದುಕೊಂಡ ಅಮಿತ್​ಗೆ ತಾಯಿಯೇ ಎಲ್ಲ. ಮನೆಯಲ್ಲಿ ಕಡು ಬಡತನವಿದ್ದರೂ ಓದಿನಲ್ಲಿ ಶ್ರೀಮಂತ. ಸಾಧನೆಗೆ ಶ್ರದ್ಧೆ ಮತ್ತು ಪಯತ್ನ ಮುಖ್ಯ ಎಂಬುದನ್ನು ಸಾಬೀತು ಮಾಡಿದ್ದಾನೆ. ಅಂದ ಹಾಗೆ ಆ ವಿದ್ಯಾರ್ಥಿ ಹೆಸರು ಅಮಿತ್.
ವಿಜಯಪುರ ಜಿಲ್ಲೆ ಜುಮನಾಳ ಗ್ರಾಮದ ಮಾದೇವಿ ಮಾದರ ಎಂಬುವರ ಪುತ್ರ ಅಮಿತ್. ಕಿತ್ತೂರು ರಾಣಿ ಚನ್ನಮ್ಮ ಶಾಲೆಯ ವಿದ್ಯಾರ್ಥಿಯಾದ ಅಮಿತ್, ಪ್ರೌಢ ಶಾಲೆಗೆ ಕಾಲಿಟ್ಟ ಕ್ಷಣದಿಂದಲೇ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಆಗಬೇಕೆಂಬ ಕನಸು ಕಂಡಿದ್ದ. ಅದಕ್ಕಾಗಿ ಸತತ ಅಧ್ಯಯನದಲ್ಲಿ ತೊಡಗಿದ್ದ. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ಅಮಿತ್‌ಗೆ ತಾಯಿ ಮಾದೇವಿ ಅವರೇ ಎಲ್ಲ. ಗ್ರಾಮದಲ್ಲಿ ಕೂಲಿ ಕೆಲಸ ಮಾಡುತ್ತಾ ಬದುಕಿನ ಬಂಡಿ ಸಾಗಿಸುತ್ತಿರುವ ಮಾದೇವಿ, ಮಗ ಚೆನ್ನಾಗಿ ಓದಿ ದೊಡ್ಡ ನೌಕರಿ ಪಡೆಯಬೇಕು ಎಂಬ ಮಹತ್ತರ ಆಸೆ ಇಟ್ಟುಕೊಂಡಿದ್ದಾರೆ.
ಅಮ್ಮನ ಆಸೆ ಈಡೇರಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟ ಅಮಿತ್, ಪ್ರತಿ ದಿನ 6-8 ಗಂಟೆ ಅಭ್ಯಾಸ ಮಾಡುತ್ತಿದ್ದೆ. ಬೇರೆ ಯಾವುದೇ ವಿಷಯದ ಕಡೆ ಹೆಚ್ಚು ಗಮನ ಹರಿಸದೆ ಗುರುಗಳ ಮಾರ್ಗದರ್ಶನದಲ್ಲಿ ಅಂದಿನದ್ದನ್ನು ಅಂದೇ ಅಬ್ಯಾಸ ಮಾಡಿ ಮುಗಿಸುತ್ತಿದ್ದೆ. ಅಮ್ಮನ ಪ್ರೋತ್ಸಾಹ-ಶಿಕ್ಷಕರ ಸಹಕಾರದಿಂದ ಸಾಧನೆ ಮಾಡಲು ಸಾಧ್ಯವಾಯಿತು ಎನ್ನುತ್ತಾರೆ.
ಮಾದೇವಿ ಅವರಿಗೆ ಮೂವರು ಮಕ್ಕಳು. 14 ವರ್ಷದ ಹಿಂದೆಯೇ ಮಾದೇವಿ ಅವರ ಪತಿ ತೀರಿಕೊಂಡಿದ್ದಾರೆ. ಆಗ ಅಮಿತ್​ ಸಣ್ಣ ಮಗು. ಮಗಳು ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದ, ಮತ್ತೊಬ್ಬ ಮಗ ಬುಕ್ ಸ್ಟಾಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚಿಕ್ಕ ಮಗ ಅಮಿತ್​ಗೆ ಎಂಬಿಬಿಎಸ್ ಓದಬೇಕು. ಬಳಿಕ ಐಎಎಸ್ ಪಾಸ್​ ಮಾಡಬೇಕು ಎಂಬ ಹಂಬಲ ಇದೆ.
ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ: ಶೇ.85.63 ಉತ್ತೀರ್ಣ, ಈ ಬಾರಿಯೂ ಬಾಲಕಿಯರೇ ಮೇಲುಗೈ

PSI ಹುದ್ದೆ ಅಕ್ರಮ: ಮೊದಲ ರಾತ್ರಿಯ ಖುಷಿಯಲ್ಲಿದ್ದವನಿಗೆ ಶಾಕ್ ಕೊಟ್ಟ ಸಿಐಡಿ​! ದೇವಸ್ಥಾನದಲ್ಲೇ ನವವಿವಾಹಿತ ವಶಕ್ಕೆ

ಫ್ಯಾಟ್​ ಬರ್ನ್​ ಸರ್ಜರಿ ಪ್ರಾಣಕ್ಕೆ ಕುತ್ತು ತರುತ್ತಾ? ನಟಿ ಚೇತನಾ ಸಾವಿನ ಬೆನ್ನಲ್ಲೇ ಮಹತ್ವದ ವಿಚಾರ ತಿಳಿಸಿದ ವೈದ್ಯರು

Sign in to your account
Please enter an answer in digits:five × one =
Remember me
