ಬೆಂಗಳೂರು:ತುರಹಳ್ಳಿ ಫಾರೆಸ್ಟ್ ಬಳಿ ಸುಟ್ಟುಕರಕಲಾಗಿದ್ದ ಸ್ಥಿತಿಯಲ್ಲಿ ಮಾ.26ರಂದು ಪತ್ತೆಯಾಗಿದ್ದ ಅಪರಿಚಿತ ಶವ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ.
ಮಾ. 25ರಂದು ತುರಹಳ್ಳಿ ಅರಣ್ಯಕ್ಕೆ ಬೆಂಕಿ ಬಿದ್ದು ಅಪಾರ ಪ್ರಮಾಣದ ವನ ಸಂಪತ್ತು ಬೆಂಕಿಗೆ ಆಹುತಿಯಾಗಿತ್ತು. ಇದೇ ಜಾಗದಲ್ಲಿ ವ್ಯಕ್ತಿಯೊಬ್ಬನ ಶವ ಸಿಕ್ಕಿತ್ತು. ಮೇಲ್ನೋಟಕ್ಕೆ ಬೆಂಕಿ ಅವಘಡದಲ್ಲಿ ಸತ್ತಿರುವಂತೆ ಕಂಡರೂ ಅಲ್ಲಿ ಸಿಕ್ಕ ಬ್ಯಾನರ್​ನಿಂದ ಬೆಚ್ಚಿಬೀಳಿಸೋ ಕೊಲೆ ರಹಸ್ಯ ಬಯಲಾಗಿದೆ.ಇದನ್ನೂ ಓದಿರಿಕಾರಿನಲ್ಲಿ ಬಂದ ಜವರಾಯ ಪಾತ್ರೆ ತೊಳೆಯುತ್ತಿದ್ದ ಅಜ್ಜಿಯ ಪ್ರಾಣ ಹೊತ್ತೊಯ್ದ!
ಮೃತದೇಹದ ಬಳಿ ಬನಶಂಕರಿ ಜನರಲ್ ಸ್ಟೋರ್ ಹೆಸರಿನ ಬ್ಯಾನರ್ ಬಿದ್ದಿತ್ತು. ಅದರ ಪ್ರಿಂಟಿಂಗ್ ಪ್ರೆಸ್ ವಿಳಾಸ ಪತ್ತೆ ಹಚ್ಚಿದ ಪೊಲೀಸರು, ಯಾವೆಲ್ಲ ಏರಿಯಾಗಳಿಗೆ ಬ್ಯಾನರ್ ಸರಬರಾಜು ಆಗಿದೆ ಅನ್ನೋದರ ಮಾಹಿತಿ ಕಲೆ ಹಾಕಿದಾಗ ಗೊತ್ತಾಯ್ತು ಸುಟ್ಟು ಕರಕಲಾದ ಸ್ಥಿತಿಯಲ್ಲಿದ್ದ ಅಪರಿಚಿತ ಶವದ ಗುರುತು.
