ಬೆಂಗಳೂರು: ರಾಜ್ಯದ ಕೆಲವೆಡೆ ಗುಡುಗು ಸಹಿತ ಮಳೆಯಾಗಿದ್ದು, ವಿವಿಧೆಡೆ ಒಟ್ಟು 7 ಜನರು ಸಿಡಿಲಿಗೆ ಬಲಿಯಾದ ಘಟನೆಮಂಗಳವಾರ ಸಂಭವಿಸಿದೆ.ವಿಜಯನಗರ ಜಿಲ್ಲೆಯಲ್ಲಿಯೇ ನಾಲ್ವರು ಸಿಡಿಲಿಗೆ ಬಲಿಯಾಗಿದ್ದರೆ, ದಾವಣಗೆರೆಯಲ್ಲಿ ಇಬ್ಬರು, ಯಾದಗಿರಿಯಲ್ಲಿ ಓರ್ವ ಮಹಿಳೆ ಸತ್ತಿದ್ದಾರೆ.
ವಿಜಯಪುರದ ಜರ್ಮಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹರವದಿಯ ರಾಜಶೇಖರ(33) ತಾಲೂಕಿನ ಸೂಲದಹಳ್ಳಿಯಿಂದ ಕ್ಯಾಸನಕೆರೆ ಜರ್ಮಲಿ ರಸ್ತೆಯಲ್ಲಿ ಹೋಗುತ್ತಿರುವಾಗ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಇವರ ಜತೆಯಲ್ಲಿದ್ದ ವ್ಯಕ್ತಿಗೆ ಗಾಯವಾಗಿದೆ. ನೆಲಬೊಮ್ಮನಹಳ್ಳಿ ಹೊರವಲಯದ ಹೊಲದಲ್ಲಿ ಕುರಿಮೇಯಿಸಲು ಹೋಗಿದ್ದ ಚಿನ್ನಾಪುರಿ (40) ಹಾಗೂ ವೀರಣ್ಣ (50) ಇಬ್ಬರೂ ಮಳೆ ಬರುತ್ತಿದ್ದರಿಂದ ಮರದಡಿ ನಿಂತಿದ್ದರು. ಅವರಿಬ್ಬರಿಗೂ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಎಂಬಿ ಅಯ್ಯನಹಳ್ಳಿಯ ಪತ್ರೆಪ್ಪ(43) ಮಳೆ ಬರುತ್ತಿದೆ ಎಂದು ಮಾಳಿಗೆಯ ಬಾದಾಳ ಮುಚ್ಚಲು ಹೋದಾಗ ಆತನಿಗೂ ಸಿಡಿಲು ಬಡಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ತಹಸೀಲ್ದಾರ್ ಮಹಾಬಲೇಶ್ವರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು ದಾವಣಗೆರೆ ತಾಲೂಕಿನ ಹುಚ್ಚವ್ವನಹಳ್ಳಿ ಗ್ರಾಮದ ಕೆರೆ ಏರಿ ಬಳಿ ಸಿಡಿಲು ಬಡಿದು ಗ್ರಾಮದ ರವಿಕುಮಾರ್ (32) ಮತ್ತು ರಮೇಶ ಅಲಿಯಾಸ್​ ರಾಮ(30) ಮೃತಪಟ್ಟಿದ್ದಾರೆ. ಯಾದಗಿರಿ ತಾಲೂಕಿನ ‌ಮುನಗಲ್ ಗ್ರಾಮದ ಹೊರವಲಯದಲ್ಲಿ ಬಿರುಗಾಳಿ ಸಹಿತ ಮಳೆಯಾಗಿದ್ದು, ಜಮೀನಿನ ಕೂಲಿ ಕೆಲಸಕ್ಕೆಂದು ತೆರಳಿದ್ದ ಸಿದ್ದಮ್ಮ ಸಿಡಿಲಿಗೆ ಬಲಿಯಾಗಿದ್ದಾರೆ.
ಅಪಘಾತ: ಸಾವಿನಲ್ಲೂ ಸಾರ್ಥಕತೆ ಮೆರೆದ ಚಿತ್ರದುರ್ಗ ಉಪವಿಭಾಗಾಧಿಕಾರಿ ವಿ.ಪ್ರಸನ್ನ!

ಮಗನ ಸಾವಿನ ಸುದ್ದಿ ಕೇಳಿ ಸ್ಥಳದಲ್ಲೇ ಪ್ರಾಣಬಿಟ್ಟ ತಂದೆ-ತಾಯಿ! 2 ದಿನ ಸತ್ಯ ಬಚ್ಚಿಟ್ಟರೂ ಬದುಕಲಿಲ್ಲ ಹೆತ್ತವರು

ದ್ವಿತೀಯ ಪಿಯು ಪರೀಕ್ಷೆ ಮುಂದೂಡಿಕೆ, ಎಕ್ಸಾಂ ಇಲ್ದೇ ಪ್ರಥಮ ಪಿಯು ವಿದ್ಯಾರ್ಥಿಗಳು ಪಾಸ್​: ಉಪನ್ಯಾಸಕರಿಗೆ ವರ್ಕ್ ಫ್ರಂ ಹೋಂ

ಕಾರಿನಲ್ಲೇ ಟಿವಿ ಸೀರಿಯಲ್​ ನಟಿಯ ಬೆತ್ತಲೆ ದೃಶ್ಯ ಸೆರೆ! ಮುಂದೆ ಆಗಿದ್ದೆಲ್ಲವೂ ಅವಾಂತರ

ನನ್ನ ಕಣ್ಮುಂದೆಯೇ ಹಲವರು ಪ್ರಾಣಬಿಟ್ಟರು, ನನಗೂ ಭಯವಾಗ್ತಿದೆ… ಎಂದು ಕರೆ ಮಾಡಿದ್ದ ನವವಿವಾಹಿತ 2 ತಾಸಲ್ಲೇ ಪ್ರಾಣಬಿಟ್ಟ

ಸ್ಮಶಾನದಲ್ಲೂ ಹೌಸ್​ಫುಲ್ ಬೋರ್ಡ್! ಶವಗಳ ಹೊತ್ತು ಕ್ಯೂ ನಿಂತ ಆಂಬುಲೆನ್ಸ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 10 =
Remember me
