ಬೆಂಗಳೂರು:ಬಿಎಂಟಿಸಿ, ಕೆಎಸ್​ಆರ್​ಟಿಸಿ ಸೇರಿ ನಾಲ್ಕು ಸಾರಿಗೆ ನಿಗಮಗಳು ಸ್ವಂತ ಬಲದ ಮೇಲೆ 2030ರ ವೇಳೆಗೆ ಬಸ್​ಗಳ ಸಂಖ್ಯೆಯನ್ನು 40 ಸಾವಿರಕ್ಕೆ ಹೆಚ್ಚಿಸಿಕೊಳ್ಳಬೇಕು ಎಂದು ನಿವೃತ್ತ ಐಎಎಸ್ ಅಧಿಕಾರಿ ಎಂ ‌ಆರ್.ಶ್ರೀನಿವಾಸ ಮೂರ್ತಿ ನೇತೃತ್ವದ ಏಕ ಸದಸ್ಯ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರಿಗೆ ಸಮಿತಿ ಮುಖ್ಯಸ್ಥ ಎಂ.ಆರ್.ಶ್ರೀನಿವಾಸ ಮೂರ್ತಿ, ನಾಲ್ಕು ಸಾರಿಗೆ ನಿಗಮಗಳ ಪುನಶ್ಚೇತನಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧ್ಯಯನ ನಡೆಸಿದ ವರದಿ ಸಲ್ಲಿಸಿದರು.
ನಾಲ್ಕು ಸಾರಿಗೆ ನಿಗಮಗಳ ಒಟ್ಟು ಬಸ್​ಗಳ ಸಂಖ್ಯೆ ಸದ್ಯಕ್ಕೆ 24 ಸಾವಿರದಷ್ಟಿದೆ. ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆ ಬೇಡಿಕೆ, ರಸ್ತೆಗಳ ನಿರ್ಮಾಣಕ್ಕೆ ತಕ್ಕಂತೆ ಬಸ್​ಗಳ ವ್ಯವಸ್ಥೆ ಮಾಡಬೇಕಾಗಿದ್ದು, ಇದಕ್ಕಾಗಿ 2030ರ ವೇಳೆಗೆ ಬಸ್​ಗಳ ಬಲವನ್ನು 40 ಸಾವಿರಕ್ಕೆ ಏರಿಸಬೇಕು.
ಹೊಸ ಬಸ್​ಗಳ ಖರೀದಿಗೆ ಸರ್ಕಾರದ ಅನುದಾನವನ್ನು ಅವಲಂಬಿಸದೆ ಸ್ವಂತ ಆರ್ಥಿಕ ಸಂಪನ್ಮೂಲ ಹೊಂದಬೇಕು. ಇದಕ್ಕಾಗಿ ಕೈಗೊಳ್ಳಬೇಕಾದ ಆರ್ಥಿಕ ಸುಧಾರಣೆ ಕ್ರಮಗಳನ್ನು ಪ್ರಸ್ತಾಪಿಸಿದೆ. ಪ್ರತಿ ಬಸ್​ಗೆ ಚಾಲಕ, ನಿರ್ವಾಹಕ ಇಬ್ಬರನ್ನು ನಿಯೋಜಿಸುವ ಬದಲಿಗೆ ಚಾಲಕನನ್ನು ಮಾತ್ರ ನಿಯೋಜಿಸಬೇಕು. ಮಾರ್ಗಗಳ ಪುನರ್ ರಚನೆ, ಸ್ಥಿರಾಸ್ತಿಗಳ ಸಮರ್ಪಕ ಬಳಕೆ ಸೇರಿ ಹಲವು ಉಪಕ್ರಮಗಳನ್ನು ಈ ಸಮಿತಿ ವಿವರಿಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ವರದಿ ಸ್ವೀಕರಿಸಿದ ಸಿಎಂ ಬೊಮ್ಮಾಯಿ‌, ಜು.22ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಹನಿಟ್ರ್ಯಾಪ್​ ಕೇಸಲ್ಲಿ ಕಾಂಗ್ರೆಸ್​ ಯುವ ನಾಯಕಿ ನವ್ಯಶ್ರೀ: ವಿಧಾನಸಭೆ ಚುನಾವಣೆಗೂ ಸ್ಪರ್ಧಿಸಿದ್ದ ಈಕೆ ಹಿನ್ನೆಲೆ ಇಲ್ಲಿದೆ

ಕಾಂಗ್ರೆಸ್​ ನಾಯಕಿ ವಿರುದ್ಧ ಬೆಳಗಾವಿಯಲ್ಲಿ FIR ದಾಖಲು! ಖಾಸಗಿ ವಿಡಿಯೋ ತೋರಿಸಿ ಆಕೆ ಕೊಟ್ಟ ಚಿತ್ರಹಿಂಸೆ ಅಷ್ಟಿಷ್ಟಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
