ಚಿಕ್ಕಬಳ್ಳಾಪುರ:ಮಗಳ ಮದ್ವೆ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸೂತಕ ಆವರಿಸಿದೆ. ಹಸೆಮಣೆ ಏರಬೇಕಿದ್ದ ಯುವತಿ ಆಸ್ಪತ್ರೆ ಸೇರಿದ್ದಾಳೆ, ಅತ್ತ ಪ್ರೀತಿಯ ತಂಗಿ ಮದುಮಗಳಾಗುವುದನ್ನ ಕಣ್ತುಂಬಿಕೊಳ್ಳಬೇಕಿದ್ದ ಅಣ್ಣ ಬಾರದ ಲೋಕಕ್ಕೆ ಹೋಗಿಬಿಟ್ಟಿದ್ದಾನೆ… ಸಾವಿಗೂ ಮುನ್ನ ಆಸ್ಪತ್ರೆಯಲ್ಲಿ ಹಾಸಿಗೆ ಸಿಕ್ಕಿದ್ದರೆ ಈ ಸಾವು ಸಂಭವಿಸುತ್ತಿರಲಿಲ್ಲ… ಎಂದು ಹೆತ್ತವರು ಗೋಳಾಡುತ್ತಿದ್ದಾರೆ.
ಶಿಡ್ಲಘಟ್ಟ ತಾಲೂಕಿನ ವೀರಾಪುರದ ರವಿ (24) ಮೃತ ದುರ್ದೈವಿ. ಈತನ ಸಹೋದರಿ ಪಲ್ಲವಿ ಜತೆ ವೀರಾಪುರದ ಮಣಿಕಂಠನ ವಿವಾಹ ನಿಶ್ಚಯವಾಗಿತ್ತು. ಮದುವೆಗೆ ಎರಡೂ ಕುಟುಂಬಸ್ಥರು ಸಿದ್ಧತೆಯಲ್ಲಿದ್ದರು. ಸೋಮವಾರ ಮದುವೆ ಸಾಮಗ್ರಿ ಖರೀದಿಸಲು ಸಹೋದರಿ ಪಲ್ಲವಿಯೊಂದಿಗೆ ಬೈಕ್​ನಲ್ಲಿ ರವಿ ಶಿಡ್ಲಘಟ್ಟ ನಗರಕ್ಕೆ ಬಂದಿದ್ದ. ವಾಪಸ್​ ಊರಿಗೆ ಹೋಗುವಾಗ ಇದ್ದಲೋಡು ಪಲಿಚೇರ್ಲು ಮಾರ್ಗದ ರಸ್ತೆಯಲ್ಲಿ ಟ್ರ್ಯಾಕ್ಟರ್​ ಡಿಕ್ಕಿ ಹೊಡೆದಿತ್ತು.
ಅಪಾಘತದಲ್ಲಿ ರವಿ ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ರವಿಗೆ ಚಿಕಿತ್ಸೆ ಕೊಡಿಸಲು ಶಿಡ್ಲಘಟ್ಟ ತಾಲೂಕು ಆಸ್ಪತ್ರೆ, ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆ, ಬೆಂಗಳೂರಿನ ನಿಮ್ಹಾನ್ಸ್​ ಆಸ್ಪತ್ರೆಗೆ ಸಂಬಂಧಿಕರು ಕರೆದೊಯ್ದಿದ್ದರು. ಪ್ರಾಥಮಿಕ ಚಿಕಿತ್ಸೆ ಕೊಟ್ಟ ಬಳಿಕ ಬೇರೆ ಆಸ್ಪತ್ರೆಗೆ ಹೋಗಲು ವೈದ್ಯರು ಸಲಹೆ ನೀಡಿದ್ದರು. ಉಳಿದಂತೆ ಬೆಂಗಳೂರಿನ ಜಯದೇವ, ವಿಕ್ಟೋರಿಯಾ ಆಸ್ಪತ್ರೆಗೆ ಹೋದರೂ ಹಾಸಿಗೆ ಸಿಕ್ಕಿಲ್ಲ. ಮತ್ತೆ ಶಿಡ್ಲಘಟ್ಟ ಆಸ್ಪತ್ರೆಗೆ ಆಂಬುಲೆನ್ಸ್​ನಲ್ಲಿ ಕರೆತರುವಾಗ ಮಾರ್ಗಮಧ್ಯೆ ರವಿ ಕೊನೆಯುಸಿರೆಳೆದಿದ್ದಾನೆ.
ರವಿಗೆ ಚಿಕಿತ್ಸೆ ಕೊಡಿಸಲು ಅಲ್ಲಲ್ಲಿ ಅಲೆದಾಡಬೇಕಾಯಿತೇ ಹೊರತೂ ಜೀವ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ… ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೆ ರವಿ ಮೃತಪಟ್ಟಿದ್ದಾನೆ ಸಂಬಂಧಿಕರು ಅಳಲು ತೋಡಿಕೊಂಡು ಶಿಡ್ಲಘಟ್ಟ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ. ಅತ್ತ ಅಪಘಾತದಲ್ಲಿ ಗಾಯಗೊಂಡು ಸಾವುಬದುಕಿನ ನಡುವೆ ಹೋರಾಡುತ್ತಿರುವ ಪವಿತ್ರಾಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಕ್ಕನ ಚಿತೆಗೆ ಹಾರಿ ಪ್ರಾಣಬಿಟ್ಟ ತಮ್ಮ! ನೋವಲ್ಲೇ 430km ದೂರದಿಂದ ಬಂದವ ನೋಡನೋಡುತ್ತಿದ್ದಂತೆ ಸುಟ್ಟು ಕರಕಲಾದ

ಕಾಸ್ಟಿಂಗ್ ಕೌಚ್ ವಿರುದ್ಧ ಸಿಡಿದೆದ್ದ ಯುವರತ್ನ ಚಿತ್ರ ಖ್ಯಾತಿಯ ಎಂ.ಕೆ.ಮಠ! ಕಲಾವಿದೆಯನ್ನು ಮಂಚಕ್ಕೆ ಕರೆದವನಿಗೆ ತರಾಟೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − ten =
Remember me
