ಬಾಗಲಕೋಟೆ:ಕ್ವಾರಂಟೈನಲ್ಲೇ ಇದ್ದರೆ ದುಡಿಮೆ ಹೇಗೆ? ಎಂದು ಚಿಂತಿಸುತ್ತಿದ್ದ ಕುಟುಂಬಗಳಿಗೆ ಮಾನಸಿಕ ಸ್ಥೈರ್ಯ ತುಂಬಿದ ಇಲ್ಲಿನ ಜಿಲ್ಲಾ ಪಂಚಾಯಿತಿ, ಕೆಲಸ ಕೊಟ್ಟು ಕೂಲಿ ಹಣವನ್ನೂ ನೀಡಿದೆ!
ಕುಡಿವ ನೀರು, ಶೌಚಗೃಹ, ಸ್ವಚ್ಛತೆ ಸೇರಿ ಮೂಲ ಸೌಕರ್ಯಗಳ ಕೊರತೆಯ ಆಗರವಾಗಿರುವ ಕೆಲ ಕ್ವಾರಂಟೈನ್​ ಕೇಂದ್ರಗಲ್ಲಿ ಕಾರ್ಮಿಕರ ಬದುಕು ದುಸ್ತರವಾಗಿದೆ. ಈ ನಡುವೆ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದಲ್ಲಿರುವ ಕ್ವಾರಂಟೈನ್​ ಕೇಂದ್ರ ವಿಶೇಷ ಎನಿಸಿದೆ. ಇನ್​ಸ್ಟಿಟೂಶನಲ್ ಕ್ವಾರಂಟೈನ್​ನಲ್ಲೇಕಾರ್ಮಿಕರಿಗೆ ಕೂಲಿ ಕೆಲಸ ಸಿಕ್ಕಿದೆ.
ಇದನ್ನೂ ಓದಿರಿಆಹಾ ತಿರುಪತಿ ಲಡ್ಡು- ಮೂರೇ ಗಂಟೆಯಲ್ಲಿ ಹೊಡೆಯಿತು ಲಕ್ಷ ಲಕ್ಷ ಬಂಪರ್​!
ಮಹಾರಾಷ್ಟ್ರ ಮತ್ತು ಕೇರಳದಿಂದ ಬಂದು ಕ್ವಾರಂಟೈನ್​ನಲ್ಲಿದ್ದ ಮೂರು ಕುಟುಂಬಕ್ಕೆ ಗಿರಿಸಾಗರ ಗ್ರಾಪಂ ಮೂಲಕ ಮನರೇಗಾ ಯೋಜನೆಯಡಿ ಕೂಲಿ ಕೆಲಸ ನೀಡಲಾಗಿದೆ. ಕ್ವಾರಂಟೈನ್​ನಲ್ಲಿದ್ದ ಶಾಲೆ ಆವರಣದಲ್ಲಿ ಗಿಡ ನೆಡುವುದು, ಶಾಲೆ ಕಾಂಪೌಂಡ್, ಶೌಚಗೃಹ, ನೀರಿನ ಟ್ಯಾಂಕ್​ಗೆ ಬಣ್ಣ ಬಳಿಯುವ ಕೆಲಸ ಮಾಡಿದ್ದಾರೆ.
ಮೂರು ಕುಟುಂಬದ ಐವರಿಗೆ ಪ್ರತಿದಿನ 275 ರೂ. ಕೂಲಿ ಸಿಕ್ಕಿದ್ದು, ಜಿಪಂ ಸಿಇಒ‌ ಗಂಗೂಬಾಯಿ ಮಾನಕರ್ ಅವರ ವಿಶೇಷ ಕಾಳಜಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
ಇದನ್ನೂ ಓದಿರಿಅಪ್ಪನ ಕಾರ್ಯ ಮಗ ಮಾಡಲ್ಲ ಎಂದ, ಅದನ್ನು ಮುಸ್ಲಿಮರು ನೆರವೇರಿಸಿದರು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − eight =
Remember me
