ಬಾಗಲಕೋಟೆ:ಬಾಗಲಕೋಟೆ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಿಚಾರ ಸದ್ಯ ರಾಜಕೀಯ ವಲಯದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್​ಗಾಗಿ ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾ ಪಾಟೀಲ ಮತ್ತು ವೀಣಾ ಕಾಶಪ್ಪನವರು ಭಾರೀ ಜಿದ್ದಾಜಿದ್ದಿ ನಡೆಸುತ್ತಿದ್ದಾರೆ. ಟಿಕೆಟ್ ಪಡೆಯಲು ನಾ ಮುಂದು ತಾ ಮುಂದು ಎನ್ನುತ್ತಿರುವ ಮಧ್ಯೆ ಅಂತಿಮವಾಗಿ ಸಂಯುಕ್ತಾಗೆ ಕೈ ಟಿಕೆಟ್ ಘೋಷಣೆಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಕಣ್ಣಿಗೊಂದು ಸವಾಲ್​: ನೀವು ಬುದ್ಧಿವಂತರಾಗಿದ್ರೆ ಅಡುಗೆ ಕೋಣೆಯೊಳಗೆ ಫ್ರಿಡ್ಜ್​ ಎಲ್ಲಿದೆ ಪತ್ತೆಹಚ್ಚಿ!
ಸದ್ಯ ಈ ಸುದ್ದಿ ಹೊರಬೀಳುತ್ತಿದ್ದಂತೆ ದೆಹಲಿಯಲ್ಲಿರುವ ವೀಣಾ ಕಾಶಪ್ಪನವರ ಕಣ್ಣೀರಿಟ್ಟಿದ್ದಾರೆ. ಕಾಂಗ್ರೆಸ್​ ಟಿಕೆಟ್​ಗಾಗಿ ಅಭ್ಯರ್ಥಿಗಳ ಮಧ್ಯೆ ಇರಬೇಕಾದ ಜಿದ್ದಾಜಿದ್ದಿ ಸದ್ಯ ಬೆಂಬಲಿಗರ ನಡುವೆ ಹೆಚ್ಚಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೀಣಾ ಕಾಶಪ್ಪನವರ ಹಾಗೂ ಸಂಯುಕ್ತಾ ಪಾಟೀಲ ಬೆಂಬಲಿಗರ ಬಿಗ್ ಫೈಟ್ ನಡೆಸುತ್ತಿದ್ದಾರೆ.
ಸಚಿವ ಶಿವಾನಂದ ಪಾಟೀಲ ಪುತ್ರಿ ಸಂಯುಕ್ತಾ ಪಾಟೀಲ ಹಾಗೂ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಪತ್ನಿ ವೀಣಾ ಕಾಶಪ್ಪನವರ ಬೆಂಬಲಿಗರ ನಡುವೆ ಸದ್ಯ ಭರ್ಜರಿ ಪೈಪೋಟಿ ಆರಂಭಗೊಂಡಿದ್ದು, ಕೇವಲ ಟಿಕೆಟ್​ಗಾಗಿ ಭಾರೀ ಜಟಾಪಟಿ ನಡೆಸುತ್ತಿದ್ದಾರೆ. ಒಂದೆಡೆ ಸಂಯುಕ್ತಾಗೆ ಟಿಕೆಟ್​ ಆಗಬೇಕು ಎಂದರೆ, ಮತ್ತೊಂದೆಡೆ ವೀಣಾಗೆ ಟಿಕೆಟ್​ ಕೊಡಬೇಕು, ಅದೇ ನ್ಯಾಯ ಎಂಬ ಕೂಗು ಕೇಳಿಬಂದಿದೆ.
ಇದನ್ನೂ ಓದಿ:ಚಾಮುಂಡಿಬೆಟ್ಟಕ್ಕೆ ರೋಪ್‌ವೇ ಬೇಡ
ಸಂಯುಕ್ತಾ ಪಾಟೀಲಗೆ ಟಿಕೆಟ್ ಫಿಕ್ಸ್ ಎನ್ನುವ ಸುದ್ದಿ ವ್ಯಾಪಕವಾಗಿ ಕೇಳಿಬರುತ್ತಿದ್ದಂತೆ ವೀಣಾಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಲಿದೆ ಎಂಬ ಮಾಹಿತಿ ಅವರ ಬೆಂಬಲಿಗರಲ್ಲಿ ಭಾರೀ ಆತಂಕ ಸೃಷ್ಟಿಸಿದೆ. ಇಬ್ಬರು ಬೆಂಬಲಿಗರಿಂದ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಕೆಲವರು ಸಂಯುಕ್ತಾ ಪಾಟೀಲ ಬಾಗಲಕೋಟೆಗೆ ಹೊಸ ಭರವಸೆ ಎಂದು ಬ್ಯಾಟಿಂಗ್ ಬೀಸಿದ್ದಾರೆ.
ಆದರೆ, ವೀಣಾ ಬೆಂಬಲಿಗರು ‘ಗೋ ಬ್ಯಾಕ್ ಸಂಯುಕ್ತಾ’ ಎಂದು ಪೋಸ್ಟರ್ ಹಿಡಿದು ಕಿಡಿಕಾರಿದ್ದಾರೆ. ‘ಬರ್ರಿ ಪಾಟೀಲರ ಉಂಡು ಹೋಗ್ರಿ ಬಾಗಲಕೋಟೆ ನಿಮ್ಮಂತೋರಿಗೆ ಬಿಟ್ಟಿ ಬಿದ್ದೈತಿ’ ಎಂದು ವ್ಯಂಗ್ಯವಾಡಿದ್ದಾರೆ. ‘ವೀಣಾ ಹನಿ ಹನಿ ಕಣ್ಣೀರಿನ‌ಶಾಪ ತಟ್ಟದೇ ಬಿಡಲ್ಲ’ ಎಂದು ಆಕ್ರೋಶ ಹೊರಹಾಕಿದ್ದಾರೆ.
ಒಳ್ಳೆಯ ಕಂಟೆಂಟ್ ಇದ್ದರೂ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳಿಗಿಲ್ಲ ಉಳಿವು! ಹೀಗಾದರೆ….

ಶ್ರೀಲೀಲಾ ಜತೆ ನಟಿಸಲು ಸ್ಟಾರ್​ ನಟರಿಗೆ ಚಿಂತೆ! ಇದು ಮುಂದುವರಿದ್ರೆ ‘ಕಿಸ್’​ ಬೆಡಗಿಗೆ ಸಂಕಷ್ಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
