ಬೆಂಗಳೂರು:ಡ್ರಾಪ್​ ಕೊಡುವ ನೆಪದಲ್ಲಿ ಮಹಿಳೆಯನ್ನು ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪದ ಮೇಲೆ ಇಬ್ಬರು ಕ್ಯಾಬ್​ ಚಾಲಕರನ್ನು ವಿವೇಕನಗರ ಪೊಲೀಸರು ಬಂಧಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಅಖಿಲೇಶ ಮತ್ತು ಹಾಸನದ ದೀಪು ಬಂಧಿತರು. ಆ.31ರಂದು 25 ವರ್ಷದ ಮಹಿಳೆ ಮೇಲೆ ಆರೋಪಿಗಳು ಕೃತ್ಯ ಎಸಗಿದ್ದರು. ಕ್ಯಾಬ್​ ಚಾಲಕರಾದ ಆರೋಪಿಗಳು, ವಿವೇಕನಗರ ಸಮೀಪದಲ್ಲೇ ನೆಲೆಸಿದ್ದಾರೆ. ಈಜಿಪುರ ಸಮೀಪದಲ್ಲಿದ್ದ ತಮ್ಮ ನಿವೇಶನವನ್ನು ನೋಡಿಕೊಂಡು ಆ.31ರ ಸಂಜೆ 5 ಗಂಟೆಗೆ ಸಂತ್ರಸ್ತೆ ಮನೆಗೆ ಮರಳುತ್ತಿದ್ದಳು. ಈಜಿಪುರದ ಟೊಯೋಟಾ ಟ್ರಾವೆಲ್ಸ್​ ಬಳಿಯ ಚರ್ಚ್​ ಮುಂದೆ ಎರಡು ಬೈಕ್​ಗಳಲ್ಲಿ ಬಂದ ಆರೋಪಿಗಳು, ಡ್ರಾಪ್​ ಕೊಡುವುದಾಗಿ ಬೈಕ್​ಗೆ ಹತ್ತಿಸಿಕೊಂಡಿದ್ದಾರೆ.
ಎಲೆಕ್ಟ್ರಾನಿಕ್ಸ್​ ಸಿಟಿಯ ಹುಸ್ಕೂರಿನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದರು. ಮರುದಿನ ಮುಂಜಾನೆ ಆರೋಪಿಗಳಿಂದ ತಪ್ಪಿಸಿಕೊಂಡು ಬಂದು ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
