ವಿಜಯಪುರ:ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ಶಿಕ್ಷಕರ ನೇಮಕಾತಿಯಲ್ಲಿನ ಅಕ್ರಮದ ನಂಟು ಇದೀಗ ಗುಮ್ಮಟ ನಗರಿ ಖ್ಯಾತಿಯ ವಿಜಯಪುರಕ್ಕೂ ಅಂಟಿದ್ದು, ಮೂವರು ಶಿಕ್ಷಕರನ್ನು ಸಿಐಡಿ ವಿಚಾರಣೆಗೆ ಒಳಪಡಿಸಲಾಗಿದೆ.
ಕೆಲ ದಿನಗಳ ಹಿಂದಷ್ಟೇ ಇಬ್ಬರು ಶಿಕ್ಷಕರನ್ನು ವಿಚಾರಣೆಗೆ ಕರೆದೊಯ್ದಿದ್ದ ಸಿಐಡಿ ಅಧಿಕಾರಿಗಳು ಇದೀಗ ಅಂದರೆ ಸೆ. 19ರಂದು ಸಂಜೆ ಮತ್ತೋರ್ವನನ್ನು ವಶಕ್ಕೆ ಪಡೆದಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಎಫ್‌ಐಆರ್ ಪ್ರತಿ ತರಲು ಸಿಐಡಿ ಅಧಿಕಾರಿಗಳ ಬಳಿ ತೆರಳಲು ಸನ್ನದ್ಧರಾಗಿದ್ದಾರೆ.
ಯಾರು ಆ ಶಿಕ್ಷಕ?:ಬಸವನಬಾಗೇವಾಡಿ ತಾಲೂಕಿನ ಭೈರವಾಡಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಅಶೋಕ್ ಚವಾಣ್ ಸಿಐಡಿ ವಿಚಾರಣೆಗೆ ಒಳಪಟ್ಟ ಶಿಕ್ಷಕ.
ಮೂಲತಃ ವಿಜಯಪುರ ನಗರದಲ್ಲಿ ವಾಸವಾಗಿರುವ ಇವರು ಆರಂಭದಲ್ಲಿ ಚಿತ್ರದುರ್ಗ ಜಿಲ್ಲೆಯ ಜಗಳೂರಿನಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ ಬಸವನಬಾಗೇವಾಡಿಯ ಭೈರವಾಡಗಿಗೆ ವರ್ಗವಾಗಿ ಬಂದಿದ್ದರು. ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆದ ವಿಚಾರವಾಗಿ ಇವರನ್ನು ವಿಚಾರಣೆಗೆ ಒಳಪಡಿಸುತ್ತಿರುವುದಾಗಿ ಶಾಲೆ ಮುಖ್ಯಸ್ಥರಿಗೆ ಮಾಹಿತಿ ನೀಡಿ ಕರೆದೊಯ್ಯಲಾಗಿದೆ.
ಇದಕ್ಕೂ ಮೊದಲು ಕಪನಿಂಬರಗಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಸಿದ್ರಾಮಪ್ಪ ಬಿರಾದಾರ ಹಾಗೂ ಹತ್ತಳ್ಳಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಮಹೇಶ ಸುಸಲಾದಿ ಸಿಐಡಿ ವಿಚಾರಣೆಗೆ ಒಳಪಟ್ಟಿದ್ದಾರೆ.
ಇನ್ನೂ ಒಬ್ಬ ಮಹಿಳೆ ಇದ್ದು ಆ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಸಿಐಡಿ ಅಧಿಕಾರಿಗಳಿಂದ ಶಿಕ್ಷಣ ಇಲಾಖೆಗೆ ಈವರೆಗೆ ಎಫ್‌ಐಆರ್ ಪ್ರತಿ ಬಂದಿಲ್ಲ. ತಾವೇ ಖುದ್ದಾಗಿ ಭೇಟಿ ನೀಡಿ ದೂರಿನ ಪ್ರತಿ ತಂದು ಕ್ರಮ ಕೈಗೊಳ್ಳುವುದಾಗಿ ಡಿಡಿಪಿಐ ಮಹೇಶ ಶಿರಹಟ್ಟಿಮಠ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
‘PAYCM’ ಕಾಂಗ್ರೆಸ್ ಅಭಿಯಾನಕ್ಕೆ ಬಿಜೆಪಿ ಕೌಂಟರ್: ಸಿದ್ದು-ಡಿಕೆಶಿ ಫೋಟೋ ಹಾಕಿ ಅಣಕಿಸಿದ ಕಮಲಪಡೆ

ನಾಳೆ ಬಯಲಾಗಲಿದೆ ಸಚಿವರೊಬ್ಬರ ಅಕ್ರಮ: ಏಕವಚನದಲ್ಲಿ ಮಾತಾಡಿ ಎಚ್​ಡಿಕೆಯನ್ನು ಕೆಣಕಿದ ಸಚಿವರಿಗೆ ಕಾದಿದ್ಯಾ ಗಂಡಾಂತರ?

ಆನೇಕಲ್​ನ ಮನೆಯೊಂದರಲ್ಲಿ ಮಂಡ್ಯ ಮೂಲದ ಪ್ರೇಮಿಗಳಿಬ್ಬರ ಶವ ಪತ್ತೆ! ಆ ದಿನ ನಡೆದಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 9 =
Remember me
