ಬೆಂಗಳೂರು:ನಗರದ ಜಕ್ಕೂರು ಕೆರೆಗೆ ರಾಸಾಯನಿಕ ಮತ್ತು ಕಲುಷಿತ ನೀರು ಸೇರ್ಪಡೆಯಾಗಿ ಸಾವಿರಾರು ಮೀನುಗಳು ಸತ್ತು ತೇಲಾಡುತ್ತಿವೆ. ಸತ್ತಿರುವ ಮೀನುಗಳ ರಾಶಿಯಿಂದ ದುರ್ವಾಸನೆ ಬರುತ್ತಿದ್ದು, ಸ್ಥಳೀಯರು ಹೈರಾಣಾಗಿದ್ದಾರೆ.
ಮೂರು ದಿನಗಳಿಂದ ಸುರಿದ ನಿರಂತರ ಮಳೆಯ ನೀರಿನ ಹರಿವಿನ ಜತೆಗೆ, ಕೊಳಚೆ ನೀರು ಮತ್ತು ರಾಸಾಯನಿಕ ನೀರು ಕೆರೆಯ ಒಡಲು ಸೇರಿದೆ. ಸಾಕಣೆಗೆ ಬಿಡಲಾಗಿದ್ದ ಸಾವಿರಾರು ಮೀನುಗಳು ಸಮರ್ಪಕ ಆಮ್ಲಜನಕ ಸಿಗದೆ ಸತ್ತು ತೇಲಾಡುತ್ತಿವೆ. ರಾಶಿಗಟ್ಟಲೆ ಸತ್ತು ಬಿದ್ದಿರುವ ಮೀನುಗಳಿಂದ ಸುತ್ತಲಿನ ನಿವಾಸಿಗಳಿಗೆ ದುರ್ವಾಸನೆ ಬೀರುತ್ತಿದೆ.
ಈ ಕುರಿತು ಸಾರ್ವಜನಿಕರು ಮತ್ತು ಜಕ್ಕೂರು ಕೆರೆಯ ನಡಿಗೆದಾರರ ಸಂಘದಿಂದ ಬಿಬಿಎಂಪಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಮೀನುಗಳು ಸತ್ತು ಒಂದು ದಿನವಾದರೂ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಲಿಕೆ ಸಿಬ್ಬಂದಿ ನಿರ್ಲಕ್ಷ್ಯ:ನಗರದ ಕೆರೆಗಳಿಗೆ ಕಲುಷಿತ ನೀರು ಸೇರ್ಪಡೆ ಆಗುವುದನ್ನು ಮೂಲದಲ್ಲಿಯೇ ತಡೆಯಲು ಕ್ರಮ ಕೈಗೊಳ್ಳುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ನೀಡಿದೆ. ಆದರೂ, ಬಿಬಿಎಂಪಿ ಅರಣ್ಯ ವಿಭಾಗ ಮತ್ತು ಕೆರೆಯ ಸ್ವಚ್ಛತೆ ಕಾಪಾಡಬೇಕಾದ ವಿಭಾಗಗಳ ನಿರ್ಲಕ್ಷ್ಯದಿಂದಾಗಿ ಕಲುಷಿತ ನೀರು ಕೆರೆಯ ಒಡಲು ಸೇರುತ್ತಿದೆ. ಕೂಡಲೇ, ಕೊಳಚೆ ನೀರು ಸೇರ್ಪಡೆಯನ್ನು ತಡೆಗಟ್ಟಿ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಪಾಲಿಕೆಗೆ ಒತ್ತಾಯಿಸಿದ್ದಾರೆ.
ಬುದ್ಧಿಮಾಂದ್ಯ ಎಂಬ ಕಾರಣಕ್ಕೆ ತನ್ನ ಮಗುವನ್ನೇ ಕೊಂದ ವೈದ್ಯೆ ಪ್ರಕರಣ: ತಂದೆಯ ಹೇಳಿಕೆ ಕೇಳಿದ್ರೆ ಮನಸ್ಸು ಭಾರ…

ನಾಗಮಂಗಲ ಶಾಸಕ ಸುರೇಶ್‌ಗೌಡ ವಿರುದ್ಧ ಎಫ್​ಐಆರ್​! ಸಾಕ್ಷ್ಯವಾಗಿ ವಿಡಿಯೋ-ಫೋಟೋ ಸಲ್ಲಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 1 =
Remember me
