ಬೆಂಗಳೂರು:ಟೋಲ್​ ಶುಲ್ಕ ಪಾವತಿಗೆ ಫಾಸ್ಟ್ಯಾಗ್  ವ್ಯವಸ್ಥೆ ಜಾರಿ ನಂತರ ಇದೇ ಮೊದಲ ಬಾರಿಗೆ ಮಾಸಿಕ ಟೋಲ್​ ಶುಲ್ಕ ವಸೂಲಿ 2 ಸಾವಿರ ಕೋಟಿ ರೂ. ದಾಟಿದೆ. ಟೋಲ್​ ಪ್ಲಾಜಾಗಳಲ್ಲಿ ಶುಲ್ಕ ಪಾವತಿಗೆ ಕಾಯುವ ಪರಿಪಾಠ ತಪ್ಪಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಳೆದ ಜನವರಿ 15ರಿಂದ ಫಾಸ್ಟ್ಯಾಗ್ ​ ವ್ಯವಸ್ಥೆ ಜಾರಿಗೊಳಿಸಿದೆ. ಫಾಸ್ಟ್ಯಾಗ್ ​ ಮೂಲಕವೇ ಟೋಲ್​ ಶುಲ್ಕ ಪಾವತಿಸುವುದು ಕಡ್ಡಾಯವಾಗಿಸಲಾದ ಕಾರಣ ಈಗಾಗಲೆ ಶೇ. 80 ವಾಹನಗಳು ಫಾಸ್ಟ್ಯಾಗ್ ​ ವ್ಯವಸ್ಥೆ ಅಳವಡಿಸಿಕೊಂಡಿವೆ. ಇದರಿಂದಾಗಿ ಟೋಲ್​ ಶುಲ್ಕ ವಸೂಲಿಯೂ ತಿಂಗಳಿನಿಂದ ತಿಂಗಳಿಗೆ ಹೆಚ್ಚುತ್ತಿದ್ದು, ಅದರಂತೆ ಅಕ್ಟೋಬರ್​ ತಿಂಗಳಲ್ಲಿ 2 ಸಾವಿರ ಕೋಟಿ ರೂ.ಗೂ ಹೆಚ್ಚಿನ ಟೋಲ್​ ಶುಲ್ಕ ವಸೂಲಿಯಾಗಿದೆ.
ಕರೊನಾ ನಡುವೆಯೂ ಹೆಚ್ಚಳ:ಲಾಕ್​ಡೌನ್​ ಮತ್ತು ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಮಾರ್ಚ್​, ಏಪ್ರಿಲ್​ ಮತ್ತು ಮೇ ತಿಂಗಳಲ್ಲಿ ಟೋಲ್​ ಶುಲ್ಕ ವಸೂಲಿ ಪ್ರಮಾಣ ತೀರಾ ಕಡಿಮೆಯಾಗಿತ್ತು. ಆದರೆ, ಲಾಕ್​ಡೌನ್​ ಸಡಿಲಿಕೆ ನಂತರ ವಾಹನ ಸಂಚಾರ ಹೆಚ್ಚಾದಂತೆಲ್ಲ ಟೋಲ್​ ಶುಲ್ಕ ಸಂಗ್ರಹವೂ ಹೆಚ್ಚಾಗಿದೆ. ಅದರಂತೆ ಸೆಪ್ಟೆಂಬರ್​ ತಿಂಗಳಲ್ಲಿ 1,940.60 ಕೋಟಿ ರೂ. ಟೋಲ್​ ಸಂಗ್ರಹವಾಗಿದ್ದರೆ, ಅಕ್ಟೋಬರ್​ನಲ್ಲಿ 2,137.16 ಕೋಟಿ ರೂ. ಶುಲ್ಕ ವಸೂಲಿಯಾಗಿದೆ. 2 ಸಾವಿರ ಕೋಟಿ ರೂ.ಗೂ ಹೆಚ್ಚಿನ ಟೋಲ್​ ಶುಲ್ಕ ವಸೂಲಿಯಾಗಿದ್ದು, ಇದೇ ಮೊದಲ ಬಾರಿಯಾಗಿದೆ. ಲಾಕ್​ಡೌನ್​ ಹಿಂದಿನ ತಿಂಗಳಾದ ಫೆಬ್ರವರಿಯಲ್ಲಿ 1,841 ಕೋಟಿ ರೂ. ಶುಲ್ಕ ವಸೂಲಿಯಾಗಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + three =
Remember me