ಮೃತನು ವಿಜಯನಗರದ ಹಗರಿಬೊಮ್ಮನಹಳ್ಳಿಯ ಅಮೀತ್​. ಈತ ರಿಯಲ್‌ ಎಸ್ಟೇಟ್ ಎಜೆನ್ಸಿಯಲ್ಲಿ ಸೂಪರ್ ವೈಸರ್ ಆಗಿದ್ದ ಅಮೀತ್. ಈತನ ಕೈಕೆಳಗೆ ಕೆಲಸ ಮಾಡುತ್ತಿದ್ದ ನಾಗರಾಜ್​ ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲು ಅಮೀತ್ ಹತ್ಯೆಯ ಮಾಸ್ಟರ್ ಪ್ಲಾನ್ ರೂಪಿಸಿದ್ದ ನಾಗರಾಜ್​, ಕೊಂದ ಬಳಿಕ ಅಮೀತ್​ನ ಕೆಲಸ ಗಿಟ್ಟಿಸಿಕೊಳ್ಳಲು ಮತ್ತು ಆತನ ಕಾರನ್ನು ಮಾರಾಟ ಮಾಡಲು ಯೋಜನೆ ರೂಪಿಸಿದ್ದ.ಇದನ್ನೂ ಓದಿರಿಅವ್ವ-ಅಜ್ಜಿ ಜತೆ ಮದುವೆ ಮಾತುಕತೆಗೆ ಬಂದವ ಅಕ್ಕ-ತಂಗಿ ಮೇಲೆ ಮಚ್ಚುಬೀಸಿದ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ
ಅಮೀತ್​ನನ್ನು ಕೊಲೆ ಮಾಡಿ ಕಾರಿನ ನಂಬರ್ ಪ್ಲೇಟ್ ಬದಲಾಯಿಸಿದ್ದ. ಗೋವಾ ರಿಜಿಸ್ಟರ್ ನಂಬರ್ ಹಾಕಿ ಗೋವಾದಲ್ಲಿ ಕಾರು ಮಾರಾಟ ಮಾಡುತ್ತಿದ್ದ ಓರ್ವನನ್ನು ಬಂಧಿಸಿದ ಬಳಿಕ ಕೊಲೆ ವೃತ್ತಾಂತ ಬೆಳಕಿಗೆ ಬಂದಿದೆ. ಗೋವಾ ಡೀಲರ್​ಗಳಿಗೆ ಆಡಿ ಕಾರು ನೀಡುವುದಾಗಿ ನಾಗರಾಜ್ ಮಾಹಿತಿ ನೀಡಿದ್ದ. ಅಮೀತ್ ಕೊಲೆ ಟ್ರೇಸ್ ಬಳಿಕ ಶಶಿಕುಮಾರ್ ಹತ್ಯೆಯ ಪ್ಲಾನ್ ಲೀಕ್ ಆಗಿದ್ದು, ಕೂದಲೆಳೆ ಅಂತರದಲ್ಲಿ ಅವರ ಪ್ರಾಣ ಉಳಿದಿದೆ.
ಅಮೀತ್ ಕೆಲಸ ಮಾಡುತ್ತಿದ್ದ ರಿಯಲ್​ ಎಸ್ಟೇಟ್​ ಏಜೆನ್ಸಿ ಮಾಲೀಕ ಶಶಿಕುಮಾರ್​. ಇವರ ಬಳಿ ಆಡಿ ಕಾರಿದೆ. ಇದರ ಮೇಲೂ ನಾಗರಾಜ್​ ಕಣ್ಣುಬಿದ್ದಿತ್ತು ಎಂದು ತನಿಖೆಯಲ್ಲಿ ಬಯಲಾಗಿದೆ. ಅಮೀತ್ ಕೊಲೆ ಕೇಸ್​ ಸಂಬಂಧ ನಾಗರಾಜ್, ಮಂಜುನಾಥ್, ಅರುಣ್, ರಾಮ್​ ಅಲಿಯಾಸ್​ ಪರಶುರಾಮ ಹಾಗೂ ಓರ್ವ ಬಾಲಾಪರಾಧಿ ಸೇರಿ ಐವರನ್ನ ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ.
ಗಂಡನ ಕುತ್ತಿಗೆ ಮೇಲೆ ಕಾಲಿಟ್ಟು ಉಸಿರು ನಿಲ್ಲಿಸಿದ ಪತ್ನಿ! ಮಕ್ಕಳು ಇಲ್ಲದ ವೇಳೆ ಆ ರಾತ್ರಿ ನಡೆಯಿತು ದುರಂತ

ಅವ್ವ-ಅಜ್ಜಿ ಜತೆ ಮದುವೆ ಮಾತುಕತೆಗೆ ಬಂದವ ಅಕ್ಕ-ತಂಗಿ ಮೇಲೆ ಮಚ್ಚುಬೀಸಿದ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 8 =
Remember me
