ಮೈಸೂರು:ಸಾವು ಯಾವ ಕ್ಷಣದಲ್ಲಾದರೂ ಬರಬಹುದು ಎಂಬುದಕ್ಕೆ ಈ ಘಟನೆಯೇ ನಿದರ್ಶನ. ವಾಹನ ತಪಾಸಣೆ ವೇಳೆ ರಸ್ತೆಬದಿ ನಿಂತಿದ್ದ ಪೊಲೀಸ್​ ಜೀಪ್​ ಮೇಲೆ ಎಂ ಸ್ಯಾಂಡ್​ ಮರಳು ತುಂಬಿದ್ದ ಟಿಪ್ಪರ್ ಪಲ್ಟಿಯಾಗಿದ್ದು, ಜೀಪ್​ನಲ್ಲಿದ್ದ ಮುಖ್ಯ ಪೇದೆ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಇಂತಹ ದುರ್ಘಟನೆ ನಂಜನಗೂಡಿನ ಮುದ್ದಹಳ್ಳಿ ಗೇಟ್​ ಬಳಿ ಸಂಭವಿಸಿದೆ. ಸಿದ್ದರಾಜನಾಯಕ (35) ಮೃತಪಟ್ಟ ದುರ್ದೈವಿ. ಮುದ್ದಹಳ್ಳಿ ಗೇಟ್ ಬಳಿ ಇನ್​ಸ್ಪೆಕ್ಟರ್​ ನೇತೃತ್ವದ ತಂಡ ವಾಹನ ತಪಾಸಣೆ ಕಾರ್ಯಾಚರಣೆ ಮಾಡುತ್ತಿತ್ತು. ಈ ವೇಳೆ ಮರಳು ಸಾಗಣೆ ಮಾಡುತ್ತಿದ್ದ ಟಿಪ್ಪರ್ ಬಂದಿದ್ದು, ನಿಲ್ಲಿಸುವಂತೆ ಪೊಲೀಸ್​ ಸಿಬ್ಬಂದಿ ಸೂಚಿಸಿದ್ದಾರೆ. ವಾಹನ ನಿಲ್ಲಿಸುವಾಗ ಚಾಲಕನ ನಿಯಂತ್ರಣ ಕಳೆದುಕೊಂಡ ಟಿಪ್ಪರ್​ ಟಿಪ್ಪರ್ ಪೊಲೀಸ್​ ಜೀಪ್​ ಮೇಲೆ ಮಗುಚಿಬಿದ್ದಿದ್ದು, ಜೀಪ್​ನಲ್ಲಿ ಕುಳಿತಿದ್ದ ಮುಖ್ಯಪೇದೆ ಸಿದ್ದರಾಜನಾಯಕ ಜೀವಂತ ಸಮಾಧಿಯಾದರು.ಇದನ್ನೂ ಓದಿರಿಮಾಲಾಶ್ರೀ ಪತಿ, ನಿರ್ಮಾಪಕ ರಾಮು ಮೃತಪಟ್ಟದ್ದು ಕರೊನಾದಿಂದಲ್ಲ! ಸಾವಿಗೆ ಬೇರೆ ಕಾರಣ ಇದೆ
ಟಿಪ್ಪರ್​ನಿಂದ ಜೀಪ್​ ಮೇಲೆ ಬಿದ್ದಿದ್ದ ಮರಳನ್ನು ಕೂಡಲೇ ಸ್ಥಳೀಯರು ತೆರವು ಮಾಡಿ ಪೊಲೀಸ್​ ಪೇದೆಯನ್ನ ಉಳಿಸಿಕೊಳ್ಳಲು ಯತ್ನಿಸಿದ್ದರಾದರೂ ಫಲಿಸಲಿಲ್ಲ. ಜೆಸಿಬಿ ಮೂಲಕ ಮರಲು ತೆರವುಗೊಳಿಸಿ, ಟಿಪ್ಪರ್ ವಾಹನವನ್ನು ಪಕ್ಕಕ್ಕೆ ನಿಲ್ಲಿಸಲಾಯಿತು. ಬಳಿಕ ಪೇದೆಯ ಶವ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಯಿತು.
ಅಪಘಾತದಲ್ಲಿ ಪೊಲೀಸ್ ವಾಹನ ಜಖಂಗೊಂಡಿದೆ. ಟಿಪ್ಪರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಲಾಶ್ರೀ ಪತಿ, ನಿರ್ಮಾಪಕ ರಾಮು ಮೃತಪಟ್ಟದ್ದು ಕರೊನಾದಿಂದಲ್ಲ! ಸಾವಿಗೆ ಬೇರೆ ಕಾರಣ ಇದೆ

ಸಿನಿಮಾ ಮತ್ತು ರಾಜಕೀಯಕ್ಕೆ ಶಾಶ್ವತ ಗುಡ್ ​ಬೈ ಹೇಳಿದ ರಮ್ಯಾ! ಇನ್ನೆಂದೂ ಬಣ್ಣದ ಲೋಕಕ್ಕೆ ಬರಲ್ಲ ಎಂದ ಮೋಹಕ ತಾರೆ

ಕಾರಿನಲ್ಲೇ ಟಿವಿ ಸೀರಿಯಲ್​ ನಟಿಯ ಬೆತ್ತಲೆ ದೃಶ್ಯ ಸೆರೆ! ಮುಂದೆ ಆಗಿದ್ದೆಲ್ಲವೂ ಅವಾಂತರ

ಮಾಜಿ ಸಂಸದ, ಕಾಂಗ್ರೆಸ್ ಹಿರಿಯ ನಾಯಕ ಎಸ್.ಬಿ. ಸಿದ್ನಾಳ್ ನಿಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
