ಬೆಂಗಳೂರು:ಬೆಂಗಳೂರಿನಲ್ಲಿರುವ ಕೂಡ್ಲಿ ಶೃಂಗೇರಿ ಮಹಾಸಂಸ್ಥಾನದಲ್ಲಿ ಜಗದ್ಗುರು ಶ್ರೀ ವಿದ್ಯಾ ವಿಶ್ವೇಶ್ವರ ಭಾರತೀ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಚತುರ್ವೇದ ಪಠಣ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ದೊರೆಯಿತು.
ತಿರುಪತಿ ತಿರುಮಲ ದೇವಸ್ಥಾನದ ಉನ್ನತ ವೇದಾಧ್ಯಯನ ಸಂಸ್ಥೆಯ ಆಶ್ರಯದಲ್ಲಿ ವಿಶ್ವಶಾಂತಿ ಮತ್ತು ಲೋಕ ಕಲ್ಯಾಣಕ್ಕಾಗಿ ನಡೆಯುತ್ತಿರುವ ಚತುರ್ವೇದ ಪಾರಾಯಣವು ಸೋಮವಾರ ಮತ್ತು ಮಂಗಳವಾರವೂ ಮುಂದುವರೆಯಲಿದೆ.
ಕಾರ್ಯಕ್ರಮದಲ್ಲಿ 60 ವೈದಿಕರು ಚತುರ್ವೇದ ಪಾರಾಯಣ ಮಾಡುತ್ತಿದ್ದು, ವೇ. ಮೂ. ಹರಿ ವೀರಭದ್ರ ಘನಪಾಠಿಗಳು, ಕಾರ್ಯಕ್ರಮದ ಸಂಚಾಲಕರಾಗಿದ್ದಾರೆ. ವೇ. ಮೂ ರಾಮಕೃಷ್ಣರವರ ಮೇಲ್ವೀಚಾರಣೆಯಲ್ಲಿ ನಡೆಯುವ ಚತುರ್ವೇದಿ ಪಾರಾಯಣ ನಿಮಿತ್ತ ರುದ್ರಹೋಮ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಶ್ರೀಧರ್ ಇನಾಮದಾರ್, ಕೃಷ್ಣ ಜೋಶಿ, ಶ್ರೀಮಠದ ಕಾರ್ಯದರ್ಶಿ ಸಿ.ಅಶ್ವತ್ ನಾರಾಯಣ, ವೇ. ಮೂ. ನಾಗೇಶ್ ಶಾಸ್ತ್ರಿ. ಶಂಕರ್ ಕುಲಕರ್ಣಿ ಮತ್ತಿತರರು ಕಾರ್ಯಕ್ರಮಕ್ಕೆ ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಭಕ್ತರೆಲ್ಲರಿಗೆ ಜಗದ್ಗುರುಗಳು ಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
