ಬೆಂಗಳೂರು:ಪ್ರೀತ್ಸೋದ್​ ತಪ್ಪಾ? ನನ್ನ ಪ್ರಿಯಕರ ಸತೀಸ್​ ಜತೆ ಹಾಲಸ್ವಾಮಿ ಮಠದಲ್ಲಿ ಮದುವೆಯಾಗಿರುವೆ. ಈ ವಿಚಾರ ಗೊತ್ತಾಗಿ ನನ್ನ ಮನೆಯವರಿಂದಲೇ ನನಗೆ ಪ್ರಾಣ ಬೆದರಿಕೆ ಇದೆ. ಪ್ಲೀಸ್​ ರಕ್ಷಣೆ ಕೊಡಿ ಎಂದು ಸಚಿವರ ಪುತ್ರಿಯೊಬ್ಬಳು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಮೊರೆ ಹೋಗಿದ್ದಾಳೆ.
ಇದು ಸಿನಿಮಾ ಕಥೆಯನ್ನೂ ಮೀರಿಸುವ ಸ್ಟೋರಿ. ತಮಿಳುನಾಡಿನ ಲವ್​ ಕಹಾನಿ ಕರುನಾಡಿಗೆ ಎಂಟ್ರಿ ಆಗಿದೆ. ತಮಿಳುನಾಡಿನ ಮುಜುರಾಯಿ ಸಚಿವ ಶೇಖರ್​ಬಾಬು ಅವರ ಮಗಳು ಜಯಕಲ್ಯಾಣಿ ಬೆಂಗಳೂರು ನಗರ ಪೊಲೀಸ್​ ಕಮಿಷನರ್​ಗೆ ದೂರಿನ ಪತ್ರ ಕೊಟ್ಟಿದ್ದಾರೆ. ನನಗೆ ತಮಿಳುನಾಡಿನ ಸರ್ಕಾರ ಮತ್ತು ಪೊಲೀಸರಿಂದ ನಮಗೆ ನ್ಯಾಯ ಸಿಗುತ್ತೆ ಎಂಬ ನಂಬಿಕೆ ಇಲ್ಲ. ದಯವಿಟ್ಟು ನಮಗೆ ಜೀವ ಬೆದರಿಕೆ ಇದೆ. ನಮಗೆ ರಕ್ಷಣೆ ಕೊಡಿ ಎಂದು ಕರ್ನಾಟಕ ಪೊಲೀಸರಿಗೆ ಮನವಿ ಮಾಡಿದ್ದಾರೆ. ರಕ್ಷಣೆಗಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ.
ನಾನು ಎಂಬಿಬಿಎಸ್​ ಮಾಡಿದ್ದು, ಸತೀಶ್​ ಡಿಪ್ಲೊಮಾ ಓದಿದ್ದಾರೆ. ನಾವಿಬ್ಬರೂ 6 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದೆವು. ಆದರೆ ನಮ್ಮಿಬ್ಬರ ಪ್ರೀತಿಗೆ ಕುಟುಂಬಸ್ಥರಿಂದ ಒಪ್ಪಿಗೆ ಸಿಗಲಿಲ್ಲ. ಶ್ರೀಮಂತ ಹುಟುಗನ ಜತೆ ಮದ್ವೆ ಮಾಡಲು ನನ್ನ ತಂದೆ ಯತ್ನಿಸಿದರು. ಪ್ರೀತಿಸಿದ ಹುಡುಗನ ಬಿಟ್ಟು ಹೇಗೆ ಬದುಕಲಿ? ಅದಕ್ಕೆ ನಾನು ಮನೆಯವರ ವಿರೋಧದ ನಡುವೆಯೂ ಹಾಲಸ್ವಾಮಿ ಮಠದಲ್ಲಿ ಸತೀಶ್ ಜತೆ ಮದುವೆ ಆದೆ. ಇದಾದ ಬಳಿಕ ಸತೀಶ್​ ಮೇಲೆ ಹಾಗೂ ಅವರ ಸಂಬಂಧಿಕರ ವಿರುದ್ಧ ಸುಳ್ಳು ಕೇಸ್​ಗಳನ್ನು ದಾಖಲಿಸಿ ಹಿಂಸಿಸುತ್ತಿದ್ದಾರೆ. ನಮಗೆ ಜೀವ ಬೆದರಿಕೆಯೂ ಇದೆ. ನಮಗೆ ತಮಿಳುನಾಡು ಸರ್ಕಾರದ ಮೇಲೆ ನಂಬಿಕೆ ಇಲ್ಲ. ಯಾಕಂದ್ರೆ ನನ್ನ ತಂದೆ ಸಿಎಂ ಸ್ಟಾಲಿನ್​ರ ಸಂಪುಟದಲ್ಲಿ ಪ್ರಭಾವಿ ಸಚಿವ. ಅಧಿಕಾರ ಬಳಸಿ ನಮಗೆ ತೊಂದರೆ ಕೊಡುತ್ತಾರೆ. ಅಲ್ಲಿನ ಪೊಲೀಸ್​ ಮೇಲೆ ನಂಬಿಕೆ ಇಲ್ಲ. ದಯವಿಟ್ಟು ನೀವಾದ್ರೂ ನಮಗೆ ರಕ್ಷಣೆ ಕೊಡಿ ಎಂದು ಕರ್ನಾಟಕ ಪೊಲೀಸರಿಗೆ ವಿಡಿಯೋ ಮೂಲಕ ಕೈ ಮುಗಿದು ಬೇಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ಕಮಿಷನರ್​ ಭೇಟಿಯಾಗಲು ಬೆಂಗಳೂರಿಗೂ ಆಗಮಿಸಿದ್ದಾರೆ.
ಇಂದಿನಿಂದ 3 ದಿನ ಕರ್ನಾಟಕದ ಹಲವೆಡೆ ಮಳೆ! ತಮಿಳುನಾಡು, ಕೇರಳದಲ್ಲೂ ಮಳೆ

ಇನ್ನು 2 ತಿಂಗಳು ಕಳೆದಿದ್ರೆ ಡಾಕ್ಟರ್ ಆಗಿ ತಾಯ್ನಾಡಿಗೆ ಬರ್ತಿದ್ದೆ.. ಭಾರತೀಯ ರಾಯಭಾರ ಕಚೇರಿಯವರೇ ಓಡಿ ಹೋಗಿದ್ದಾರೆ…

ಯೂಕ್ರೇನ್​ ಅಧ್ಯಕ್ಷರಿಗೆ ಕರೆ ಮಾಡಿದ ಪ್ರಧಾನಿ ಮೋದಿ: ಆ 35 ನಿಮಿಷದ ಮಾತುಕತೆ ಏನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
