ಬೆಂಗಳೂರು:ವಾರದಿಂದ ಮಳೆ ಮತ್ತು ತೇವಾಂಶ ಕೊರತೆ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉಷ್ಣಾಂಶ ದಿಢೀರ್ ಏರಿಕೆಯಾಗಿದೆ.
ಬೆಂಗಳೂರು, ಮಂಡ್ಯ, ಮೈಸೂರು, ಮಂಗಳೂರು, ಕಲಬುರಗಿ, ಬೀದರ್, ಗದಗ, ರಾಯಚೂರು ಮತ್ತು ವಿಜಯಪುರದಲ್ಲಿ ಗರಿಷ್ಠ ತಾಪಮಾನದಲ್ಲಿ ಆಗಸ್ಟ್ 2ನೇ ವಾರದಲ್ಲಿದ್ದ 22-24 ಡಿಗ್ರಿ ಸೆಲ್ಸಿಯಸ್‌ನಿಂದ 30-32 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ. ತಿಳಿ ವಾತಾವರಣ ಇರುವುದರಿಂದ ಬೇಸಿಗೆಗಾಲದಂತೆ ಭಾಸವಾಗುತ್ತಿದೆ. ಕನಿಷ್ಠ ತಾಪಮಾನದಲ್ಲಿ ಉಷ್ಣಾಂಶ ಯಥಾಸ್ಥಿತಿ ಮುಂದುವರಿದಿದೆ.
ಪ್ರಸ್ತುತ ತಿಂಗಳು ಮೊದಲ ವಾರದಲ್ಲಿ ರಾಜ್ಯಾದ್ಯಂತ ಭಾರಿ ಮಳೆಯಾಗಿತ್ತು. ಇದರಿಂದ ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ ಉಷ್ಣಾಂಶ ಇಳಿಕೆಯಾಗಿತ್ತು. ಮಳೆ ಬಿಡುವು ಕೊಟ್ಟಿದ್ದರಿಂದ ತಾಪಮಾನ ಏರಿಕೆಗೆ ಕಾರಣವಾಗಿದೆ. ಗುರುವಾರ ಮಂಡ್ಯ, ಮೈಸೂರು, ರಾಯಚೂರು ಮತ್ತು ಕಲಬುರಗಿಯಲ್ಲಿ ಗರಿಷ್ಠ ತಾಪಮಾನದಲ್ಲಿ ತಲಾ 32 ಡಿಗ್ರಿ, ವಿಜಯಪುರ, ಬೀದರ್, ಬೆಂಗಳೂರು ಹಾಗೂ ಮಂಗಳೂರಿನಲ್ಲಿ 30 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಶೇ.56 ಮಳೆ ಕೊರತೆ:ಆ.12ರಿಂದ ಆ.18ರವರೆಗೆ ರಾಜ್ಯಾದ್ಯಂತ 55 ಮಿ.ಮೀ. ಮಳೆಯಾಗಬೇಕಿತ್ತು. ಆದರೆ. 24 ಮಿಮೀ ಮಳೆಯಾಗಿದ್ದು, ಶೇ.56 ವಾಡಿಕೆಗಿಂತ ಕಡಿಮೆ ಮಳೆ ಬಿದ್ದಿದೆ. ಬೆಳಗಾವಿ ಹೊರತುಪಡಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮಳೆ ಕುಂಠಿತವಾಗಿದೆ.ರಾಗಿ ಸೇರಿ ಇತರೆ ಬೀಜಗಳನ್ನು ಬಿತ್ತಿದ ರೈತರು ಕಂಗಾಲಾಗಿದ್ದಾರೆ. ಮುಂದಿನ ಒಂದು ವಾರದವರೆಗೆ ಮಳೆ ಕೊರತೆ ಕಾಡಲಿದೆ. ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ಮಳೆಗೆ ಸಂಬಂಧಿತ ವಾಯುಭಾರ ಕುಸಿತ ಹಾಗೂ ಮೇಲ್ಮೈ ಸುಳಿಗಾಳಿ ಸೇರಿ ಪೂರಕ ವಾತಾವರಣ ಉಂಟಾಗುತ್ತಿಲ್ಲ. ಇದರಿಂದ ಮಳೆ ಕುಂಠಿತವಾಗಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ.
ದಕ್ಷಿಣ ಒಳನಾಡು, ಉತ್ತರ ಒಳನಾಡು ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಬಿಸಿಲು ವಾತಾವರಣ ಇರಲಿದೆ. ಕರಾವಳಿ ಭಾಗದಲ್ಲಿ ಸ್ವಲ್ಪ ಮೋಡಗಳು ಇರುವುದರಿಂದ ಸಾಧಾರಣ ಮಳೆ ಬೀಳಬಹುದು. ಹಿಂದೂ ಮಹಾಸಾಗರದಿಂದ ಅರಬ್ಬಿ ಸಮುದ್ರ ಮೂಲಕ ಮೋಡಗಳು ರಾಜ್ಯಕ್ಕೆ ಆಗಮನವಾದರೆ ಮಳೆ ಬರುವುದಕ್ಕೆ ಪೂರಕ ವಾತಾವರಣ ಸೃಷ್ಟಿಯಾಗಬಹುದು.|ಎಂ.ಬಿ.ರಾಜೇಗೌಡಹವಾಮಾನ ವೈಪರಿತ್ಯ ವಿಜ್ಞಾನಿ
ಮಿನಿಷ್ಟ್ರು ಬಂದ್ರೂ ಮೇಷ್ಟ್ರು ಬರಲಿಲ್ಲ! ಬಿ.ಸಿ.ನಾಗೇಶ್ ಎದುರೇ ಅವ್ಯವಸ್ಥೆ ಬಯಲು, ಶಿಕ್ಷಕರಿಗೆ ನೋಟಿಸ್ ಜಾರಿ

PSI ಆಗುವ ಕನಸು ಕಂಡಿದ್ದ ಬೆಂಗ್ಳೂರಿನ ಯುವಕ ಕಳ್ಳನಾದ! ಇಂಜಿನಿಯರಿಂಗ್​ನಲ್ಲಿ ಟಾಪರ್ ಆಗಿದ್ದವ ದಾರಿ ತಪ್ಪಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
