ಬಳ್ಳಾರಿ:ಪ್ರೀತಿಗೆ ಹೊತ್ತು ಗೊತ್ತಿಲ್ಲಾ, ಎಲ್ಲಿ ಯಾವಾಗ ಹೇಗೆ ಬೇಕಾದರೂ ಹುಟ್ಟಬಹುದು ಅದಕ್ಕೆ ಯಾವುದೇ ವಯಸ್ಸಿನ ಅಂತರವಿಲ್ಲ ಎಂಬುದರ ಬಗ್ಗೆ ಹಲವು ನಿದರ್ಶನಗಳನ್ನು ನಾವು ನೋಡಿದ್ದೇವೆ ಹಾಗೂ ಕೇಳಿದ್ದೇವೆ. ಇದೀಗ ಅದೇ ರೀತಿಯ ಘಟನೆಯೊಂದು ಬಳ್ಳಾರಿಯಲ್ಲಿ ನಡೆದಿದ್ದು, ಈ ಪ್ರಕರಣ ಠಾಣೆಯ ಮೆಟ್ಟಿಲೇರಿದೆ.
ವೃತ್ತಿಯಲ್ಲಿ ಲಾರಿ ಚಾಲಕನಾಗಿರುವ ಸಿದ್ದಗೊಂಡ ಸೌದತ್ತಿಗೆ ರೊಟ್ಟಿ ಮಾರಾಟ ಮಾಡುತ್ತಿದ್ದ ಮಹಿಳೆ ಸುಜಾತ ಜೊತೆ ಪರಿಚಯವಾಗಿದೆ. ಇಬ್ಬರ ನಡುವಿನ ಪರಿಚಯ ಪ್ರೇಮವಾಗಿ ತಿರುಗಿದ್ದು, ಇಬ್ಬರೂ ಮಹಾರಾಷ್ಟ್ರ ತೊರೆದು ಬಳ್ಳಾರಿಗೆ ಬಂದು ನೆಲೆಸಿದ್ದಾರೆ. ವೃತ್ತಿಯಲ್ಲಿ ಲಾರಿ ಚಾಲಕನಾಗಿದ್ದರೂ ಸಹ ಪ್ರೇಯಸಿಯನ್ನು ಖುಷಿಪಡಿಸಲು ವಿಮಾನದಲ್ಲಿ ಕನ್ಯಾಕುಮಾರಿ, ತಿರುಪತಿ, ಮಧುರೈ, ಕೊಚ್ಚಿ ಸೇರಿದಂತೆ ಹಲವು ಕಡೆ ಸುತ್ತಾಡಿಸಿದ್ದಾನೆ.
ಆದರೆ, ಇದೀಗ ಮಹಿಳೆ ಆತನಿಗೆ ಕೈಕೊಟ್ಟು ಪರಾರಿಯಾಗಿದ್ದು, ತನ್ನ ಪ್ರೇಯಸಿಯನ್ನು ಹುಡುಕಿಕೊಡುವಂತೆ ಸಿದ್ದಗೊಂಡ ಸೌದತ್ತಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾನೆ. ಇವರಿಬ್ಬರು ಜೊತೆಯಾಗಿ ಸುತ್ತಾಡಿರುವ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.
ಮಹಾರಾಷ್ಟ್ರದ ಸಾಂಗ್ಲಿ ಮೂಲದವರಾದ ಸುಜಾತ ಹಾಗೂ ಸಿದ್ದಗೊಂಡ ಅಚಾನಕ್ ಆಗಿ ರೊಟ್ಟಿ ತಿನ್ನಲು ಹೋಟೆಲ್​ಗೆ ಹೋಗಿದ್ದ. ಈ ವೇಳೆ ಸುಜಾತ ಹಾಗೂ ಸಿದ್ದಗೊಂಡಗೆ ಪರಿಚಯವಾಗಿದ್ದು, ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿದೆ. ಕೊನೆಗೆ ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ಊರಿನಿಂದ ಓಡಿ ಬಂದಿದ್ದಾರೆ. ಈ ಇಬ್ಬರಿಗೆ ಈಗಾಗಲೇ ಮದುವೆಯಾಗಿ ಮಕ್ಕಳಿದ್ದರು ಸಹ ಇಬ್ಬರು ನವಜೋಡಿಗಳಂತೆ ದೇಶಾದ್ಯಂತ ವಿಮಾನದಲ್ಲಿ ಸುತ್ತಾಡಿದ್ದಾರೆ.
