ಸುಳ್ಯ:ಹೊಟ್ಟೆ ನೋವಿಂದ ನರಳುತ್ತಿದ್ದ ವ್ಯಕ್ತಿಯನ್ನ ತಪಾಸಣೆ ಮಾಡಿದ ವೈದ್ಯರೇ ಅರೆಕ್ಷಣ ಶಾಕ್ ಆಗಿದ್ದಾರೆ. ಯಾಕಂದ್ರೆ ಅವನ ಹೊಟ್ಟೆಯೊಳಗೆ ಚಿನ್ನದ ಆಭರಣಗಳಿದ್ದವು!ತ್ರಿಶೂರ್ ಮುಕುಂದಪುರ ತಾಲೂಕಿನ ಆಂಬಲ್ಲೂರಿನ ಶಿಬು(48) ಹೊಟ್ಟೆಯಲ್ಲಿ ಚಿನ್ನದ ಸರ, ಉಂಗುರ, ಕಿವಿಯೋಲೆ ಪತ್ತೆಯಾಗಿದೆ. ಈ ಆಭರಣಗಳು ಆತನ ಹೊಟ್ಟೆಗೆ ಸೇರಿದ್ಹೇಗೆ ಗೊತ್ತಾ?
ಏ.1ರಂದು ಬೆಳಗ್ಗಿನ ಜಾವ ಸುಳ್ಯ ಖಾಸಗಿ ಬಸ್ ನಿಲ್ದಾಣ ಬಳಿಯ ಮೋಹನ್ ಜುವೆಲ್ಲರಿ ಮಾರ್ಟ್‌ನಲ್ಲಿ 7.50 ಲಕ್ಷ ರೂ.ಅಂದಾಜು ಮೌಲ್ಯದ 180 ಗ್ರಾಂ ಚಿನ್ನಾಭರಣ ಮತ್ತು 50 ಸಾವಿರ ನಗದು ಕಳವಾಗಿತ್ತು. ಈ ಪ್ರಕರಣದ ಬೆನ್ನತ್ತಿದ ಸುಳ್ಯ ಪೊಲೀಸ್​ ಠಾಣೆ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ, ಸುಳ್ಯ ಠಾಣಾ ಉಪನಿರೀಕ್ಷಕ ಹರೀಶ್ ಎಂ.ಆರ್. ಮತ್ತು ಕ್ರೈಂ ಎಸ್‌ಐ ರತನ್ ಕುಮಾರ್ ನೇತೃತ್ವದ ಪ್ರತ್ಯೇಕ ತಂಡ ಕಾರ್ಯಾಚರಣೆ ನಡೆಸಿತ್ತು.ಇದನ್ನೂ ಓದಿರಿಹಸಿವು ಸಹಿಸಲಾಗ್ತಿಲ್ಲ, ನಮ್ಗೆ ಕರೊನಾ ಸೋಂಕಾದರೂ ಬರಲಿ.. ಆಸ್ಪತ್ರೆಯಲ್ಲಿ ಒಪ್ಪೊತ್ತಿನ ಊಟವಾದ್ರೂ ಸಿಗುತ್ತೆ…
ಪ್ರಕರಣ ಬೆನ್ನು ಹತ್ತಿದ್ದ ಪೊಲೀಸರು ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬ ತಾಲೂಕಿನ ಆಲಕ್ಕೋಡಿನ ತಂಗಚ್ಚ(50) ಹಾಗೂ ತ್ರಿಶೂರ್ ಮುಕುಂದಪುರ ತಾಲೂಕಿನ ಆಂಬಲ್ಲೂರಿನ ಶಿಬು(48) ಎಂಬುವರನ್ನು ಬಂಧಿಸಿ, 6.61ಲಕ್ಷ ರೂ. ಮೌಲ್ಯದ 147 ಗ್ರಾಂ ಚಿನ್ನಾಭರಣ ಮತ್ತು ಕೃತ್ಯಕ್ಕೆ ಬಳಸಿದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದರು.
ಆರೋಪಿ ತಂಗಚ್ಚನನ್ನು ಶನಿವಾರವೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದರೂ, ಶಿಬುವನ್ನು ಹೊಟ್ಟೆ ನೋವು ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಸ್ಕ್ಯಾನಿಂಗ್ ನಡೆಸಿದಾಗ ಕರುಳಿನಲ್ಲಿ ಚಿನ್ನದ ಸರ ಪತ್ತೆಯಾಯಿತು. ಭಾನುವಾರ ವೈದ್ಯರು ಕಿವಿಯ ಓಲೆ ಹಾಗೂ ಉಂಗುರ ಸೇರಿದಂತೆ ಆತನ ಹೊಟ್ಟೆಯಿಂದ 35 ಗ್ರಾಂ ಚಿನ್ನವನ್ನು ಹೊರತೆಗೆದಿದ್ದಾರೆ. ಕದ್ದ ಚಿನ್ನವನ್ನು ಅಡಗಿಸಿಡಲು ಐಸ್‌ಕ್ರೀಂ ಜತೆ ನುಂಗಿದ್ದಾಗಿ ಶಿಬು ತನಿಖೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ.
ಕರೊನಾಗೆ ಒಂದೇ ದಿನ ತಾಯಿ-ಮಗ ಬಲಿ! ಒಂದೇ ಚಿತೆಯಲ್ಲಿ ಇಬ್ಬರ ಅಂತ್ಯಸಂಸ್ಕಾರ

ಕ್ಲೋಸ್ ಡೋರ್​ ಮೀಟಿಂಗ್​ನಲ್ಲಿ ರೋಹಿಣಿ ಸಿಂಧೂರಿಗೆ ಹಿಗ್ಗಾಮುಗ್ಗಾ ತರಾಟೆ! ಮೌನವಾಗಿಯೇ ಹೊರಟ ಡಿಸಿ

ಗಂಡನ ಅಂತ್ಯಸಂಸ್ಕಾರ ನೆರವೇರುತ್ತಿದ್ದಂತೆ ಸಾವಿನ ಮನೆಯ ಕದ ತಟ್ಟಿದ ಪತ್ನಿ! ಇವರ ಸ್ಟೋರಿ ಕೇಳಿದ್ರೆ ಕಣ್ಣೀರು ಬರುತ್ತೆ

ಹಸಿವು ಸಹಿಸಲಾಗ್ತಿಲ್ಲ, ನಮ್ಗೆ ಕರೊನಾ ಸೋಂಕಾದರೂ ಬರಲಿ.. ಆಸ್ಪತ್ರೆಯಲ್ಲಿ ಒಪ್ಪೊತ್ತಿನ ಊಟವಾದ್ರೂ ಸಿಗುತ್ತೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 2 =
Remember me
