ಶಿವಮೊಗ್ಗ:ಭದ್ರಾವತಿ ತಾಲೂಕಿನ ಸುಣ್ಣದಹಳ್ಳಿಯಲ್ಲಿ ದೇವಸ್ಥಾನದ ಬಳಿ ಬಂಗಾರದ ಕಿವಿ ಓಲೆ ಮತ್ತು ಮೂಗುತಿಗಾಗಿ ವೃದ್ಧೆ ಕೊಲೆ ಮಾಡಿ ಕೇಂದ್ರ ಕಾರಾಗೃಹ ಸೇರಿದ್ದ ಕೈದಿಯೊಬ್ಬ ಶುಕ್ರವಾರ ಬೆಳಗ್ಗೆ ಜೈಲಿನಲ್ಲೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಉಡುಪಿ ಜಿಲ್ಲೆ ಕುಂದಾಪುರ ಸಮೀಪದ ದುಗ್ಗದಮನೆ ನಿವಾಸಿ ಕರುಣಾಕರ ದೇವಾಡಿಗ (24) ಮೃತ ಕೈದಿ. ಕಾರಾಗೃಹದಲ್ಲಿ ಬೆಳಗ್ಗೆ ಉಪಹಾರಕ್ಕೆ ಸಹ ಕೈದಿಗಳು ತೆರಳಿದ್ದ ವೇಳೆ ಕರುಣಾಕರ ಸೆಲ್ನ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸ್ನಾನ ಮಾಡುವಾಗ ಮೈ ಉಜ್ಜುವ ನಾರನ್ನೇ ಹಗ್ಗವನ್ನಾಗಿ ಮಾಡಿಕೊಂಡು ನೇಣು ಬಿಗಿದುಕೊಂಡಿದ್ದಾನೆ. ಕೊಲೆ ಪ್ರಕರಣದಲ್ಲಿ ಕರುಣಾಕರ ಜೈಲು ಸೇರಿದ್ದ. ಅದಾದ ಬಳಿಕ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ. ಆತನಿಗೆ ವೈದ್ಯರು ಕೌನ್ಸಿಲಿಂಗ್ ಕೂಡ ಮಾಡಿದ್ದರು. ಸಹ ಕೈದಿಗಳನ್ನು ಉಪಹಾರ ತರಲು ಕಳುಹಿಸಿ ಸೆಲ್ ಅನ್‌ಲಾಕ್ ಮಾಡಿ ನೇಣು ಹಾಕಿಕೊಂಡಿದ್ದಾನೆ.
ಇದನ್ನೂ ಒದಿ:ಕಾಂಗ್ರೆಸ್​ ಸಮಾವೇಶಕ್ಕೆ ಮಳೆ ಅಡ್ಡಿ; ವರುಣನ ಅಬ್ಬರದ ನಡುವೆ ರಾಹುಲ್​ ಗಾಂಧಿ ಭಾಷಣ
ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ನೋಡಿದ ಇತರೆ ಸೆಲ್‌ನಲ್ಲಿದ್ದ ಸಹ ಕೈದಿಗಳು ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಜೈಲು ಅಧಿಕಾರಿಗಳು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ತುಂಗಾನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮೂಗುತಿ, ಓಲೆಗಾಗಿ ವೃದ್ಧೆ ಕೊಲೆ ಮಾಡಿದ:
2022ರ ಡಿ.2ರಂದು ಭದ್ರಾವತಿ ತಾಲೂಕಿನ ಸುಣ್ಣದಹಳ್ಳಿಯ ವೃದ್ಧೆ ಶಂಕ್ರಮ್ಮ (70) ಎಂಬುವರನ್ನು ಬಂಗಾರದ ಕಿವಿ ಓಲೆ ಮತ್ತು ಮೂಗುತಿಗಾಗಿ ಅದೇ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದ ಎದುರಿನ ಅಂತರಘಟ್ಟಮ್ಮ ದೇವರ ಗುಡಿಯ ಕಂಪೌಂಡ್‌ನೊಳಗೆ ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಆಂಜನೇಯ ದೇವಸ್ಥಾನದ ಭಕ್ತಾದಿಗಳಿಂದ ಭಿಕ್ಷೆ ಭೇಡಿ ಜೀವನ ನಡೆಸುತ್ತಿದ್ದ ಶಂಕ್ರಮ್ಮ ಅವರು ರಾತ್ರಿ ಅಂತರಘಟ್ಟಮ್ಮ ದೇವಸ್ಥಾನದ ಕಂಪೌಂಡ್‌ನೊಳಗೆ ಮಲಗುತ್ತಿದ್ದರು. ಈ ವೇಳೆ ವೃದ್ಧೆ ಧರಿಸಿದ್ದ ಬಂಗಾರದ ಕಿವಿ ಓಲೆ ಮತ್ತು ಮೂಗುತಿ ಮೇಲೆ ಕರುಣಾಕರನ ಕಣ್ಣು ಬಿದ್ದಿತ್ತು. ಹಾಗಾಗಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಕರುಣಾಕರನನ್ನು ಭದ್ರಾವತಿ ಪೊಲೀಸರು 15 ದಿನಗಳ ಬಳಿಕ ಬಂಧಿಸಿ ಆತನಿಂದ 14 ಸಾವಿರ ರೂ. ಮೌಲ್ಯದ ಒಂದು ಜತೆ ಕಿವಿ ಓಲೆ ಮತ್ತು ಮೂಗುತಿ ಜಪ್ತಿ ಮಾಡಿ ಜೈಲಿಗೆ ಕಳುಹಿಸಿದ್ದರು.
VIDEO| ನನ್ನ ಪತಿಯನ್ನು ಉದ್ಯಮಿ ಮಾಡಿದೆ, ಮಗಳು ಆಕೆಯ ಗಂಡನನ್ನು ಪ್ರಧಾನಿ ಮಾಡಿದ್ದಾಳೆ: ಸುಧಾ ಮೂರ್ತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 16 =
Remember me
