ಚಿಕ್ಕಮಗಳೂರು:ಕರೊನಾ ಹಿನ್ನೆಲೆ ಮಕ್ಕಳು ಶಾಲೆಗೆ ಬಾರದೆ ಒಂದು ವರ್ಷ ಕಳೆದಿದೆ. ಹಾಗಾಗಿ ಇಲ್ಲೊಬ್ಬ ಶಿಕ್ಷಕಿ ತನ್ನ ಶಾಲೆಯ ಎಲ್ಲ ಮಕ್ಕಳಿಗೂ ಕಾಗದ ಬರೆದು ಯೋಗಕ್ಷೇಮ ವಿಚಾರಿಸಿದ್ದಾರೆ. ಟೀಚರ್​ ಕಳುಹಿಸಿದ ಪತ್ರ ಕೈಸೇರುತ್ತಿದ್ದಂತೆ ಮಕ್ಕಳ ಮೊಗದಲ್ಲಿ ಅಚ್ಚರಿ ಜತೆಗೆ ಖುಷಿ ಮೂಡಿದೆ.
ಚಿಕ್ಕಮಗಳೂರಿನ ಅಲ್ದೂರು ಸಮೀಪದ ಯಲಗುಡಿಗೆ ಗ್ರಾಮದ ಪ್ರಾಥಮಿಕ ಶಾಲೆ ಶಿಕ್ಷಕಿ ಗೀತಾ ಅವರು ಮಕ್ಕಳ ವಿಳಾಸಕ್ಕೆ ಪತ್ರ ಬರೆದು ಯೋಗ ಕ್ಷೇಮ ವಿಚಾರಿಸಿದ್ದಾರೆ. ಪ್ರತಿಯೊಬ್ಬರ ಮನೆಯಲ್ಲಿ ಮೊಬೈಲ್​ ಇದ್ದರೂ ಪತ್ರ ಪರೆದು ಶಿಕ್ಷಕಿ ಪೋಸ್ಟ್​ ಮಾಡಿದ್ದರು. ಮಕ್ಕಳ ಹೆಸರಲ್ಲಿ ಮನೆಗೆ ಪತ್ರ ತಲುಪುತ್ತಿದ್ದಂತೆ, ಕುತೂಹಲದಿಂದಲೇ ಮನೆಯವರು ತೆರೆದು ನೋಡಿದ್ದು, ಮಕ್ಕಳಿಗಾಗಿ ಶಿಕ್ಷಕಿ ಕಾಗದ ಬರೆದಿದ್ದಾರೆ ಎಂದು ಪಾಲಕರೂ ಸಂತಸಗೊಂಡಿದ್ದಾರೆ. ಮಕ್ಕಳು ಆ ಪ್ತರವನ್ನ ಓದುತ್ತಾ, ಸ್ನೇಹಿತರಿಗೂ ತೋರಿಸಿಕೊಂಡು ಪರಸ್ಪರ ಖುಷಿಪಟ್ಟಿದ್ದಾರೆ.

ಈ ಕುರಿತು ಮಾತಾನಡಿದ ಶಿಕ್ಷಕಿ ಗೀತಾ, ಪತ್ರ ತಲುಪುತ್ತಿದ್ದಂತೆ ಮಕ್ಕಳು, ಅವರ ಪಾಲಕರು ನನಗೆ ಫೋನ್​ ಮಾಡಿ ಖುಷಿ ಹಂಚಿಕೊಳ್ಳುತ್ತಿದ್ದಾರೆ. ನಮ್ಮ ಕಾಲದಲ್ಲಿ ಪತ್ರ ಎಂಬುದು ಸಂವಹನದ ಪ್ರಮುಖ ಸಾಧನ ಆಗಿತ್ತು. ಇಂದಿನ ಕಾಲದಲ್ಲಿ ಬಹುತೇಕ ಮಕ್ಕಳಿಗೆ ಪತ್ರ ಬರೆದು ಹೇಗೆ ಪೋಸ್ಟ್​ ಮಾಡಬೇಕು ಎಂಬುದೇ ಗೊತ್ತಿಲ್ಲ. ಹಾಗಾಗಿ ನಾನು ಪತ್ರವನ್ನೇ ಬಳಸಿದೆ. ಇದಕ್ಕೆ ಶಿಕ್ಷಣ ಸಚಿವರ ಮಾತುಗಳೇ ಪ್ರೇರಣೆ ಎಂದರು.
ಬೆತ್ತಲೆ ಸ್ಥಿತಿಯಲ್ಲೇ ಕಂಬದಲ್ಲಿ ನೇತಾಡುತ್ತಿದ್ದ ಮಹಿಳೆ! ಬೆಳ್ಳಂಬೆಳಗ್ಗೆ ನಡೆದ ಈ ಕೃತ್ಯ ಕೇಳಿದ್ರೆ ಬೆಚ್ಚಿಬೀಳ್ತೀರಿ

ಪ್ರಿಯಕರನ ಜತೆಗೂಡಿ ಗಂಡನನ್ನು ಕೊಂದು ಬೆಡ್​ ರೂಂನಲ್ಲೇ ಸುಟ್ಟುಹಾಕಿದ ಪತ್ನಿ! ವಾರದ ಬಳಿಕ ಬಯಲಾಗಿದ್ದೇ ರೋಚಕ

ಲೈಂಗಿಕ ಕ್ರಿಯೆಗೆ ಸಹಕರಿಸದ ಪತ್ನಿಯ ಹತ್ಯೆ! ‘ಕಾಮ’ದಾಹ ತೀರದ ಸಿಟ್ಟಿಗೆ ಮೂರು ಮಕ್ಕಳನ್ನ ನಾಲೆಗೆ ಎಸೆದ

ಅತ್ತ ಪ್ರಿಯಕರನೊಂದಿಗೆ ಓಡಿ ಹೋದ ಮಗಳು, ಇತ್ತ ತೋಟದ ಮನೆಯಲ್ಲಿ ನಡೆಯಿತು ಘನಘೋರ ದುರಂತ!

ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಕಾರಿನಲ್ಲಿದ್ದ ಮೂವರು ಸಜೀವ ದಹನ, ಇಬ್ಬರ ಸ್ಥಿತಿ ಗಂಭೀರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + three =
Remember me
