ಬೆಂಗಳೂರು:ಡಿವೋರ್ಸ್ ಆಗಿರುವ ಮಹಿಳೆಯರು ಮತ್ತು ವಿಧವೆಯರನ್ನೇ ಟಾರ್ಗೆಟ್​ ಮಾಡಿ ಅವರನ್ನ ಪುಸಲಾಯಿಸಿ ಸ್ನೇಹ ಬೆಳೆಸುತ್ತಿದ್ದ ಖತರ್ನಾಕ್​ ಲೇಡಿಯೊಬ್ಬಳು, ತನ್ನ ಗ್ಯಾಂಗ್​ ಜೊತೆ ಸೇರಿಕೊಂಡು ಮಾಡಬಾರದ್ದು ಮಾಡಿ ಸಿಕ್ಕಿಬಿದ್ದಿದ್ದಾಳೆ. ಈಕೆಯ ಗ್ಯಾಂಗ್​ನಲ್ಲಿದ್ದ ಮೂವರು ಪುರುಷರನ್ನೂ ಪೊಲೀಸರು ಬಂಧಿಸಿದ್ದಾರೆ.
ಮಂಗಳಾ, ರವಿ, ಶಿವಕುಮಾರ್, ಶ್ರೀನಿವಾಸ್ ಬಂಧಿತರು. ಮಂಗಳ ಮತ್ತು ರವಿ ಇಬ್ಬರೂ ಗಂಡ-ಹೆಂಡತಿ. ಗಂಡನಿಂದ ದೂರವಾದ, ಗಂಡನನ್ನು ಕಳೆದುಕೊಂಡು ಒಂಟಿಯಾಗಿರುವ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಈ ಗ್ಯಾಂಗ್​, ಮಂಗಳಾ ಮೂಲಕ ಟ್ರ್ಯಾಪ್​ ಮಾಡುತ್ತಿತ್ತು.
ಒಂಟಿ ಮಹಿಳೆಯರನ್ನ ಪರಿಚಯ ಮಾಡಿಕೊಂಡು ಅವರ ನಂಬಿಕೆ ಗಳಿಸುತ್ತಿದ್ದ ಮಂಗಳಾ, ಬಳಿಕ ಯಾವುದೋ ನೆಪ ಮಾಡಿಕೊಂಡು ಫೋನ್ ಮಾಡಿ ಭೇಟಿಯಾಗೋಣ ಎಂದು ಕರೆಯುತ್ತಿದ್ದಳು. ಅದರಂತೆ ಭೇಟಿಯಾಗಲು ಬರುತ್ತಿದ್ದ ಮಹಿಳೆಯರನ್ನ ಕಾರಿನಲ್ಲಿ ಕೂರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬಟ್ಟೆ ಬಿಚ್ಚಲು ಹೇಳ್ತಿದ್ರು. ಒಪ್ಪದಿದ್ದಾಗ ಹಲ್ಲೆ ಮಾಡಿ ಬಟ್ಟೆ ಬಿಚ್ಚಿಸುತ್ತಿದ್ದರು. ನಂತರ ಬೆತ್ತಲೆ ದೃಶ್ಯವನ್ನ ಮೊಬೈಲ್​ನಲ್ಲಿ ಸೆರೆ ಹಿಡಿದು ಹಣಕ್ಕಾಗಿ ಬ್ಲ್ಯಾಕ್​ ಮೇಲ್ ಮಾಡುತ್ತಿದ್ದರು.
ಇದೇ ರೀತಿ ಮಹಾಲಕ್ಷ್ಮೀ ಲೇಔಟ್​ನ ಮಹಿಳೆಯೊಬ್ಬರಿಂದ ಚಿನ್ನದ ಸರ, ಕಿವಿಯೋಲೆ, ಉಂಗುರ ಕಿತ್ತುಕೊಂಡಿದ್ದರು. ಇಷ್ಟಕ್ಕೆ ಸುಮ್ಮನಾಗದ ಕಿಡಿಗೇಡಿಗಳು, ವಿಡಿಯೋ ತೋರಿಸಿ ಬ್ಲ್ಯಾಕ್ ಮೇಲ್ ಮಾಡಿ 84 ಸಾವಿರ ರೂ. ಪಡೆದಿದ್ದರು. ಮತ್ತೆ ಹಣಕ್ಕಾಗಿ ಪೀಡಿಸಿದಾಗ ಬೇಸತ್ತ ಮಹಿಳೆಯು ಮಹಾಲಕ್ಷ್ಮೀ ಲೇಔಟ್ ಠಾಣೆಗೆ ದೂರು ನೀಡಿದ್ದರು. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಯುವಕನೆಂದು ಮಂಗಳಮುಖಿಯನ್ನು ಪ್ರೀತಿಸಿದ ಬಂಟ್ವಾಳ ಯುವತಿ! 4 ವರ್ಷದ ಬಳಿಕ ಸತ್ಯ ಹೊರಬಿದ್ದದ್ದೇ ರೋಚಕ

ಮೃತಪಟ್ಟ 30 ವರ್ಷದ ಬಳಿಕ ವಿವಾಹ! ದಕ್ಷಿಣ ಕನ್ನಡದಲ್ಲಿ ಅದ್ದೂರಿಯಾಗಿ ನಡೆಯಿತು ಪ್ರೇತಗಳ ಮದ್ವೆ

ಸಿದ್ದರಾಮೋತ್ಸವ ಹಿನ್ನೆಲೆ ಲಾಡ್ಜ್‌, ಹೋಟೆಲ್​, ರೆಸ್ಟೋರೆಂಟ್‌ಗಳು ಹೌಸ್‌ಫುಲ್! ಕೋಟ್ಯಂತರ ರೂಪಾಯಿ ವಹಿವಾಟು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
