ಬೆಂಗಳೂರು:ದ್ವಿಚಕ್ರ ವಾಹನಕ್ಕೆ ನಕಲಿ ನಂಬರ್​ ಪ್ಲೇಟ್​ ಹಾಕಿಕೊಂಡು ಸಂಚಾರ ನಿಯಮ ಉಲ್ಲಂಘಿಸಿ ಪೊಲೀಸರಿಗೆ ಅಶ್ಲೀಲವಾಗಿ ಕೈಸನ್ನೆ ಮಾಡುತ್ತಿದ್ದವ ಕೊನೆಗೂ ಸಿಕ್ಕಿಬಿದ್ದಿದ್ದಾನೆ.
ಪಟ್ಟೇಗಾರಪಾಳ್ಯದ ಆರ್​.ನಿಖಿಲ್ ಬಂಧಿತ. ಜು.3ರ ಬೆಳಗ್ಗೆ ವಿಜಯನಗರದ ಮಾರೇನಹಳ್ಳಿ ಜಂಕ್ಷನ್​ನಲ್ಲಿ ಕಾನ್​ಸ್ಟೆಬಲ್​ ಹರೀಶ್​, ಡಿಜಿಟಲ್​ ಪ್ರಕರಣ ದಾಖಲಿಸುತ್ತಿದ್ದರು. ಈ ವೇಳೆ ವಿಜಯನಗರ ಕ್ಲಬ್​ ರಸ್ತೆ ಕಡೆಯಿಂದ ದ್ವಿಚಕ್ರ ವಾಹನದಲ್ಲಿ ಬಂದ ನಿಖಿಲ್​, ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದಿದ್ದ. ಕಾನ್​ಸ್ಟೆಬಲ್​ ತಮ್ಮ ಮೊಬೈಲ್​ನಲ್ಲಿ ಫೋಟೋ ತೆಗೆದುಕೊಳ್ಳಲು ಮುಂದಾದಾಗ ಅಶ್ಲೀಲವಾಗಿ ಕೈಸನ್ನೆ ಮಾಡಿದ್ದ. ಈ ವೇಳೆ ಆರೋಪಿಯನ್ನು ಸ್ಥಳೀಯರು ಸುತ್ತುವರಿದು ಹಿಡಿದಿದ್ದರು. ಈತನ ಹತ್ತಿರ ಕಾನ್​ಸ್ಟೆಬಲ್​ ಹೋಗುತ್ತಿದಂತೆ ದ್ವಿಚಕ್ರ ವಾಹನವನ್ನು ಸ್ಥಳದಲ್ಲೇ ಬಿಟ್ಟು ಆರೋಪಿ ಪರಾರಿಯಾಗಿದ್ದ.
ದ್ವಿಚಕ್ರ ವಾಹನವನ್ನ ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ನಂಬರ್​ ಪ್ಲೇಟ್​ ನಕಲಿ ಎಂಬುದು ಗೊತ್ತಾಗಿತ್ತು. ಸಂಚಾರ ನಿಯಮ ಉಲ್ಲಂಘನೆಯ 55 ಪ್ರಕರಣ ಪತ್ತೆಯಾಗಿತ್ತು. ದ್ವಿಚಕ್ರ ವಾಹನ ಮಾಲೀಕ ಪಟ್ಟೇಗಾರಪಾಳ್ಯದ ನಿಖಿಲ್​ ಎಂಬಾತನ ವಿರುದ್ಧ ವಿಜಯನಗರ ಸಂಚಾರ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದ್ದು, ದ್ವಿಚಕ್ರ ವಾಹನ ಜಪ್ತಿ ಮಾಡಿ 28,500 ರೂ. ದಂಡ ವಸೂಲಿ ಮಾಡಿದ್ದಾರೆ. ತಲೆಮರೆಸಿಕೊಂಡಿದ್ದ ಆರೋಪಿ ನಿಖಿಲ್ ಮಂಗಳವಾರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಎಎನ್​ಪಿಆರ್​ ಅಸ್ತ್ರ:ಬೈಕ್​ಗಳಿಗೆ ನಕಲಿ ನಂಬರ್​ ಪ್ಲೇಟ್​ ಬಳಸಿ ಸಂಚಾರ ನಿಯಮ ಉಲ್ಲಂನೆ ಮಾಡುವುದರ ಜತೆಗೆ ಸಂಚಾರ ಪೊಲೀಸರಿಗೆ ಸವಾರರು ಅಶ್ಲೀಲವಾಗಿ ಕೈಸನ್ನೆ ಮಾಡುತ್ತಾರೆ. ಇಂತವರ ಫೋಟೋ ತೆಗೆದು ಆಟೋಮೆಟಿಕ್​ ನಂಬರ್​ ಪ್ಲೇಟ್​ ರೆಕ್ನೋನೇಷನ್​ ಕ್ಯಾಮರಾ (ಎಎನ್ಪಿಆರ್​) ಸಹಾಯದಿಂದ ಅಸಲಿ ವಾಹನಗಳ ಮಾಲೀಕ ಪತ್ತೆ ಮಾಡಲಾಗುತ್ತದೆ. ಆನಂತರ ನಕಲಿ ನಂಬರ್​ ಪ್ಲೇಟ್​ ಬಳಸುವ ವಾಹನ ಸವಾರರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ವಾಹನಗಳಿಗೆ ನಕಲಿ ನಂಬರ್​ ಪ್ಲೇಟ್​ ಬಳಸಿ ಸಂಚಾರ ನಿಯಮ ಉಲ್ಲಂಘಿಸುವರ ಸಂಖ್ಯೆ ಹೆಚ್ಚಾಗಿದೆ. ತಾಂತ್ರಿಕ ಮಾಹಿತಿ ಆಧರಿಸಿ ಇಂತಹ ವಾಹನಗಳನ್ನು ಪತ್ತೆ ಮಾಡಲಾಗುತ್ತದೆ.| ಡಾ.ಬಿ.ಆರ್​. ರವಿಕಾಂತೇಗೌಡಜಂಟಿ ಪೊಲೀಸ್​ ಆಯುಕ್ತ(ಸಂಚಾರ)
ಸರಳ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಭೀಕರ ಕೊಲೆ: ಬೆಚ್ಚಿಬಿದ್ದ ಹುಬ್ಬಳ್ಳಿ ಜನತೆ

ದಯವಿಟ್ಟು ನನ್ನ ಮಗನಿಗೆ ಯಾರೂ ಸಾಲ ಕೊಡ್ಬೇಡಿ… ಸುಳ್ಳು ಹೇಳಿ ಜನರಿಗೆ ಮೋಸ ಮಾಡ್ತಿದ್ದಾನೆ: ಮಾಜಿ ಶಾಸಕ ಮನವಿ

ನನಗೆ ಮೊದಲು ಡಾನ್ಸ್ ಹವ್ಯಾಸವಿತ್ತು… ಆದರೀಗ ಬೇರೆಯವರನ್ನ ಕುಣಿಸುವೆ, ನಾನು ಕುಣಿಯಲ್ಲ: ಲಕ್ಷ್ಮೀ ಹೆಬ್ಬಾಳ್ಕರ್

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:eleven − eleven =
Remember me
