ಬೆಂಗಳೂರು:ನಗರದ ವಿವಿಧ ಕಡೆಗಳಲ್ಲಿ ಶನಿವಾರ ಬಿರುಗಾಳಿಗೆ 18 ಮರ, 56 ಕೊಂಬೆಗಳು ಮುರಿದು ಬಿದ್ದಿವೆ. ಮೂವರಿಗೆ ಗಾಯವಾಗಿದ್ದು, ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದ್ವಿಚಕ್ರ ಸೇರಿ ಹಲವು ವಾಹನಗಳು ಜಖಂಗೊಂಡಿವೆ. ರಿಚ್​ಮಂಡ್​ ರಸ್ತೆಯ ಮೆಹಕ್​ ಪಫ್ಯೂರ್ಮ್ಸ್​ ಅಂಡ್​ ಅಕ್ಸೆಸರೀಸ್​ ಕಟ್ಟಡ ಒಳಭಾಗದಲ್ಲಿ ಬೆಳೆದಿದ್ದ ಗುಲ್ಮರ್​ ಮರವು ರಸ್ತೆಯಲ್ಲಿ ಸಂಚರಿಸುತ್ತಿದ್ದ ಆಟೋದ ಮೇಲೆ ಬಿದ್ದಿದೆ. ಶಕ್ತಿ ಗಣಪತಿನಗರ ನಿವಾಸಿ, ಚಾಲಕ ದಿವಾಕರ್​, ಪ್ರಯಾಣಿಕ ಸ್ಟಾಲಿನ್​ಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.
ಸುಂಕೇನಹಳ್ಳಿ ಉದ್ಯಾನದಲ್ಲಿ ಗಾಳಿ ರಭಸಕ್ಕೆ ಮರದ ಕೊಂಬೆಗಳು ರಸ್ತೆಯಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ವಾಹನದ ಮುಂಭಾಗದ ಮೇಲೆ ಮುರಿದು ಬಿದ್ದಿರುವ ಪರಿಣಾಮ ಗಗನ್​ ಮತ್ತು ಅವರ ಪುತ್ರ ಯುವಗೆ ಸಣ್ಣ ಗಾಯವಾಗಿದೆ. ಗಾಯಾಳುಗಳಿಗೆ ಪಾಲಿಕೆಯಿಂದ ಶೇಖರ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಿನ್ನಿಮಿಲ್​ ಎಂಪ್ಲಾಯಿಸ್​ ಕಾಲನಿ, ಟೆಲಿಕಾಂ ಲೇಔಟ್​ನ ಅಂಬಾಭವಾನಿ ದೇವಸ್ಥಾನದ ಬಳಿ ಹಾಗೂ ಬಸವನಗುಡಿಯ ಸೌತ್​ಎಂಡ್​ ಸರ್ಕಲ್​ ರಸ್ತೆಯಲ್ಲಿ ರೆಂಬೆ ಬಿದ್ದ ರಭಸಕ್ಕೆ ವಾಹನಗಳು ಜಖಂಗೊಂಡಿದೆ. ಸಂಚಾರಿ ಪೋಲಿಸರ ಸಹಯೋಗದಲ್ಲಿ ಪಾಲಿಕೆ ಅರಣ್ಯ ಟಕ ವಿಭಾಗದ ಅಧಿಕಾರಿಗಳು ಮರ, ಮರದ ಕೊಂಬೆ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ವಲಯವಾರು ಮರ ಬಿದ್ದಿರುವ ವಿವರವಲಯ            ಮರ ಬಿದ್ದಿರುವುದುಪಶ್ಚಿಮ                     9ದಕ್ಷಿಣ                       3ಪೂರ್ವ                     3ಮಹದೇವಪುರ           1ಯಲಹಂಕ                 1ದಾಸರಹಳ್ಳಿ              1
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + five =
Remember me
