ಚನ್ನಪಟ್ಟಣ:ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಆಧುನಿಕತೆಯ ಭರಾಟೆಯಲ್ಲಿ ಮುಳುಗಿದ್ದು, ಗ್ರಾಮೀಣ ಆಟಗಳು ಕಣ್ಮರೆಯಾಗಿವೆ. ಇಂತಹ ಸಂದರ್ಭದಲ್ಲಿ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದ ಯುವಕರ ತಂಡ ‘ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆ’ ಆಯೋಜಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಶಿಕ್ಷಕರ ಗ್ರಾಮ ಎಂಬ ಹೆಗ್ಗಳಿಕೆ ಹೊಂದಿರುವ ಚಕ್ಕೆರೆ ಗ್ರಾಮದಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ. ಸಿ.ಪಿ. ಯೋಗೀಶ್ವರ್​ ಅಭಿಮಾನಿಗಳ ಬಳಗ ಹಾಗೂ ಹಳ್ಳಿಕಾರ್​ ಗೆಳೆಯರ ಬಳಗದ ವತಿಯಿಂದ ಮೇ 15ರ ಭಾನುವಾರ ಮೊದಲ ವರ್ಷದ ರಾಜ್ಯಮಟ್ಟದ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆ ನಡೆಯಲಿದೆ. ರಾಜ್ಯದ ಯಾರು ಬೇಕಿದ್ದರೂ ಪಾಲ್ಗೊಳ್ಳಬಹುದು. ವಿಜೇತರಿಗೆ 1 ಲಕ್ಷ ರೂ. ಬಹುಮಾನ ಕೊಡಲಾಗುತ್ತೆ.
ವಿಜೇತರಿಗೆ 1 ಲಕ್ಷ ರೂ. ಬಹುಮಾನ:ಜೋಡಿ ಎತ್ತಿನ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಜೋಡಿ ಎತ್ತಿನ ಮಾಲೀಕರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ಹಾಗೂ ಆಕರ್ಷಕ ಪಾರಿತೋಷಕ ದೊರೆಯಲಿದೆ. 2ನೇ ಬಹುಮಾನ 75 ಸಾವಿರ ನಗದು ಮತ್ತು ಪಾರಿತೋಷಕ, ಮೂರನೇ ಬಹುಮಾನ 50 ಸಾವಿರ ರೂ. ಹಾಗೂ ಪಾರಿತೋಷಕ ಹಾಗೂ ನಾಲ್ಕನೇ ಬಹುಮಾನವಾಗಿ 25 ಸಾವಿರ ರೂ. ಹಾಗೂ ಪಾರಿತೋಷಕ ನೀಡಲಾಗುವುದು.
ಸ್ಪರ್ಧೆಗೆ ಗೌಡಗೆರೆ ಗ್ರಾಮದ ತಾಯಿ ಚಾಮುಂಡೇಶ್ವರಿ ಕ್ಷೇತ್ರದ ಪವಾಡ ಬಸವಪ್ಪ ಚಾಲನೆ ನೀಡಲಿದೆ. ಸಿ.ಪಿ.ಯೋಗೀಶ್ವರ್​ ಉದ್ಘಾಟನೆ ಹಾಗೂ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕ ವೆಂಕಟರಾಮೇಗೌಡ, ರಾಜ್ಯ ಹಳ್ಳಿಕಾರ್​ ಅಭಿವೃದ್ಧಿ ಸಂಘದ ಅಧ್ಯಕ್ಷ ವರ್ತೂರು ಸಂತೋಷ್​, ಜಾನಪದ ವಿದ್ವಾಂಸ ಚಕ್ಕೆರೆ ಶಿವಶಂಕರ್​, ಗೌಡಗೆರೆ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್​ ಗುರೂಜಿ ಮತ್ತಿತರರು ಭಾಗವಹಿಸಲಿದ್ದಾರೆ.
