ಬೆಂಗಳೂರು:ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ನಡುವೆ ಅಕ್ರಮ ಗಣಿಗಾರಿಕೆ ವಿಚಾರದಲ್ಲಿನ ಕದನ ಮತ್ತೊಂದು ಮಗ್ಗುಲಿಗೆ ಹೊರಳುವ ಲಕ್ಷಣ ಕಾಣಿಸಿದೆ.
ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಮಂಡ್ಯಗೆ ಆಹ್ವಾನಿಸಿದ ಸುಮಲತಾ, ಹೋರಾಟಕ್ಕೆ ಬೆಂಬಲ ಕೋರಿದ್ದಾರೆ. ರಾಜಭವನದ ಗಾಜಿನ ಮನೆಯಲ್ಲಿ ಎದುರು ಸಿಕ್ಕಾಗ ಸಿದ್ದರಾಮಯ್ಯಗೆ ಸುಮಲತಾ ಈ ಆಹ್ವಾನ ನೀಡಿದ್ದಾರೆ.
ಸುಮಲತಾ ಎದುರು ಸಿಕ್ಕಾಗ, ‘ಏನಮ್ಮ ನಿಮ್ದು ಬಹಳ ಜೋರಾಗಿದೆ?’ ಎನ್ನುತ್ತಾ ಸಿದ್ದರಾಮಯ್ಯ ನಕ್ಕರು. ನಗುತ್ತಲೇ ಪ್ರತಿಕ್ರಿಯಿಸಿದ ಸುಮಲತಾ, ‘ಏನಿಲ್ಲ ಹಾಗೇ ಸ್ವಲ್ಪ ನಡೀತಿದೆ’ ಎಂದರು. ಬಳಿಕ ‘ಮಂಡ್ಯಕ್ಕೆ ನೀವು ಒಂದು ಬಾರಿ ಭೇಟಿ ಕೊಡಿ ಸರ್’ ಎಂದು ಕೋರಿದರು. ಅವರ ಕೋರಿಕೆಗೆ, ‘ಆಯ್ತು ಬರುತ್ತೇನೆ’ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ಎಚ್​.ಡಿ. ಕುಮಾರಸ್ವಾಮಿ ವಿರುದ್ಧ ಸುಮಲತಾ ಸೆಟೆದು ನಿಂತಿರುವ ವಿಚಾರ ಇದೀಗ ರಾಜಕೀಯ ಕ್ಷೇತ್ರದಲ್ಲಿ ಬಹುಚರ್ಚಿತ ವಿಷಯ. ಭಾನುವಾರ ರಾಜಭವನದಲ್ಲಿ ರಾಜಕೀಯ ನಾಯಕರ ನಡುವೆ ಈ ವಿಷಯ ಚರ್ಚೆಯಾಗಿದೆ.
ಹಲವು ನಾಯಕರು ಸುಮಲತಾ ನಡೆಯನ್ನು ಸ್ವಾಗತಿಸಿದ್ದಾರೆ. ಮತ್ತೆ ಕೆಲವರು ಹೋರಾಟ ಮುಂದುವರಿಸುವಂತೆ ಸಲಹೆ ನೀಡಿರುವುದು ವಿಶೇಷ.
ಭಿಕ್ಷೆ ಬೇಡುತ್ತಿದ್ದ ವೃದ್ಧೆಗೆ ಅಚ್ಛೇ ದಿನ್​! ನೆಲಮಂಗಲ ತಹಸೀಲ್ದಾರ್ ಮಂಜುನಾಥ್​ರ ಕಾರ್ಯಕ್ಕೊಂದು ಸಲಾಂ

‘ಲೈಂಗಿಕ ಉತ್ಸವ’ದಲ್ಲಿ ಮಿಂದೆದ್ದ ನೂರಾರು ಜೋಡಿಗಳು! ನಾಲ್ಕು ದಿನ ನಡೆಯಿತು ಸೆಕ್ಸ್​ ಫೆಸ್ಟಿವಲ್​

ಬೆಟ್ಟದ ಮೇಲಿನ ಆಂಜನೇಯ ದೇವಸ್ಥಾನದಲ್ಲಿ ನಿಧಿಗಾಗಿ ಮಹಿಳೆ ಹತ್ಯೆ: ರಾತ್ರಿಯಿಡೀ ಬೆಟ್ಟದಲ್ಲೇ ಎಸ್​ಪಿ ವಾಸ್ತವ್ಯ

ಸಲಿಂಗಕಾಮಕ್ಕೆ ಒಪ್ಪದ ಸರ್ಕಾರಿ ಶಾಲೆ ಶಿಕ್ಷಕನ ಬರ್ಬರ ಹತ್ಯೆ! ಬೆಚ್ಚಿಬೀಳಿಸುತ್ತೆ ಆ ರಾತ್ರಿಯ ಕೃತ್ಯ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × one =
Remember me
