ತಿಪಟೂರು:ಕರೊನಾ ಬಂದ್ರೆ ಎಕ್ಸಾಂ ಬರೆಯದೇ ಪಾಸಾಗುವ ಆಸೆಯಲ್ಲಿ ಖಾಸಗಿಯಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ತೆಗೆದುಕೊಂಡಿದ್ದ ಪೌರ ಕಾರ್ಮಿಕನೊಬ್ಬ ಮಾಡಬಾರದ್ದು ಮಾಡಿದ್ದಾನೆ. ತನ್ನ ಪರವಾಗಿ ಬೇರೊಬ್ಬನನ್ನು ಕಳಿಸಿ ಪರೀಕ್ಷೆ ಬರೆಸಿದ್ದಾನೆ. ಇಂತಹ ಪ್ರಕರಣ ಶಿಕ್ಷಣ ಸಚಿವ ಬಿ.ಸಿ.ನಾಗೇಶ್​ ಸ್ವಕ್ಷೇತ್ರ ತಿಪಟೂರಿನಲ್ಲಿ ಬಯಲಾಗಿದೆ.
ತಿಪಟೂರು ನಗರಸಭೆಯ ಕಾಯಂ ನೌಕರ ಎಂ.ಮಂಜುನಾಥ್​ ಕರೊನಾ ಬಂದರೆ ಪರೀಕ್ಷೆ ನಡೆಯದೆ ಪಾಸಾಗಬಹುದು ಎಂಬ ಉದ್ದೇಶದಿಂದ ಖಾಸಗಿಯಾಗಿ ಪರೀಕ್ಷೆ ತೆಗೆದುಕೊಂಡಿದ್ದ ಎನ್ನಲಾಗಿದೆ. ಆದರೆ ಪರೀಕ್ಷೆ ರದ್ದಾಗಲಿಲ್ಲ. ಪರೀಕ್ಷೆ ಬರೆಯುವ ಸಂದರ್ಭ ಬಂತು. ಸೋಮವಾರ ಎಸ್ಸೆಸ್ಸೆಲ್ಸಿ ವಿಜ್ಞಾನ ಪರೀಕ್ಷೆಗೆ ತನ್ನ ಬದಲಾಗಿ ಸಂಬಂಧಿ ಮುರಳೀಧರ್​ ಎಂಬಾತನನ್ನು ಟಾಗೂರ್​ ಶಾಲೆಯ ಪರೀಕ್ಷಾ ಕೊಠಡಿ 5ಕ್ಕೆ ಕಳಿಸಿದ್ದ. ಕೊಠಡಿ ಮೇಲ್ವಿಚಾರಕ ನರಸಿಂಹಮೂರ್ತಿ ಅವರು ಅನುಮಾನಗೊಂಡು ವಿಚಾರಿಸಿದಾಗ ಪ್ರಕರಣ ಬಯಲಿಗೆ ಬಂದಿದೆ. ಈ ಸಂದರ್ಭದಲ್ಲಿ ನಕಲಿ ಅಭ್ಯರ್ಥಿಯನ್ನು ಬಿಟ್ಟು ಕಳುಹಿಸಿದ್ದರು ಎನ್ನಲಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರವಾದ ಕೂಡಲೇ ಪರೀಕ್ಷಾ ಕೇಂದ್ರದ ಅಧೀಕ್ಷಕ ಡಿ.ಎಸ್​.ಶಿವಶಂಕರ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇಲಾಖೆ ಬಡ್ತಿ ಸಂದರ್ಭದಲ್ಲಿ ಅನುಕೂಲವಾಗಲಿ ಎಂಬ ಉದ್ದೇಶದಿಂದ ಎಸ್ಸೆಸ್ಸೆಲ್ಸಿ ಪಾಸ್​ ಆಗಬೇಕೆಂಬ ಆಸೆಗೆ ತೆಗೆದುಕೊಂಡಿದ್ದ ಪರೀಕ್ಷೆಯನ್ನು ಸ್ವಂತವಾಗಿ ಬರೆಯಲಾಗದೆ ಬೇರೊಬ್ಬನನ್ನು ಕಳಿಸಿರುವುದು ಬಯಲಾಗಿದೆ. ವಿಜ್ಞಾನ ಪರೀಕ್ಷೆ ಸಂದರ್ಭದಲ್ಲಿ ನಕಲಿ ಅಭ್ಯರ್ಥಿ ಸಿಕ್ಕಿಬಿದ್ದಿದ್ದು ಈ ಹಿಂದಿನ ಐದು ವಿಷಯಗಳ ಪರೀಕ್ಷೆಗಳಲ್ಲಿಯೂ ನಕಲಿ ವಿದ್ಯಾರ್ಥಿಯೇ ಪರೀಕ್ಷೆ ಬರೆದಿರುವ ಅನುಮಾನ ಮೂಡಿದ್ದು, ತನಿಖೆಯಿಂದ ಸತ್ಯ ಬಯಲಾಗಬೇಕಿದೆ. ಶಿಕ್ಷಣ ಸಚಿವರ ತವರಿನಲ್ಲೇ ಇಂತಹ ಪ್ರಕರಣ ನಡೆದಿರುವುದು ಇಲಾಖೆಗೆ ಮುಜುಗರ ತಂದಿದ್ದು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸಬೇಕಿದೆ.
ಅಯ್ಯೋ ಅಣ್ಣ… ನಾನಷ್ಟು ಗೋಗರೆದ್ರೂ ಊಟ ಮಾಡದೆ ಕೆಲ್ಸ ಇದೆ ಅಂತ ಹೊರಟ್ಯಲ್ಲೋ: ಮಡಿಲಕ್ಕಿ ಕೊಟ್ಟು ಹಿಂತಿರುಗುವಾಗ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − two =
Remember me
