ಕೋಲಾರ:ಸ್ನೇಹಿತರು ಕರೆದಿದ್ದಾರೆ ಎಂದು ಮನೆಯಿಂದ ಹೊರಗೆ ಬಂದ ಬಾಲಕ ಹೆಣವಾದ ಘಟನೆ ಕೋಲಾರದ ಪಿ.ಸಿ.ಬಡಾವಣೆಯಲ್ಲಿ ನಡೆದಿದೆ.
ಕಾರ್ತಿಕ್​ ಸಿಂಗ್ (17) ಮೃತ ಬಾಲಕ. ಪಿಸಿ ಬಡಾವಣೆಯ ನಿವಾಸಿ ಪೇಂಟಿಂಗ್​ ಕೆಲಸ ಮಾಡುತ್ತಿದ್ದ ಅರುಣ್​ ಸಿಂಗ್ ಎಂಬುವರ ಮಗ ಕಾರ್ತಿಕ್​ ಸಿಂಗ್. ಕೋಲಾರದ ಎಸ್​.ಡಿ.ಸಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಕಾರ್ತಿಕ್.​ ಕೊಲೆಗಟುಕರ ಕೈಗೆ ಸಿಕ್ಕಿ ಈ ಪ್ರಪಂಚವನ್ನೇ ಬಿಟ್ಟು ಹೋಗಿದ್ದಾನೆ.
ಪ್ರಥಮ ಪಿಯುಸಿ ಓದುತ್ತಿದ್ದ ಬಾಲಕ, ಹೊಟ್ಟೆ ನೋವು ಎಂದು ಶುಕ್ರವಾರ ಕಾಲೇಜಿಗೂ ಹೋಗದೆ ಮನೆಯಲ್ಲೇ ಇದ್ದನು. ಹೀಗಿರುವಾಗಲೇ ಸಂಜೆ ವೇಳೆಗೆ ಯಾರೋ ಸ್ನೇಹಿತರು ಪೋನ್​ ಮಾಡಿ ಕರೆದರು ಎಂದು ಅಮ್ಮನಿಗೆ ಹೇಳಿ 5.30 ಸುಮಾರಿಗೆ ಮನೆಯಿಂದ ಹೊರ ಹೋಗಿದ್ದಾನೆ. 7 ಗಂಟೆ ಸುಮಾರಿಗೆ ಆತನ ಮೊಬೈಲ್​ ಪೋನ್​ ಸ್ವಿಚ್​ ಆಫ್​ ಆಗಿದೆ. ಆದರೆ ಎಲ್ಲೋ ಹೋಗಿರಬೇಕು ಬರ್ತಾನೆ ಎಂದುಕೊಂಡು ಮನೆಯವರು ಸುಮ್ಮನಿದ್ದರು. ಆದರೆ 9 ಗಂಟೆ ಸುಮಾರಿಗೆ ಯಾರೋ ನಿಮ್ಮ ಮಗನನ್ನು ಹೊಡೆದುಹಾಕಿ ಕೊಲೆ ಮಾಡಿದ್ದಾರೆಂದು ತಿಳಿಸಿದ್ದಾರೆ. ಅಷ್ಟೊತ್ತಿಗೆ ಓಡೋಡಿ ಬಂದ ಕುಟುಂಬಸ್ಥರು ಬಂದು ನೋಡುವಷ್ಟರಲ್ಲಿ ಕಾರ್ತಿಕ್​ನನ್ನು ಶಾಲೆಯ ಆವರಣದಲ್ಲೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಪಿ.ಸಿ. ಬಡವಾಣೆ ಹಾಗೂ ಹಾರೋಹಳ್ಳಿ ಏರಿಯಾದ ಕೆಲವು ಹುಡುಗರ ಗ್ಯಾಂಗ್​ ನೊಂದಿಗೆ ಸ್ನೇಹ ಮಾಡಿದ್ದ ಕಾರ್ತಿಕ್.​ ಕಳೆದ ಕೆಲವು ದಿನಗಳ ಹಿಂದೆ ಅದೇ ಗ್ಯಾಂಗ್ ಹುಡುಗರಿಂದ ಏಟು ತಿಂದು ಗಲಾಟೆಯಾಗಿ ಪ್ರಕರಣ ಪೊಲೀಸ್​ ಠಾಣೆಯ ಮೆಟ್ಟಿಲೇರಿತ್ತು, ಈಗಲೂ ಅದೇ ಹುಡುಗರಿಂದಲೇ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ.ದಿಲೀಪ್​ ಆಲಿಯಾಸ್ ಶೈನು ಎಂಬುವನೇ ಈ ಕೊಲೆ ಮಾಡಿರುವ ಬಗ್ಗೆ ಆತನ ತಾಯಿ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಈ ಏರಿಯಾದಲ್ಲಿ ಸಣ್ಣ ಸಣ್ಣ ಹುಡುಗರುಗಳು ಗಾಂಜಾ ಸೇರಿದಂತೆ ದುಶ್ಚಟಗಳಿಗೆ ಒಳಗಾಗಿದ್ದಾರೆ, ಕ್ಷುಲ್ಲಕ ಕಾರಣಕ್ಕಾಗಿ ಗ್ಯಾಂಗ್ ಕಟ್ಟಿಕೊಂಡು ಸಿನಿಮಾ ಸ್ಟೈಲ್​ನಲ್ಲಿ ಗಲಾಟೆ ಮಾಡೋದು, ಬರ್ತಡೇ ಕೇಕ್​ ಕಟ್ ಮಾಡೋದು, ಕೇಳಿದವರ ಮೇಲೆ ಹಲ್ಲೆ ಮಾಡೋದು ಹಲ್ಲೆ ಮಾಡುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡೋದು ಇಂಥ ಕೃತ್ಯಗಳನ್ನು ಮಾಡುತ್ತಾರೆ ಅನ್ನೋದು ಸ್ಥಳೀಯರ ಆರೋಪ. ಪೊಲೀಸರು ಇಂಥ ಅಕ್ರಮಗಳಿಗೆ ಕಡಿವಾಣ ಹಾಕಬೇಕು ಅನ್ನೋದು ಸ್ಥಳೀಯ ನಿವಾಸಿಗಳ ಮನವಿ.
VIDEO | ಮೆದುಳಿನ ಸರ್ಜರಿ ವೇಳೆ ಹನುಮಾನ್ ಚಾಲೀಸಾ ಪಠಿಸಿ ಪಿಯಾನೋ ನುಡಿಸುತ್ತಿದ್ದ ರೋಗಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 11 =
Remember me
