ದಾವಣಗೆರೆ:ಇಲ್ಲಿನ ಶಾಂತಿನಗರ ಸಮೀಪ ಯುವತಿಯರಿಬ್ಬರ ನಡುವಿನ ಗಲಾಟೆಗೆ ಕಾರಣ ಸಲಿಂಗಕಾಮ ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ. ಯುವತಿಯೊಬ್ಬಳ ಮೇಲೆ ಆಕೆಯ ಸ್ನೇಹಿತೆಯೇ ಮಾರಣಾಂತಿಕ ಹಲ್ಲೆ ನಡೆಸಿದ್ದು, ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.
ಶಾಂತಿನಗರದ ವಾಸಿ 21 ವರ್ಷದ ಯುವತಿ ಇರಿತಕ್ಕೆ ಒಳಗಾದವಳು. ಗುರುವಾರ ಸಂಜೆ ಈಕೆಯ ಕೆನ್ನೆ, ಕತ್ತು, ಬೆನ್ನು ಹಾಗೂ ಎಡಗಾಲಿನ ಮೇಲೆ ಚಾಕುವಿನಿಂದ ಇರಿದು ಆಪ್ತ ಸ್ನೇಹಿತೆಯೇ ಇರಿದು ಹಲ್ಲೆ ಮಾಡಿದ್ದಾಳೆ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಬಳಿಕ ಡಿಸ್ಚಾರ್ಜ್​ ಆಗಿದ್ದಾಳೆ. ಈಕೆ ಅಂತಿಮ ವರ್ಷದ ಬಿಎ ಓದುತ್ತಿದ್ದು, ಶುಕ್ರವಾರ ನಿಗದಿ ಆಗಿದ್ದ ಸಮಾಜಶಾಸ್ತ್ರ ಪರೀಕ್ಷೆಯನ್ನು ವೈದ್ಯರ ಸಲಹೆ ಪಡೆದು ಬರೆದಿದ್ದಾಳೆ. ಆರೋಪಿಯು ಚಿಕ್ಕಮಗಳೂರು ಜಿಲ್ಲೆ ಕಡೂರು ಮೂಲದವಳು. ವಾರದ ಹಿಂದಷ್ಟೇ ಬಿಎಸ್ಸಿ ಪರೀಕ್ಷೆ ಬರೆದು ಇಲ್ಲಿಯೇ ಇದ್ದಳು. ಇವರಿಬ್ಬರೂ ಒಂದೇ ಕಾಲೇಜಿನವರಾಗಿದ್ದು ಪರಸ್ಪರ ಆಪ್ತವಾಗಿದ್ದರು. ಸಲಿಂಗಕಾಮ ರೀತಿಯಲ್ಲಿ ಪ್ರೇಮಿಸುತ್ತಿದ್ದರಂತೆ.
ಈ ನಡುವೆ ದಾವಣಗೆರೆಯ ಯುವತಿ ಬೇರೊಬ್ಬ ಹುಡುಗನ ಜತೆ ಸ್ನೇಹ ಬೆಳೆಸಿದ್ದಳು. ಇದನ್ನು ಸಹಿಸದ ಕಡೂರು ಮೂಲದ ಯುವತಿ, ಗೆಳತಿ ತನ್ನನ್ನು ನಿರ್ಲಕ್ಷಿಸುತ್ತಿದ್ದಾಳೆ. ಬೇರೊಬ್ಬನ್ನ ಜತೆ ಆಪ್ತವಾಗಿದ್ದಾಳೆ ಎಂದು ಕುಪಿತಗೊಂಡು ಚಾಕುವಿನಿಂದ ಇರಿದಿದ್ದಾಳೆ. ಆರೋಪಿಯನ್ನ ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿ ಕೊಲೆ ಯತ್ನ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.
ತನ್ನ ಗೆಳತಿ ಹುಡುಗನೊಬ್ಬನ ಜತೆ ಅಫೇರ್​ ಹೊಂದಿದ ಕಾರಣಕ್ಕೆ ಕೊಲೆಗೆ ಯತ್ನಿಸಿದ ಶಂಕೆ ಇದೆ. ಇಬ್ಬರೂ ಸ್ನೇಹಿತೆಯರು ಸಲಿಂಗಕಾಮ ರೀತಿಯಲ್ಲಿ ಪ್ರೇಮಿಸುತ್ತಿದ್ದರು ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ. ವಿಚಾರಣೆಯಿಂದ ಖಚಿತ ವಾಗಬೇಕಿದೆ. ಇಬ್ಬರ ಮಾನಸಿಕ ಸ್ಥಿತಿ ಬಗ್ಗೆ ವೈದ್ಯಕೀಯ ಪರೀಕ್ಷೆಯಿಂದ ದೃಢವಾಗಬೇಕಿದೆ ಎಂದು ಜಿಲ್ಲಾ ಪೊಲೀಸ್​ ಅಧೀಕ್ಷಕ ಸಿ.ಬಿ.ರಿಷ್ಯಂತ್​ ತಿಳಿಸಿದ್ದಾರೆ.
ಹಾರ್ಲೆ ಡೆವಿಡ್ಸನ್​ ಬೈಕ್​ ಓಡಿಸಿ ಬೇಬಿ ಬಂಪ್​ ಫೋಟೋಶೂಟ್ ಮಾಡಿಸಿಕೊಂಡ ಮಲೆನಾಡ ಬೆಡಗಿ!

ಜಿಟಿಡಿ ನಾಯಕತ್ವದ ಬಗ್ಗೆ ಅಪಸ್ವರ ಕೇಳಿ ಬಂದ್ರೆ ನಾನು ಸಹಿಸಲ್ಲ: ಮೈಸೂರಲ್ಲಿ ಎಚ್​.ಡಿ.ದೇವೇಗೌಡ ಖಡಕ್​ ವಾರ್ನಿಂಗ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 17 =
Remember me
