ತುಮಕೂರು:ಮನೆಯವರ ವಿರೋಧದ ನಡುವೆಯೂ ದೇವಸ್ಥಾನದಲ್ಲಿ ಪ್ರೇಯಸಿಯ ಕುತ್ತಿಗೆಗೆ ತಾಳಿ ಕಟ್ಟಿದ ಯುವಕ, ಜೀವನಪೂರ್ತಿ ನಿನ್ನೊಂದಿಗೇ ಇರುವೆ ಎಂದೂ ಮಾತೂ ಕೊಟ್ಟಿದ್ದ. ಇದಾದ ಮೂರು ದಿನಕ್ಕೆ ಸಬ್​ ರಿಜಿಸ್ಟ್ರಾರ್​ ಕಚೇರಿಯಲ್ಲಿ ಖುಷಿಯಾಗೇ ಮದುವೆ ನೋಂದಣಿ ಕೂಡ ಮಾಡಿಸಿಕೊಂಡ ಈ ಜೋಡಿ 6 ದಿನ ಸಂಸಾರವನ್ನೂ ನಡೆಸಿತ್ತು. ಎಲ್ಲವೂ ಸುಸೂತ್ರವಾಗಿ ನೆರವೇರಿತು, ಪ್ರೀತಿಸಿದ ಹುಡುಗ ಜೀವನ ಪೂರ್ತಿ ಸಂಗಾತಿಯಾಗಿ ಇರ್ತಾನೆ… ಇನ್ನು ತಮ್ಮದೇ ಆದ ಬದುಕು ಕಟ್ಟಿಕೊಂಡು ನೆಲೆಯೂರಬೇಕು ಅಂದುಕೊಳ್ಳುವಷ್ಟರಲ್ಲಿ ಯುವತಿ ಬಾಳಲ್ಲಿ ನಡೆಯಬಾರದ್ದು ನಡೆದು ಹೋಗಿದೆ! ಪ್ರೀತಿಸಿ ಮದ್ವೆಯಾದ ಯುವತಿ ಬೀದಿಪಾಲಾಗಿದ್ದಾಳೆ.
ಏನಿದು ಪ್ರಕರಣ?:ತಿಪಟೂರು ತಾಲೂಕಿನ ಪರವಗೊಂಡನಹಳ್ಳಿ‌ ಗ್ರಾಮದಲ್ಲಿ ನಿಖಿಲ್​ ಮತ್ತು ಹಟ್ನ ಗ್ರಾಮದ ಚೈತ್ರಾ ಇಬ್ಬರೂ ತುರುವೇಕೆರೆಯ ಮೊಬೈಲ್ ಶಾಪ್​ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಪರಿಚಯ ತದನಂತರ ಪ್ರೀತಿಗೆ ತಿರುಗಿತ್ತು. ಇವರಿಬ್ಬರ ಜಾತಿ ಬೇರೆ ಬೇರೆ ಎಂದು ಪಾಲಕರು ಮದುವೆಗೆ ಒಪ್ಪಿಗೆ ಕೊಟ್ಟಿರಲಿಲ್ಲವಂತೆ. ಕೊನೆಗೆ ಇವರಿಬ್ಬರೂ ಮನೆಯವರ ವಿರೋಧದ ನಡುವೆಯೂ ಮನೆಯಿಂದ ಹೊರ ಬಂದು ಕಳೆದ ಫೆಬ್ರವರಿ 4ರಂದು ದೇವಸ್ಥಾನದಲ್ಲಿ ಮದುವೆ ಆಗಿದ್ದರು. ಫೆಬ್ರವರಿ 7ರಂದು ರಿಜಿಸ್ಟ್ರಾರ್ ಮ್ಯಾರೇಜ್ ಕೂಡ ಆಗಿದ್ದರು. ತಿಪಟೂರು ತಾಲೂಕು ಕಿಬ್ಬನಳ್ಳಿ ಬಳಿಯ ಇಂಡಿಸ್ಕೆರೆ ಗ್ರಾಮದಲ್ಲಿ ಮನೆ ಮಾಡಿದ್ದ ಪ್ರೇಮಿಗಳಿಬ್ಬರೂ 6 ದಿನ ಒಟ್ಟಿಗೆ ವಾಸವಿದ್ದರು. ಮದ್ವೆಯಾದ 7ನೇ ದಿನಕ್ಕೆ ಯುವಕ ಎಸ್ಕೇಪ್​ ಆಗಿದ್ದಾನೆ!
ಫೆಬ್ರವರಿ 10ರಂದು ಇದ್ದಕ್ಕಿದ್ದಂತೆ ತಾಯಿಗೆ ಹುಷಾರಿಲ್ಲ. ಅವರನ್ನು ನೋಡಿಕೊಂಡು ಬರುವೆ ಎಂದು ತಿಪಟೂರಿಗೆ ಹೋದ ನಿಖಿಲ್ ವಾಪಸ್​ ಬಂದಿಲ್ಲ. ಮನೆಗೆ ಹೋದ ಕೆಲವೇ ಗಂಟೆಗಳಲ್ಲಿ ನಿಖಿಲ್​ನ ಎರಡೂ ಮೊಬೈಲ್ ಸ್ವಿಚ್ ಆಫ್​ ಆಗಿದೆ. ಗಂಡನನ್ನ ಹುಡುಕಿಕೊಂಡು ಊರಿಗೆ ಹೋದ ಚೈತ್ರಾಗೆ ನಿಖಿಲ್ ತಂದೆ ಬಸವರಾಜು ಅವಾಚ್ಯವಾಗಿ ನಿಂದಿಸಿದ್ದಾರಂತೆ. ಕಂಗೆಟ್ಟ ಚೈತ್ರಾ, ಗಂಡನನ್ನ ಹುಡುಕಿಕೊಂಡಿ ಕಿಬ್ಬನಹಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಥೂ, ಇದೆಂಥಾ ಅಸಹ್ಯ? ಚೆನ್ನೈನಲ್ಲಿ ಮೂವರು ಬಾಲಕರ ಜತೆ ಗುಂಪು ಲೈಂಗಿಕ ಕ್ರಿಯೆ ನಡೆಸಿದ ಶಿಕ್ಷಕಿ!

ಮಿದುಳಿನ ರಕ್ತನಾಳ ಛಿದ್ರಛಿದ್ರ… ಜಿಮ್​ನಲ್ಲೇ ಮೃತಪಟ್ಟ ಮಹಿಳೆಯ ಮರಣೋತ್ತರ ವರದಿಯಲ್ಲಿದೆ ಸ್ಫೋಟಕ ಮಾಹಿತಿ

ಆಜಾನ್​ಗೆ ​ಪ್ರತಿಯಾಗಿ ರಾಮತಾರಕ ಮಂತ್ರ: ಬೆಳ್ಳಂಬೆಳಗ್ಗೆ ರಾಮನಾಮ ಮೊಳಗಿಸಿದ ಕಾಳಿ ಮಠದ ಸ್ವಾಮೀಜಿ

ಮೇಕೆ ಜೊತೆ ಯುವಕನ ಮದ್ವೆ! ಕುಟುಂಬಸ್ಥರ ಸಮ್ಮುಖದಲ್ಲೇ ತಾಳಿ ಕಟ್ಟಿದ… ಕಾರಣ ಕೇಳಿದ್ರೆ ಹುಬ್ಬೇರಿಸ್ತೀರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + one =
Remember me
