ಮೈಸೂರು:ಮನೆಯಲ್ಲಿದ್ದ ಮೊಬೈಲ್ ಕೆಟ್ಟು ಹೋಗಿರುವ ಹಿನ್ನೆಲೆ ಆನ್​ಲೈನ್ ಕ್ಲಾಸ್​ಗೆ ಹಾಜರಾಗಲು ಆಗದೆ ಪರದಾಡುತ್ತಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯೊಬ್ಬಳು ಮೊಬೈಲ್ ಖರೀದಿಗಾಗಿ ಸೊಪ್ಪು ಮಾರಾಟ ಮಾಡುತ್ತಿದ್ದಾಳೆ.
ಸಾತಗಳ್ಳಿ ವಿದ್ಯಾರ್ಥಿನಿ ಕೀರ್ತಿನಿ ಬೀದಿಬದಿ ತರಕಾರಿ- ಸೊಪ್ಪು ಮಾರುತ್ತಲೇ ಗ್ರಾಹಕರು ಇಲ್ಲದ ವೇಳೆ ಪುಸ್ತಕ ಹಿಡಿದು ಓದುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಕೀರ್ತಿನಿ ಕುಟುಂಬ ಬಡವರು, ಕರೊನಾ ಸಂಕಷ್ಟಕ್ಕೆ ಸಿಲುಕಿ ಮತ್ತಷ್ಟು ನಲುಗಿದೆ. ಒಂದೆಡೆ ಅನಾರೋಗ್ಯಕ್ಕೀಡಾಗಿರುವ ತಾಯಿ, ಕೂಲಿ ಕೆಲಸವಿಲ್ಲದ ತಂದೆಗೆ ಬದುಕು ಸಾಗಿಸುವುದೇ ದುಸ್ತರ ಆಗಿದೆ.

ಈ ನುಡುವೆ ಮನೆಯಲ್ಲಿದ್ದ ಮೊಬೈಲ್​ ಕೂಡ ಕೆಟ್ಟು ಹೋಗಿದ್ದು, ಪರಿಣಾಮ ಕೀರ್ತಿನಿ ನಾಲ್ಕೈದು ದಿನಗಳಿಂದ ಆನ್ ಲೈನ್ ತರಗತಿಗೆ ಗೈರಾಗಿದ್ದಾಳೆ. ಹೇಗಾದರೂ ಮೊಬೈಲ್​ ಅಥವಾ ಟ್ಯಾಪ್​ ಖರೀದಿ ಮಾಡಲೇಬೇಕಂದು ಚಿಂತಿಸಿದ ಕೀರ್ತಿನಿ ಬೆಳಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಸೊಪ್ಪು-ತರಕಾರಿ ಮಾರುತ್ತಿದ್ದಾಳೆ.
ಮಹಿಳೆಯನ್ನ ನಗ್ನಗೊಳಿಸಿ ತೋಟದ ಮನೆಯಲ್ಲಿ ಕೂಡಿಹಾಕಿದ ಬಿಎಂಟಿಸಿ ಬಸ್​ ಚಾಲಕ! ಮುಂದಾಗಿದ್ದು ದುರಂತ

ತಾವೇ ಕಟ್ಟಿಸಿದ್ದ ಕೃಷಿಹೊಂಡಕ್ಕೆ ಹಾರಿ 4 ಮಕ್ಕಳೊಂದಿಗೆ ಪ್ರಾಣಬಿಟ್ಟ ದಂಪತಿ! ಇವರ ಸ್ಟೋರಿ ಕೇಳಿದ್ರೆ ಕಣ್ಣೀರು ಬರುತ್ತೆ

ಮರ್ಯಾದೆಗೆ ಅಂಜಿ ವಿಜಯಪುರ ಮೂಲದ ಮೂವರು ಗೋವಾದಲ್ಲಿ ಆತ್ಮಹತ್ಯೆ! ಪ್ರಕರಣ ದಿಕ್ಕುತಪ್ಪಿಲು ಪೊಲೀಸರ ಯತ್ನ

Sign in to your account
Please enter an answer in digits:15 + nineteen =
Remember me
