ಧಾರವಾಡ:ನನ್ನ ಹುಟ್ಟೂರು ಧಾರವಾಡ. ತಾಯಿಯ ಅಸ್ಪಷ್ಟ ಮುಖ, ಎಮ್ಮೆ ಹಾಲು ಕುಡಿಯೋದು, ಓರ್ವ ವೃದ್ಧ, ಪೊಲೀಸರ ಮುಂದೆ ಅಳುತ್ತಾ ನಾನು ನಿಂತಿದ್ದ ದೃಶ್ಯವಷ್ಟೇ ನೆನಪಿದೆ. ನನ್ನ ಬಾಲ್ಯದ ಫೋಟೋವೊಂದು ಇದೆ. ಅದನ್ನು ಬಿಟ್ಟರೆ ನನ್ನ ಬಳಿ ಬೇರೆ ದಾಖಲೆಗಳಿಲ್ಲ. ಪ್ಲೀಸ್​ ನನ್ನ ಮೂಲ ಯಾವುದೆಂದು ಹುಡುಕಲು ಸಹಕರಿಸಿ. ಪಾಲಕರು, ಸಂಬಂಧಿಕರು ಯಾರಾದರೂ ಇದ್ದಾರೆ ತಿಳಿಸಿ, ಅವರನ್ನು ನಾನು ಸೇರಬೇಕು, ನೋಡಬೇಕು ಎಂದು ನನ್ನ ಮನ ಹಂಬಲಿಸುತ್ತಿದೆ….
ಇದು ಸ್ವೀಡನ್​ ಪ್ರಜೆ ಪಂತು ಜೋಹಾನ್ ಪಾಮ್ಕ್ವಿಸ್ಟ್ ಎಂಬಾತ ಬೇಡಿಕೊಳ್ಳುತ್ತಿರುವ ಪರಿ. ಚಿಕ್ಕ ವಯಸ್ಸಿನ್ನಲ್ಲೇ ಧಾರವಾಡದ ಅನಾಥಾಶ್ರಮದಿಂದ 40 ವರ್ಷದ ಹಿಂದೆ ಸ್ವೀಡನ್​ ಮೂಲದ ದಂಪತಿ ಪಂತುವನ್ನ ದತ್ತು ಪಡೆದಿದ್ದರು. ಸದ್ಯ ಪಂತುಗೆ 44 ವರ್ಷ ವಯಸ್ಸು. ಸ್ವೀಡನ್‌ನಲ್ಲಿ ಚಿತ್ರಕಲಾವಿದ ಆಗಿರುವ ಪಂತುಗೆ ತನ್ನ ಮೂಲ ನೆನಪಾಗಿದೆ. ಚಿಕ್ಕ ವಯಸ್ಸಿನಲ್ಲೇ ಪಾಲಕರಿಂದ ಮಿಸ್ಸಿಂಗ್​ ಆಗಿದ್ದ ಪಂತುವನ್ನ ಪೊಲೀಸರು ಅನಾಥಾಶ್ರಮಕ್ಕೆ ಸೇರಿಸಿದ್ದರು. ಅನಾಥಾಶ್ರಮದಿಂದ ಸ್ವೀಡನ್ ದಂಪತಿ ಬಾಲಕ ಪಂತುನನ್ನು ದತ್ತು ಪಡೆದು ಸ್ವೀಡನ್​ಗೆ ಕರೆದೊಯ್ದಿದ್ದರು.
Right now I´m searshing for any relatives in India. I was adopted to Sweden 40 years a go. I was found in Dharwhad Karnataka at a busstop 43 years ago and I told the police my name was Pantu.
— Pantu (@ManPantu)January 15, 2022

ಇದೀಗ ಪಂತುಗೆ ಮೂಲ ಪಾಲಕರ ನೆನಪು ಕಾಡುತ್ತಿದೆ. ತನ್ನ ಬಾಲ್ಯದ ಫೋಟೋ ಸಮೇತ ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಪಂತು, ನನ್ನ ಬಳಿ ದಾಖಲೆಗಳಿಲ್ಲ. ಇದೊಂದೇ ಫೋಟೋ ಇರೋದು. ನನ್ನವರು ಯಾರಾದ್ರೂ ಇದ್ರೆ ಪ್ಲೀಸ್​ ನನ್ನ ಮೂಲ ತಿಳಿಸಿ, ಸಹಾಯಕ್ಕೆ ಬನ್ನಿ. ನಾನು ಧಾರವಾಡದವ. ತಾಯಿಯ ಅಸ್ಪಷ್ಟ ಮುಖ, ಎಮ್ಮೆ ಹಾಲು ಕುಡಿಯೋದು, ಓರ್ವ ವೃದ್ಧ, ಪೊಲೀಸರ ಮುಂದೆ ಅಳುತ್ತ ನಾನು ನಿಂತ ನೆನಪು ಮಾತ್ರ ಇದೆ… ಎಂದು ಅಳಲು ತೋಡಿಕೊಳ್ಳುತ್ತಾ ಸೋಶಿಯಲ್ ಮೀಡಿಯಾ ಮೂಲಕ ತನ್ನವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
Al help would be appriciated.Pleas share/retweet this post.
Many thanks Pantu.pic.twitter.com/8GmHC3enYZ
— Pantu (@ManPantu)January 15, 2022

ಪಿಎಂ ಮತ್ತು ಸಿಎಂ ಕಚೇರಿಗೂ ಪೋಸ್ಟ್ ಟ್ಯಾಗ್ ಮಾಡಿದ್ದಾರೆ. ಈ ಹಿನ್ನೆಲೆ ಪಂತುವಿನ ಮೂಲ ಹುಡುಕುವಂತೆ ಧಾರವಾಡ ಎಸ್ಪಿಗೆ ಮೇಲಧಿಕಾರಿಗಳಿಂದ ಸೂಚನೆ ಬಂದಿದೆ.
ಬೆಂಗ್ಳೂರಲ್ಲಿ ವೈಫ್ ಸ್ವಾಪಿಂಗ್ ದಂಧೆ: ತನ್ನ ಪತ್ನಿ ಜತೆ ಪರಪುರುಷರ ಸಮ್ಮಿಲನ ಮಾಡಿಸಿ ಲೈವ್ ವಿಡಿಯೋ ಮಾಡಿ ಖುಷಿ ಪಡ್ತಿದ್ದ ಗಂಡ!

ಮಗಳ ಜತೆ ತಾಯಿ ಆತ್ಮಹತ್ಯೆ! 10 ದಿನದ ಹಿಂದೆ ವಿದ್ಯಾರ್ಥಿನಿಯೊಬ್ಬಳ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡದ್ದೇ ಮುಳುವಾಯ್ತಾ?

ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳನ್ನು ಹೊರದಬ್ಬಿದ ಕಾಲೇಜು ಆಡಳಿತ ಮಂಡಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
