ತುಮಕೂರು:ಹಾಡಹಗಲೇ ತಹಸೀಲ್ದಾರ್​ ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಕಳ್ಳತನ ಮಾಡಿ ಪರಾರಿಯಾದ ಘಟನೆ ಗುಬ್ಬಿ ಪಟ್ಟಣದಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ.
ತಹಸೀಲ್ದಾರ್ ಆರತಿ ಅವರು ಪಟ್ಟಣದ ಸರ್ಕಾರಿ ನಿವಾಸದಲ್ಲಿ ವಾಸವಿದ್ದಾರೆ. ರಜೆ ಹಿನ್ನೆಲೆ ಶನಿವಾರ ಬೆಳಗ್ಗೆ 7 ಗಂಟೆಗೆ ಸರ್ಕಾರಿ ಮನೆಗೆ ಬೀಗ ಹಾಕಿಕೊಂಡು ತಹಸೀಲ್ದಾರ್ ಆರತಿ ಅವರು ಸ್ವಗ್ರಾಮಕ್ಕೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಬೀಗ ಹೊಡೆದು ಒಳ ನುಗ್ಗಿದ್ದಾರೆ.
ಗ್ರಾಮ ಲೆಕ್ಕಿಗರು ಯಾವುದೋ ಕೆಲಸದ ನಿಮಿತ್ತ ತಹಸೀಲ್ದಾರ್​ರ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಶ್ವಾನದಳ ಸಿಬ್ಬಂದಿ ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುಬ್ಬಿ ಪಟ್ಟಣ ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ. ಏನೆಲ್ಲಾ ಕಳ್ಳತನ ಆಗಿದೆ ಎಂಬುದರ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.
ಸಿದ್ದುಗೆ ಸಿಕ್ತು ಸೇಫ್​ ಝೋನ್​… ಪದೇಪದೆ ಯತೀಂದ್ರ ಭೇಟಿ, ಸಿದ್ದುಗಾಗಿ ನನ್ನ ಕ್ಷೇತ್ರವನ್ನೇ ಬಿಟ್ಟುಕೊಡ್ತೀನಿ ಎಂದ ಶಾಸಕ

ಕಂಠದಲ್ಲಿ ಶ್ರೀಕೃಷ್ಣ! ಗಂಟಲು ನೋವೆಂದು ಆಸ್ಪತ್ರೆಗೆ ಹೋದ ವ್ಯಕ್ತಿಗೆ ಕಾದಿತ್ತು ಶಾಕ್​

ಮದ್ವೆಯಾಗಿ ಇಬ್ಬರು ಮಕ್ಕಳಿದ್ರೂ 21 ವರ್ಷದ ಅರ್ಚಕನ ಜತೆ 35ರ ಮಹಿಳೆ ಪರಾರಿ! ಮಧ್ಯರಾತ್ರಿ ಕಾಡಲ್ಲಿ ಈಕೆ ಪಟ್ಟ ಪಾಡು ಅಷ್ಟಿಷ್ಟಲ್ಲ

ಕೂಲಿ ಕೆಲಸಕ್ಕಾಗಿ ಆಂಧ್ರದಿಂದ ಚಿಕ್ಕಬಳ್ಳಾಪುರಕ್ಕೆ ಬಂದವ ಈಗ ಕೋಟ್ಯಧೀಶ! ತನಿಖೆಯಲ್ಲಿ ಬಯಲಾಯ್ತು ಸ್ಫೋಟಕ ರಹಸ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − eleven =
Remember me
