ಶಿವಮೊಗ್ಗ:ನಕಲಿ ದಾಖಲೆಗಳನ್ನು ನೀಡಿ ದುರ್ಗಿಗುಡಿಯ ಇಂಡಸ್ ಬ್ಯಾಂಕ್‌ನಿಂದ ನಾಲ್ವರು ಬರೋಬ್ಬರಿ 24 ಲಕ್ಷ ರೂ. ಸಾಲ ಪಡೆದು ವಂಚಿಸಿದ್ದಾರೆ.
ನಕಲಿ ದಾಖಲಾತಿ ನೀಡಿ ವಂಚಿಸಿದ ಆರೋಪದ ಮೇಲೆ ಬ್ಯಾಂಕ್‌ನ ವ್ಯವಸ್ಥಾಪಕ ನವೀನ್‌ಕುಮಾರ್ ನಾಲ್ವರ ಮೇಲೆ ದೂರು ನೀಡಿದ್ದಾರೆ. ನಗರದ ಜೆ.ಎಚ್.ಪಟೇಲ್ ಬಡಾವಣೆಯಲ್ಲಿ ಮನೆ ಖರೀದಿ ಮಾಡುವ ಉದ್ದೇಶದಿಂದ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿದ ನಾಲ್ವರು, ಮನೆ ದಾಖಲಾತಿಗಳನ್ನು ಬ್ಯಾಂಕ್‌ಗೆ ಒದಗಿಸಿದ್ದರು. ಆ ದಾಖಲಾತಿಗಳ ಆಧಾರದ ಮೇಲೆ 24 ಲಕ್ಷ ರೂ. ಸಾಲ ಮಂಜೂರು ಮಾಡಲಾಗಿತ್ತು.
ಆದರೆ ಮನೆಗೆ ಸಂಬಂಧಿಸಿದ ಕ್ರಯಪತ್ರಗಳನ್ನು ಉಪ ನೋಂದಣಿ ಕಚೇರಿಯ ಆನ್‌ಲೈನ್‌ನಲ್ಲಿ ಪರಿಶೀಲಿಸಿದಾಗ ಬ್ಯಾಂಕ್‌ಗೆ ನೀಡಿರುವ ದಾಖಲಾತಿಗಳು ನಕಲಿ ಎಂಬುದು ಬೆಳಕಿಗೆ ಬಂದಿದೆ.
ಹಾಗಾಗಿ ನವೀನ್‌ಕುಮಾರ್ ಅವರು ನಾಲ್ವರ ವಿರುದ್ಧ ವಿನೋಬನಗರ ಠಾಣೆಗೆ ದೂರು ನೀಡಿದ್ದಾರೆ. ವಿಚಿತ್ರವೆಂದರೆ ಇತ್ತೀಚೆಗೆ ಇದೇ ಬ್ಯಾಂಕ್‌ನಲ್ಲಿ ನಕಲಿ ದಾಖಲೆ ಆಧಾರದ ಮೇಲೆ ಕೆಲವರು 17.42 ಲಕ್ಷ ರೂ. ಡಿಡಿ ಪಡೆದು ವಂಚಿಸಿದ್ದು, ಮೂವರ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ ಬ್ಯಾಂಕ್ ವ್ಯವಸ್ಥಾಪಕರು ದೂರು ದಾಖಲಿಸಿದ್ದರು.
ವಿಜಯಪುರದಲ್ಲಿ ಹಾಡಹಗಲೇ ಪಿಎಸ್‌ಐ ಮಗನ ಹತ್ಯೆ: ಗರ್ಭಿಣಿ ಮಗಳ ಬಾಳಿಗೆ ಕೊಳ್ಳಿ ಇಟ್ಟ ಮಾಜಿ ಕಾರ್ಪೋರೇಟರ್​

ನೀನೊಳ್ಳೆ ಜಮೀರ್​ ಆಡ್ದಂಗೆ ಆಡ್ತಿಯಲ್ಲೋ… ರೇಣುಕಾಚಾರ್ಯರನ್ನು ಮಾತಲ್ಲೇ ಚಿವುಟಿದ ಬಿಎಸ್​ವೈ

ಆಸ್ಪತ್ರೆಯಲ್ಲೇ ಕುಸಿದುಬಿದ್ದ ನರ್ಸ್ ಮೇಲಕ್ಕೆ ಏಳಲೇ ಇಲ್ಲ… ಸಾವಲ್ಲೂ ಸಾರ್ಥಕತೆ ಮೆರೆದ ಗಾನವಿ, ಈ ಸ್ಟೋರಿ ಓದಿದ್ರೆ ಮನಸ್ಸು ಭಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
