ಚಿಕ್ಕಬಳ್ಳಾಪುರ:ಕರೊನಾ ಹೆಸರು ಕೇಳಿದ್ರೆ ಸಾಕು ಜನ ಮಾರುದ್ದ ಓಡಿ ಹೋಗ್ತಾರೆ. ಆಪ್ತರಿಗೆ ಸೋಂಕು ತಗುಲಿದೆ ಎಂಬ ವಿಷಯ ಗೊತ್ತಾದರೂ ಅವರತ್ತ ಸುಳಿಯುವುದೇ ಇಲ್ಲ. ಹಲವರು ದೇವರೇ ಕರೊನಾ ಮಹಾಮಾರಿಯಿಂದ ನಮ್ಮನ್ನು ರಕ್ಷಿಸು, ಸೋಂಕು ತಾಗದಂತೆ ಕಾಪಾಡು ಎಂದು ನಿತ್ಯ ಪ್ರಾರ್ಥಿಸುತ್ತಿದ್ದಾರೆ. ಆದರೆ ಇವರು ಮಾತ್ರ ತಮಗೆ ಕರೊನಾ ಸೋಂಕು ಬರಲಿ ಎಂದು ಪ್ರಾರ್ಥಿಸಿದ್ದಾರೆ!
ಅಯ್ಯೋ ಅವರಿಗೇನಾಯ್ತು? ದೇಶದಲ್ಲಿ ಮರಣಮೃದಂಗ ಬಾರಿಸುತ್ತಿರುವ ಕರೊನಾ ಹೆಮ್ಮಾರಿಯನ್ನ ಆಹ್ವಾನಿಸುತ್ತಿರೋದ್ಹೇಗೆ ಎಂದು ಅಚ್ಚರಿ ಆಗುತ್ತೆ ಅಲ್ವಾ? ನಿಜ ಅವರು ಒಪ್ಪೊತ್ತಿನ ಊಟಕ್ಕಾಗಿ, ಹಸಿವನ್ನು ತಾಳಲಾಗದೆ ಹಾಗೆಂದಿದ್ದಾರೆ. ಸೋಂಕು ತಗುಲಿದರೆ ಸರ್ಕಾರಿ ಆಸ್ಪತ್ರೆಗಾದರೂ ದಾಖಲಾಗಬಹುದು. ಅಲ್ಲಿಯಾದರೂ ಊಟ ಸಿಗುತ್ತೆ ಎಂದು!
ಒಂದೊತ್ತಿನ ಕೂಳಿಗಾಗಿ ಕರೊನಾ ಸೋಂಕು ತಗುಲಿದರೂ ಅಡ್ಡಿಯಿಲ್ಲ ಎಂಬುದು ಚಿಕ್ಕಬಳ್ಳಾಪುರ ಜಿಲ್ಲೆಯ ಮಂಗಳಮುಖಿಯರ ಅಳಲು. ಕರೊನಾ ಲಾಕ್​ಡೌನ್​ ಹೊಡೆತಕ್ಕೆ ಜರ್ಜರಿತರಾಗಿರುವ ತೃತೀಯ ಲಿಂಗಿಗಳು, ತುತ್ತು ಕೂಳಿಗಾಗಿ ಅಂಗಲಾಚುತ್ತಿದ್ದಾರೆ. ಊಟಕ್ಕಾಗಿ ಅಕ್ಷರಶಃ ನರಕಯಾತನೆ ಪಡುತ್ತಿದ್ದಾರೆ. ಊಟಕ್ಕೆ ಪರದಾಡುತ್ತಿದ್ದರೂ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ನೆರವಿಗೆ ಬರುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.
ಎಲ್ಲರಿಗೂ ನೆರವು ನೀಡಿದಂತೆ ತೃತೀಯ ಲಿಂಗಿಗಳು ಸರ್ಕಾರ ನೆರವು ನೀಡಲಿ. ನಮ್ಮ ಕಷ್ಟಕ್ಕೆ ದನಿಯಾಗಲಿ ಎಂದು ಆಗ್ರಹಿಸಿದ್ದಾರೆ.
ಕ್ಲೋಸ್ ಡೋರ್​ ಮೀಟಿಂಗ್​ನಲ್ಲಿ ರೋಹಿಣಿ ಸಿಂಧೂರಿಗೆ ಹಿಗ್ಗಾಮುಗ್ಗಾ ತರಾಟೆ! ಮೌನವಾಗಿಯೇ ಹೊರಟ ಡಿಸಿ

ಗಂಡನ ಅಂತ್ಯಸಂಸ್ಕಾರ ನೆರವೇರುತ್ತಿದ್ದಂತೆ ಸಾವಿನ ಮನೆಯ ಕದ ತಟ್ಟಿದ ಪತ್ನಿ! ಇವರ ಸ್ಟೋರಿ ಕೇಳಿದ್ರೆ ಕಣ್ಣೀರು ಬರುತ್ತೆ

ಕರೊನಾಗೆ ಒಂದೇ ದಿನ ತಾಯಿ-ಮಗ ಬಲಿ! ಒಂದೇ ಚಿತೆಯಲ್ಲಿ ಇಬ್ಬರ ಅಂತ್ಯಸಂಸ್ಕಾರ

ಮಹಾವಂಚಕಿಗೆ ಸಾಥ್ ಕೊಟ್ಟ ಸ್ಯಾಂಡಲ್​ವುಡ್​ ನಟ? ಸಾವಿರಾರು ಕೋಟಿ ರೂ. ರಹಸ್ಯ ಬಯಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 12 =
Remember me