ಜಿಲ್ಲೆಯಲ್ಲೇ ಪ್ರಥಮ:ರಾಮನಗರ ಜಿಲ್ಲೆಯಲ್ಲಿ ಕ್ರಿಕೆಟ್​, ಕಬಡ್ಡಿ, ವಾಲಿಬಾಲ್​ ಸೇರಿ ವಿವಿಧ ಕ್ರೀಡಾಕೂಟಗಳು ನಡೆಯುತ್ತವೆ. ಆದರೆ, ಜೋಡಿ ಎತ್ತಿನ ಓಟದ ಸ್ಪರ್ಧೆ ನಡೆಯುತ್ತಿರುವುದು ಇದೇ ಮೊದಲಾಗಿದೆ. ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಹಾಗೂ ಹಳ್ಳಿಕಾರ್​ ತಳಿಗಳ ಉತ್ತೇಜನಕ್ಕಾಗಿ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಯುವಕರ ಈ ಕಾರ್ಯಕ್ಕೆ ಗ್ರಾಮದ ಹಿರಿಯರೂ ಕೈಜೋಡಿಸಿದ್ದಾರೆ. ಸ್ಪರ್ಧೆಗೆ ಎಂಎಲ್​ಸಿ ಸಿ.ಪಿ.ಯೋಗೇಶ್ವರ್​ ಬೆಂಬಲವಾಗಿ ನಿಂತಿದ್ದು, ಕ್ರೀಡಾಕೂಟಕ್ಕೆ ಬೇಕಾದ ಅಗತ್ಯ ಸಿದ್ಧತೆ ಹಾಗೂ ಪ್ರಚಾರ ಕೈಗೊಳ್ಳಲಾಗಿದೆ. ಮಾಹಿತಿಗೆ ಆಯೋಜಕರಾದ ಅಭಿನಂದನ್​ ಅವರ ಮೊ.ನಂ. 919611 222922 ಸಂಪರ್ಕಿಸಿ.
ಮಳೆ ಎಫೆಕ್ಟ್​ ಸ್ಪರ್ಧೆ ದಿನಾಂಕ ಬದಲಾಗಬಹುದು:ಸದ್ಯ ಆಸನಿ ಚಂಡಮಾರುತ ಪರಿಣಾಮ ರಾಜ್ಯದಲ್ಲೂ ಮಳೆಯಾಗುತ್ತಿದೆ. ನಾಳೆ-ನಾಡಿದ್ದೂ ಮಳೆ ಬಂದರೆ ಮೇ 15ರಂದು ನಡೆಯಬೇಕಿದ್ದ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆ ಮುಂದೂಡಿಕೆ ಆಗುವ ಸಾಧ್ಯತೆ ಇದೆ. ಹೆಚ್ಚಿನ ಮಾಹಿತಿಗೆ ಮೊ.ನಂ. 919611 222922 ಸಂಪರ್ಕಿಸಬಹುದು.
ತಾಳಿ ಕಟ್ಟಿಸಿಕೊಂಡ ಮರುಕ್ಷಣವೇ ಪರೀಕ್ಷಾ ಕೇಂದ್ರಕ್ಕೆ ದೌಡಾಯಿಸಿದ ಮದುಮಗಳು! ಮಂಡ್ಯ ಯುವತಿಯ ನಡೆಗೆ ಎಲ್ಲೆಡೆ ಮೆಚ್ಚುಗೆ

ದಾಖಲೆ ಬರೆದ ಕೆಂಪಡಕೆ ಬೆಲೆ! ಅಡಕೆ ಬೆಳೆಗಾರರ ಮೊಗದಲ್ಲಿ ಸಂತಸ

SSLC ವಿದ್ಯಾರ್ಥಿಗಳಿಗೆ ಈ ಬಾರಿ ಸಿಗುತ್ತೆ 10 ಕೃಪಾಂಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − nine =
Remember me
