ಎಚ್​.ಡಿ.ಕೋಟೆ:ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಡಿ.ಬಿ.ಕುಪ್ಪೆ ಅರಣ್ಯ ವಲಯದ ಸುಳಿಬಳ್ಳೆ ಗಸ್ತಿನಲ್ಲಿ ಎರಡು ಹುಲಿ ಮರಿಗಳ ಕಳೇಬರ ಪತ್ತೆಯಾಗಿವೆ.
ಅಂದಾಜು 8-9 ತಿಂಗಳ ಪ್ರಾಯದ ಹುಲಿ ಮರಿಗಳಾಗಿದ್ದು, ಒಂದು ಹೆಣ್ಣು ಹುಲಿಯಾದರೆ, ಇನ್ನೊಂದು ಹುಲಿ ಮರಿಯ ಲಿಂಗ ಪತ್ತೆಯಾಗಿಲ್ಲ. ಲಿಂಗ ಪತ್ತೆ ಪರೀಕ್ಷೆಗಾಗಿ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ಬೆಳಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸುಳಿಬಳ್ಳೆ ಗಸ್ತಿನಲ್ಲಿ ಹುಲಿ ಗಣತಿ ಮಾಡುವ ಸಂದರ್ಭದಲ್ಲಿ ಕಾಡು ಪ್ರಾಣಿಯ ಮೃತದೇಹದ ಗಬ್ಬುವಾಸನೆ ಬಂದಿದೆ. ವಾಸನೆ ಜಾಡು ಹಿಡಿದು ಸ್ಥಳಕ್ಕೆ ಹೋಗಿ ನೋಡಿದಾಗ ಹುಲಿ ಮರಿ ಸತ್ತಿರುವುದು ಕಂಡುಬಂದಿದೆ.
ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಮೂರು ಸಾಕಾನೆಗಳ ಮೂಲಕ ಕೂಂಬಿಂಗ್​ ನಡೆಸಿದಾಗ ಮತ್ತೊಂದು ಹುಲಿ ಮರಿ ಸತ್ತಿರುವುದು ಪತ್ತೆಯಾಯಿತು. ಎರಡೂ ಹುಲಿಗಳ ಕಳೇಬರಗಳನ್ನು ಅರಣ್ಯ ಇಲಾಖೆ ಪಶುವೈದ್ಯ ಡಾ.ಪ್ರಸನ್ನ ಬಿ.ಬಿ. ಹಾಗೂ ಕಂಚಮಳ್ಳಿ ಪಶುವೈದ್ಯಾಧಿಕಾರಿ ಡಾ.ರಮೇಶ್​ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಮೃತದೇಹಗಳನ್ನು ಅದೇ ಸ್ಥಳದಲ್ಲಿ ಸುಡಲಾಯಿತು.
ಸೋಮವಾರ ರಾತ್ರಿ ಬಲಿಷ್ಠ ಹುಲಿಯೊಂದು ಎರಡು ಮರಿಗಳ ಮೇಲೆ ದಾಳಿ ನಡೆಸಿ ಬಲಿ ಪಡೆದಿರಬಹುದೆಂದು ಎಸಿಎಫ್​ ಎಸ್​.ಪಿ.ಮಹದೇವು ತಿಳಿಸಿದ್ದಾರೆ.
ಬರ್ತ್​ ಡೇ ಆಚರಿಸಿಕೊಳ್ಳಲ್ಲ, ಹೊಸ ಯೋಜನೆಗಳ ಘೋಷಣೆ ಇಲ್ಲ: ಸಿಎಂ ಬೊಮ್ಮಾಯಿ

ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ್ದ ಪೊಲೀಸ್ ಅಧಿಕಾರಿ ಕುಸಿದು ಬಿದ್ದು ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − seven =
Remember me
