ಬೆಳಗಾವಿ:ಸುವರ್ಣ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಶಾವಿಗೆ ಒಣ ಹಾಕಿದ ಮಹಿಳೆಯನ್ನ ಕೆಲಸದಿಂದ ಅಮಾನತು ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಜನಾಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಆ ಮಹಿಳೆ ಸೇರಿ ಇಬ್ಬರಿಗೆ ಮತ್ತೆ ಕೆಲಸ ನೀಡಿದೆ.
ಸುವರ್ಣ ವಿಧಾನಸೌಧದ ಸ್ವಚ್ಛತೆ ಕೆಲಸಕ್ಕೆ ಬರುವ ಮಹಿಳೆಯೊಬ್ಬರು ಸಾಂಭ್ರಾದಿಂದ ಶಾವಿಗೆಯನ್ನು ತಂದು ಮಲ್ಲಮ್ಮಗೆ ಕೊಟ್ಟಿದ್ದಳು. ಮಲ್ಲಮ್ಮ ಶಾವಿಗೆಯನ್ನು ಇನ್ನಷ್ಟು ಒಣಗಿಸಬೇಕು ಎಂದು ಸೀರೆ ಹಾಸಿ ಒಣಹಾಕಿ, ಸ್ವಚ್ಛತಾ ಕೆಲಸ ಮಾಡುತ್ತಿದ್ದಳು. ಅದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸುವರ್ಣ ವಿಧಾನಸೌಧದ ಘನತೆ ಅರಿಯದೆ ಕೆಲಸದ ಮಹಿಳೆ ಮಾಡಿದ ಎಡವಟ್ಟು ದೊಡ್ಡ ಸುದ್ದಿಯಾಗಿತ್ತು. ಆ ಮಹಿಳೆಯನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗುತ್ತಿಗೆದಾರರ ಮೂಲಕ ಕೆಲಸದಿಂದ ವಜಾ ಮಾಡಿಸಿದ್ದರು. ಇದನ್ನು ಪ್ರಶ್ನಿಸಿ ಸಾಮಾಜಿಕ ಜಾಲತಾಣಗಳಲ್ಲಿ ಜನಾಕ್ರೋಶ ವ್ಯಕ್ತವಾಗಿತ್ತು. “ಐ ಸ್ಟಾಂಡ್​ ವಿತ್​ ಮಲ್ಲಮ್ಮ” ಹ್ಯಾಶ್​ಟ್ಯಾಗ್ ಮೂಲಕ ನೆಟ್ಟಿಗರು ಅಭಿಯಾನ ಶುರು ಮಾಡಿದ್ದರು. ‘ವಿಧಾನಸೌಧದಲ್ಲಿ ಅಶ್ಲೀಲ ವಿಡಿಯೋ ನೋಡಿದವರಿಗೆ ಇಲ್ಲದ ಶಿಕ್ಷೆ, ಶಾವಿಗೆ ಒಣಹಾಕಿದ ಬಡಪಾಯಿಗೇಕೆ?’ ಎಂದು ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು.
ಅಂದು ಆಗಿದ್ದೇನು?: ಮಲ್ಲಮ್ಮ ಮತ್ತು ಸಾಂವಕ್ಕ ಎಂಬ ಮಹಿಳೆಯರಿಬ್ಬರು ಸುವರ್ಣ ವಿಧಾನಸೌಧದಲ್ಲಿ ಸ್ವಚ್ಛತಾ ಕಾರ್ಮಿಕರಾಗಿ ದಿನಗೂಲಿ ಆಧಾರದಲ್ಲಿ ನಿಯೋಜನೆಯಾಗಿದ್ದರು. ಕಳೆದ ಮಂಗಳವಾರ ಸೌಧದ ಮೆಟ್ಟಿಲುಗಳ ಮೇಲೆ ಮಲ್ಲಮ್ಮ ಶಾವಿಗೆ ಒಣಗಿಸಲು ಹಾಕಿದ್ದರು. ಇದಕ್ಕೆ ಸಾಂವಕ್ಕ ಕೂಡ ಸಾಥ್​ ಕೊಟ್ಟಿದ್ದರು. ಅದರ ಚಿತ್ರ ಹಾಗೂ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ನಂತರ, ಅಧಿಕಾರಿಗಳು ಇಬ್ಬರನ್ನೂ ಕೆಲಸದಿಂದ ತೆಗೆದಿದ್ದರು. ಇದು ಜನಾಕ್ರೋಶಕ್ಕೆ ಕಾರಣವಾಗಿತ್ತು. ನೆಟ್ಟಿಗರು, ಶಾವಿಗೆ ಒಣ ಹಾಕಿದ್ದಕ್ಕೆ ಕೆಲಸದಿಂದ ತೆಗೆದು ಹಾಕುವುದು ಯಾವ ನ್ಯಾಯ? ಆ ಮಹಿಳೆಗೆ ತಿಳಿ ಹೇಳಿದ್ದರೆ ಮತ್ತೆ ಹಾಗೆ ಮಾಡುತ್ತಿರಲಿಲ್ಲ. ‘ಮಲ್ಲಮ್ಮನ ಶಾವಿಗೆ ಒಣ ಹಾಕಲು ನೆರವಾಗದ ಸುವರ್ಣವಿಧಾನಸೌಧ ನಾಡಿನ ಜನರ ಸಮಸ್ಯೆಗೆ ನೆರವಾಗುತ್ತದೆ ಎಂಬುದರಲ್ಲಿ ನಂಬಿಕೆ ಇಲ್ಲ’. ‘ವಿಧಾನಸೌಧದಲ್ಲಿ ಕುಳಿತು ಪೋರ್ನ್​ ವಿಡಿಯೋ ನೋಡಿದವರಿಗೆ ಶಿಕ್ಷೆ ಕೊಡುವ ಬದಲು ಸರ್ಕಾರ ಅವರನ್ನ ಸಮರ್ಥಿಸಿಕೊಳ್ಳುತ್ತೆ. ಬಡವರು-ದುರ್ಬಲರನ್ನು ನೋಡಿದರೆ ಕಾನೂನುಗಳಿಗೂ ಎಲ್ಲಿಲ್ಲದ ಹುಮ್ಮಸ್ಸು ಬಂದುಬಿಡುತ್ತೆ. ಮಲ್ಲಮ್ಮನಿಗೆ ಆಕೆಯ ಕೆಲಸ ಸಿಗುವಂತಾಗಲಿ’. ಹೀಗೆ ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿ ಮಲ್ಲಮ್ಮನ ಪರ ‘ಐ ಸ್ಟ್ಯಾಂಡ್ ಯೂಥ್ ಮಲ್ಲವ್ವ’. ‘ಮಲ್ಲಮ್ಮಗೆ ಕೆಲಸ ವಾಪಸ್ ಕೊಡಿ’ ಎಂಬಿತ್ಯಾದಿ ಪೋಸ್ಟ್​ ಹಾಕಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಕೆಲ ಸಾಮಾಜಿಕ ಕಾರ್ಯಕರ್ತರು ಅಧಿಕಾರಿಗಳ ಮೇಲೆ ಹರಿಹಾಯ್ದಿದ್ದರು.
ಎಚ್ಚೆತ್ತುಕೊಂಡ ಅಧಿಕಾರಿಗಳು ಇಬ್ಬರನ್ನೂ ಶುಕ್ರವಾರದಿಂದ ಕೆಲಸಕ್ಕೆ ಸೇರಿಸಿಕೊಂಡಿದ್ದಾರೆ. ಮಲ್ಲಮ್ಮ ಹಾಗೂ ಸಾಂವಕ್ಕ ತಿಳಿಯದೇ ತಪ್ಪು ಮಾಡಿದ್ದಾರೆ. ಮುಂದೆ ಹೀಗಾಗದಂತೆ ನೋಡಿಕೊಳ್ಳಲು ತಿಳಿಸಿ, ಮತ್ತೆ ಕೆಲಸ ಕೊಡಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಅಶ್ಲೀಲ ವಿಡಿಯೋ ನೋಡಿದವರಿಗೆ ಇಲ್ಲದ ಶಿಕ್ಷೆ, ಶಾವಿಗೆ ಒಣಹಾಕಿದ ಬಡಪಾಯಿಗೇಕೆ? ಶುರುವಾಯ್ತು ಅಭಿಯಾನ

ಬೆಂಗ್ಳೂರಲ್ಲಿ ಬೆಳ್ಳಂಬೆಳಗ್ಗೆ ಮರಕ್ಕೆ ಡುಕಾಟಿ ಬೈಕ್ ಡಿಕ್ಕಿ: ಸ್ಥಳದಲ್ಲೇ ನಿವೃತ್ತ ಪೊಲೀಸ್ ಅಧಿಕಾರಿ ಪುತ್ರ-ಗೆಳತಿ ದುರ್ಮರಣ

ಪೊಲೀಸರಿಗೆ ತಲೆಬಿಸಿ ತಂದ ಅಶ್ಲೀಲ ವಿಡಿಯೋ ಪ್ರಕರಣ: ಶಿವಮೊಗ್ಗದಿಂದ ಉತ್ತರ ಕನ್ನಡಕ್ಕೆ ಹೋದರೂ ಸಿಕ್ಕಿಲ್ಲ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + eight =
Remember me