ಈ ನಡುವೆ ಸುಜಾತಾಳ ಗಂಡ ಪತ್ನಿ ಕಾಣೆಯಾಗಿದ್ದಾಳೆ ಎಂದು ಮಹಾರಾಷ್ಟ್ರದ ಸಾಂಗ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಸಾಂಗ್ಲಿ ಪೊಲೀಸರು ಆಕೆ ಬಳ್ಳಾರಿಯಲ್ಲಿರುವುದನ್ನು ಪತ್ತೆ ಹಚ್ಚಿ ನೋಟಿಸ್‌ ಕಳುಹಿಸಿದ್ದರು. ಸುಜಾತಾ ಸಾಂಗ್ಲಿ ಪೊಲೀಸ್‌ ಠಾಣೆಗೆ ಹೋಗಿ ಬಂದಿದ್ದಳು. ಅಲ್ಲಿ ನಡೆದ ಪಂಚಾಯಿತಿಕೆಯಲ್ಲಿ ತಾನು ಸಿದ್ದಗೊಂಡ ಸೌದತ್ತಿ ಜತೆಗೇ ಹೋಗುವುದಾಗಿ ಸುಜಾತಾ ಹೇಳಿ ಬಂದಿದ್ದಳು. ಅಲ್ಲದೇ ಸಿದ್ದಗೊಂಡ ಸೌದತ್ತಿ ಸಗ ಸಾಂಗ್ಲಿ ಪೋಲಿಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆದು ಕೊಟ್ಟ ಸುಜಾತಾಳನ್ನು ಮತ್ತೆ ಬಳ್ಳಾರಿಗೆ ಕರೆದುಕೊಂಡು ಬಂದಿದ್ದ.
ಈ ನಡುವೆ ಸುಜಾತಗೆ ಬೇರೊಂದು ವ್ಯಕ್ತಿಯ ಪರಿಚಯವಾಗಿದ್ದು, ಆತನೊಂದಿಗೆ ಮೊಬೈಲ್​ ಮೂಲಕ ಸಂಪರ್ಕ ಸಾಧಿಸಿದ್ದಾಳೆ. ಇದನ್ನು ಕಂಡು ಸಿಟ್ಟಿಗೆದ್ದಿರುವ ಸಿದ್ದಗೊಂಡ ಸುಜಾತ ಮೇಲೆ ರೇಗಿದ್ದಾನೆ. ಮುಂದೊಂದು ದಿನ ಲಾರಿ ಕೆಲಸ ಮುಗಿಸಿ ಮನೆಗೆ ಬಂದು ನೋಡುವಷ್ಟರಲ್ಲೇ ಸುಜಾತ ಕಾಣೆಯಾಗಿದ್ದಾಳೆ. ಕೂಡಲೇ ಆಕೆಯ ಪ್ರೇಯಸಿಗಾಗಿ ಹುಡುಕಾಟ ನಡೆಸಿದ್ದು, ಎಲ್ಲೂ ಸಿಗದಿದ್ದಾಗ ಆತ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು, ತನ್ನ ಪ್ರೇಯಸಿಯನ್ನು ಹುಡುಕಿ ಕೊಡುವಂತೆ ದೂರು ದಾಖಲಿಸಿದ್ದಾನೆ.
ಹೆಂಡತಿ ಹಾಗೂ ಇಬ್ಬರು ಮಕ್ಕಳನ್ನು ಬಿಟ್ಟು ಜೀವನಕ್ಕೆ ಆಸರೆಯಾಗುತ್ತಾಳೆಂದು ರೊಟ್ಟಿ ಮಾರೋ ಆಂಟಿಯನ್ನು ನಂಬಿಕೊಂಡು ಬಂದ ಸಿದ್ದಗೊಂಡನಿಗೆ ಈಗ ಹೆಂಡತಿಯೂ ಇಲ್ಲ, ಪ್ರೇಯಸಿಯೂ ಇಲ್ಲದಂತಾಗಿದೆ. ಜೊತೆಗೆ, ತಾನು ದುಡಿದು ಸಂಪಾದನೆ ಮಾಡಿ ಕೂಡಿಟ್ಟಿದ್ದ ಹಣವನ್ನೆಲ್ಲಾ ಪ್ರೇಯಸಿಯ ಸುತ್ತಾಟಕ್ಕೆ ಖರ್ಚು ಮಾಡಿಕೊಂಡು ಬೀದಿಗೆ ಬಂದಿದ್ದಾನೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
