ಶಿವಮೊಗ್ಗ:ಶಿವಮೊಗ್ಗದಲ್ಲಿ ಶಂಕಿತ ಉಗ್ರರಿಬ್ಬರನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇಬ್ಬರನ್ನೂ ಕೋರ್ಟ್​ಗೆ ಹಾಜರು ಪಡಿಸಲಾಗಿತ್ತು. 7 ದಿನಗಳ ಕಾಲ ಪೊಲೀಸರ ಕಸ್ಟಡಿಗೆ ಕೋರ್ಟ್​ ನೀಡಿದ್ದು, ತೀವ್ರ ವಿಚಾರಣೆ ನಡೆಯುತ್ತಿದೆ.
ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಶಿವಮೊಗ್ಗದಲ್ಲಿ ಐಎಸ್​ಐಎಸ್ ಉಗ್ರ ಸಂಘಟನೆಯ ಮೂರು ಜನ ಪತ್ತೆಯಾಗಿದ್ದಾರೆ. ಇದರಲ್ಲಿ ಮಾಝ್​​ ಮತ್ತು ಸೈಯದ್ ಯಾಸಿನ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತ್ತೊಬ್ಬ ಪ್ರಮುಖ ಆರೋಪಿ ಶಾರೀಕ್​ ತಪ್ಪಿಸಿಕೊಂಡಿದ್ದಾನೆ. ಆತನನ್ನು ಪತ್ತೆ ಮಾಡುತ್ತೇವೆ. ಇವರು ಶಿವಮೊಗ್ಗ-ತೀರ್ಥಹಳ್ಳಿ ನಿವಾಸಿಗಳು. ಇವರಿಗೆ ಕಾರವಾರದ ಸಂಪರ್ಕ ಇತ್ತು. ತನಿಖೆ ನಡೆಯುತ್ತಿದೆ, ಈಗಲೇ ಏನು ಹೇಳೋಕೆ ಆಗಲ್ಲ. ಇವರೆಲ್ಲಾ ದೇಶದ ವಿರುದ್ಧ ಆಲೋಚನೆ ಮಾಡುತ್ತಿದ್ದಾರೆ. ಇದು ಆತಂಕಕಾರಿ ಬೆಳವಣಿಗೆ ಎಂದರು.
ಶಂಕಿತ ಉಗ್ರರಿಬ್ಬರ ಬಂಧನ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಶಿವಮೊಗ್ಗ ಎಸ್​ಪಿ ಲಕ್ಷ್ಮೀಪ್ರಸಾದ್, ಆರೋಪಿಗಳಿಬ್ಬರನ್ನು 7 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ಪಡೆಯಲಾಗಿದೆ. ಮಾಝ್​​ ಮತ್ತು ಶಾರೀಕ್​ ಮೇಲೆ ಮಂಗಳೂರಲ್ಲಿ ಗೋಡೆ ಬರಹ ಕೇಸ್​ ಇತ್ತು. ಬೇಲ್​ನಲ್ಲಿದ್ದರು. ನಿಷೇಶಿಧಿತ ಉಗ್ರ ಸಂಘಟನೆಯಲ್ಲಿ ಇವರು ಕೆಲಸ ಮಾಡ್ತಿದ್ದರು ಎಂಬ ಮಾಹಿತಿ ಇದೆ. ತನಿಖೆ ನಂತರ ಹೆಚ್ಚಿನ ಮಾಹಿತಿ ಕೊಡ್ತೀವಿ ಎಂದರು.
ಶಿವಮೊಗ್ಗದಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ: ಐಸಿಸ್​ ಜತೆ ನಿಕಟ ಸಂಪರ್ಕ

https://www.vijayavani.net/a-huliyaru-police-sudhas-life-is-tragic-end-behind-the-triangle-love/
ಹುಳಿಯಾರಿನ ಪೇದೆ ಸುಧಾ ಕೊಲೆ ಹಿಂದಿದೆ ತ್ರಿಕೋನ ಪ್ರೇಮ! ಓರ್ವ ಪೊಲೀಸಪ್ಪನನ್ನು ಪ್ರೀತಿಸುತ್ತಿದ್ದ ಇಬ್ಬರು ಮಹಿಳಾ ಪೇದೆಗಳು

ಗಣೇಶೋತ್ಸವ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸುತ್ತಲೇ ಪ್ರಾಣ ಬಿಟ್ಟ! ಡಿಜೆ ಸೌಂಡ್ಸ್​ ಎಫೆಕ್ಟ್​ಗೆ ಹೃದಯಾಘಾತ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 8 =
Remember me
