ಬೆಂಗಳೂರು:ನವ ಭಾರತಕ್ಕಾಗಿ ನವ ಕರ್ನಾಟಕ ಸಂಕಲ್ಪ ಪೂರ್ಣಗೊಳಿಸುವ ನಿಟ್ಟಿನಲ್ಲಿ ರಾಜ್ಯ ನೀತಿ ಮತ್ತು ಯೋಜನಾ ಆಯೋಗ ಪುನಾರಚಿಸುವ ಮಹತ್ವದ ನಿರ್ಧಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೈಗೊಂಡಿದ್ದಾರೆ. ಕೇಂದ್ರ ಸರ್ಕಾರದ ನೀತಿ ಆಯೋಗ ಮಾದರಿಯಲ್ಲಿ ಆಯೋಗವನ್ನು ‘ರಾಜ್ಯ ಪರಿವರ್ತನಾ ಸಂಸ್ಥೆ’ (ಎಸ್​ಐಟಿಕೆ) ಎಂದು ಪುನಾರಚಿಸಲಾಗಿದೆ. ಈ ಸಂಸ್ಥೆಗೆ ಮುಖ್ಯಮಂತ್ರಿ ಅಧ್ಯಕ್ಷರಾಗಿದ್ದು, ಯೋಜನೆ ಹಾಗೂ ಸಂಬಂಧಿತ ವಿಷಯಗಳಲ್ಲಿ ಪರಿಣಿತರಾದವರನ್ನು ಉಪಾಧ್ಯಕ್ಷರನ್ನಾಗಿ ಸರ್ಕಾರ ನೇಮಿಸಲಿದೆ. ನೀತಿ ಆಯೋಗ ಮಾದರಿಯಲ್ಲಿ ಸುಸ್ಥಿರ ಅಭಿವೃದ್ಧಿ-2030 ಹಾಗೂ 2047ಕ್ಕೆ ಭಾರತ ಗುರಿಗಳ ಮೇಲೆ ಈ ಸಂಸ್ಥೆ ಗಮನವಿರಿಸಲಿದೆ. ಪ್ರಮುಖ ಎರಡು ಗುರಿಗಳಿಗೆ ಹೊಂದಿಕೊಂಡು ರಾಜ್ಯದ ಯೋಜನೆಗಳನ್ನು ರೂಪಿಸುವುದು ಸಂಸ್ಥೆಯ ಜವಾಬ್ದಾರಿಯಾಗಿದೆ. ಗುರಿ ಸಾಧನೆಗೆ ಪೂರಕವಾಗಿ ಸಂಶೋಧನೆ ಮತ್ತು ವಿನೂತನ ಚಟುವಟಿಕೆ, ಯೋಜನೆ ಒಳಗೊಂಡಿರುವ ಸಹಕಾರಿ ಸ್ಥಳೀಯ ಆಡಳಿತ ಉತ್ತೇಜನ ಸೇರಿ ವಿವಿಧ ಹೊಣೆಗಾರಿಕೆ, ಕಾರ್ಯ ನಿರ್ವಹಿಸಲೆಂದು ಸಂಸ್ಥೆಯ ಸಾಂಸ್ಥಿಕ ಸ್ವರೂಪವನ್ನು ಮಾರ್ಪಡಿಸಲಾಗಿದೆ.
ಉದ್ದೇಶಗಳು:ಪ್ರಾದೇಶಿಕ ಅಸಮತೋಲನ ತಗ್ಗಿಸುವುದು, ಉತ್ತಮ ಆಡಳಿತ ಅಭ್ಯಾಸಗಳ ಅನುಷ್ಠಾನ, ಆವಿಷ್ಕಾರ ಹಾಗೂ ಜ್ಞಾನ ಉತ್ತೇಜಿಸುವುದು, ನವ ಭಾರತಕ್ಕಾಗಿ ನವ ಕರ್ನಾಟಕ ವಿಕಸನಗೊಳ್ಳಲು ರಾಜ್ಯದ ಆದ್ಯತೆಗಳಿಗೆ ಅನುಗುಣವಾಗಿ ರಾಜ್ಯದ ಯೋಜನೆಗಳು ಮತ್ತು ಆಯವ್ಯಯ ತಯಾರಿಸುವುದು. ದಕ್ಷ ಆಡಳಿತ, ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ಬಳಕೆ, ಮೂಲಸೌಕರ್ಯ ಅಭಿವೃದ್ಧಿ, ರಾಜ್ಯದ ಒಟ್ಟು ಆಂತರಿಕ ಉತ್ಪನ್ನ ಹೆಚ್ಚಿಸುವುದರೊಂದಿಗೆ ದೇಶದ ಬೆಳವಣಿಗೆಗೆ ರಾಜ್ಯದ ಕೊಡುಗೆ ಸುಧಾರಣೆ ಇನ್ನಿತರ ಉದ್ದೇಶಗಳನ್ನು ರಾಜ್ಯ ಪರಿವರ್ತನಾ ಸಂಸ್ಥೆ ಹೊಂದಿದೆ.
150 ಕೋಟಿ ರೂ. ಅನುದಾನ:ಪರಿವರ್ತನಾ ಸಂಸ್ಥೆಯನ್ನು ಪರಿಣಾಮಕಾರಿಯಾಗಿ ನಡೆಸಿ, ಯಶಸ್ವಿಯಾಗಿ ಗುರಿ ಸಾಧಿಸಲು ವಾರ್ಷಿಕ 150 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಅಲ್ಲದೆ, ಆಡಳಿತ ಸುಧಾರಣೆಗಳ ಸ್ಪರ್ಧಾತ್ಮಕ ನಿಧಿ, ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರ, ಕರ್ನಾಟಕ ನಾವೀನ್ಯತೆ ಪ್ರಾಧಿಕಾರದ ನಾವೀನ್ಯತೆ ನಿಧಿ, ಸೆಂಟರ್ ಫಾರ್ ಓಪನ್ ಡಾಟಾ ರಿಸರ್ಚ್, ಸುಸ್ಥಿರ ಅಭಿವೃದ್ಧಿ ಗುರಿಗಳ ಸಮನ್ವಯ ಕೇಂದ್ರ ಇತ್ಯಾದಿಗಳಡಿ ಹಂಚಿಕೆಯಾದ ಅನುದಾನ ವಿಲೀನಗೊಳಿಸಲಾಗುವುದು ಎಂದು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.
ಅನ್ಯಕೋಮಿನವರಿಂದ ಆರ್​ಎಸ್​ಎಸ್​ ಮುಖಂಡನ ಮುಖಕ್ಕೆ ಚಾಕು ಇರಿತ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + two =
Remember me
