ಚಿಕ್ಕಬಳ್ಳಾಪುರ:ಪ್ರವಾಸಿತಾಣ ನಂದಿ ಗಿರಿಧಾಮ ಮತ್ತು ಬ್ರಹ್ಮಗಿರಿ ಪ್ರಪಾತದಲ್ಲಿ ಬಿದ್ದಿದ್ದ ದೆಹಲಿ ಮೂಲದ ನಿಶಾಂಕ್​ ಕಾರ್ಯಾಚರಣೆ ಸುಖಾಂತ್ಯಗೊಂಡ ನಡುವೆ ಜಿಲ್ಲಾ ವ್ಯಾಪ್ತಿಯ ಟ್ರಕ್ಕಿಂಗ್​ ಸ್ಪಾಟ್​ಗಳಲ್ಲಿ ಅನುಮತಿ ಇಲ್ಲದೆ ಚಾರಣ ಕೈಗೊಳ್ಳದಿರಲು ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್​ ಇಲಾಖೆ ಎಚ್ಚರಿಕೆ ನೀಡಿದೆ.
ಜಿಲ್ಲೆಯಲ್ಲಿ ಸಕ್ಷಮ ಪ್ರಾಧಿಕಾರ ಗುರುತಿಸಿರುವ ನಿಗದಿತ ಮಾರ್ಗಗಳಲ್ಲಿ ಚಾರಣಕ್ಕೆ ಹೋಗುವ ಮೊದಲು ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆಯಬೇಕು. ಹಾಗೆಯೇ ಅಗತ್ಯ ಮುನ್ನೆಚ್ಚರಿಕೆ ಸುರಕ್ಷಾ ಕ್ರಮಗಳನ್ನು ಪಾಲಿಸಬೇಕು. ಇದನ್ನು ಬಿಟ್ಟು ನಿಷೇಧಿಸಿದ ಸ್ಥಳ ಮತ್ತು ನಿರ್ಬಂಧಿಸಿದ ದಿನದಂದು ಯಾವುದೇ ಕಾರಣಕ್ಕೂ ಟ್ರಕ್ಕಿಂಗ್​ ಮಾಡಬಾರದು. ಅವಘಡಗಳಿಗೆ ಆಸ್ಪದ ನೀಡಬಾರದು. ಒಂದು ವೇಳೆ ನಿಯಮ ಉಲ್ಲಂಘಿಸಿದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಜಿಲ್ಲೆಯ ನಂದಿ ಗಿರಿಧಾಮ, ಬ್ರಹ್ಮಗಿರಿ, ದಿವ್ಯಗಿರಿ, ಸ್ಕಂದಗಿರಿ, ಆವಲಬೆಟ್ಟ ಸೇರಿ ಹಲವು ತಾಣಗಳು ಚಾರಣಕ್ಕೆ ಅಚ್ಚುಮೆಚ್ಚು. ಇಲ್ಲಿಗೆ ಬೆಂಗಳೂರು ಸೇರಿ ವಿವಿಧ ಭಾಗಗಳಿಂದ ಪ್ರವಾಸಿಗರು ಆಗಮಿಸಿ, ಟ್ರಕ್ಕಿಂಗ್​ ಮಾಡಿ ಖುಷಿ ಪಡುತ್ತಾರೆ. ಇದೇ ವೇಳೆ ಕೆಲವರ ನಿರ್ಲಕ್ಷ್ಯ, ಅತಿಯಾದ ವಿಶ್ವಾಸ ಮತ್ತು ನಿಯಮಗಳ ಉಲ್ಲಂಘನೆಯಿಂದ ಆಗಾಗ ಅವಘಡಗಳು ಸಂಭವಿಸುತ್ತಿದ್ದು, ರಕ್ಷಣಾತ್ಮಕ ಕಾರ್ಯಾಚರಣೆಗೆ ತಲೆನೋವು ಅನುಭವಿಸುವಂತಾಗಿದೆ.
ಯಲಹಂಕದ ಭಾರತೀಯ ವಾಯುಪಡೆಯ ತಂಡವು ಸಕಾಲಕ್ಕೆ ಬಾರದೇ ಇದ್ದಿದ್ದರೆ ಭಾನುವಾರ(ಫೆ.20) ಬ್ರಹ್ಮಗಿರಿಯ ಪ್ರಪಾತಕ್ಕೆ ಬಿದ್ದಿದ್ದ ದೆಹಲಿ ಮೂಲದ 19 ವರ್ಷದ ಯುವಕ ನಿಶಾಂಕ್​ನ ರಕ್ಷಣೆ ತುಂಬಾ ಕಷ್ಟವಾಗುತ್ತಿತ್ತು. ರಾಷ್ಟ್ರೀಯ ಮತ್ತು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ತಂಡ, ಪೊಲೀಸರು ಮತ್ತು ಅಗ್ನಿಶಾಮಕ ಸಿಂಬ್ಬದಿ ಚುರುಕಿನ ಕಾರ್ಯಾಚರಣೆಯಿಂದ ಆತನನ್ನು ಕಾಪಾಡುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ಏರ್​ ಮಾರ್ಷಲ್​ ಉದಯರವಿ ಸಮನ್ವಯತೆ, ಅಪರ ಜಿಲ್ಲಾಧಿಕಾರಿ ಎಚ್​.ಅಮರೇಶ್​ ಸಮಯೋಚಿತ ಕೆಲಸ ಹಲವರ ಪರಿಶ್ರಮದಿಂದ ಪ್ರಕರಣ ಸುಖಾಂತ್ಯ ಕಂಡಿದೆ.

ಜಿಲ್ಲಾ ವ್ಯಾಪ್ತಿಯಲ್ಲಿ ಗಿರಿ ಚಾರಣಕ್ಕೆ ಕಡ್ಡಾಯವಾಗಿ ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆಯಬೇಕು. ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಒಂದು ವೇಳೆ ನಿಯಮ ಉಲ್ಲಂಘಿಸಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.|ಜಿ.ಕೆ.ಮಿಥುನ್​ ಕುಮಾರ್​ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ, ಚಿಕ್ಕಬಳ್ಳಾಪುರ

ನಿಶಾಂಕ್​ ಚೇತರಿಕೆ:ಟ್ರಕ್ಕಿಂಗ್​ ವೇಳೆ ಆಯತಪ್ಪಿ ಬಿದ್ದಿದ್ದ ನಿಶಾಂಕ್​ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದು, ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾನೆ. ಭಾನುವಾರ ಬೆಳಗ್ಗೆ ಬೈಕ್​ನಲ್ಲಿ ನಂದಿಬೆಟ್ಟಕ್ಕೆ ಬಂದು, ಸಮೀಪದ ಚೆಕ್​ಪೋಸ್ಟ್​ ಬಳಿ ಬೈಕ್​ ನಿಲ್ಲಿಸಿ, ಬ್ರಹ್ಮಗಿರಿ ಬೆಟ್ಟದ ಮೂಲಕ ನಂದಿಬೆಟ್ಟ ಏರಲು ಮುಂದಾಗಿದ್ದ. ಇದೇ ವೇಳೆ ಆಯತಪ್ಪಿ ಸುಮಾರು 250 ಅಡಿ ಕೆಳಕ್ಕೆ ಉರುಳಿ ಬಿದ್ದಿರುವ ಬಗ್ಗೆ ಮೊಬೈಲ್​ ಮೂಲಕ ಮಾಹಿತಿ ನೀಡಿದ್ದು, ತಕ್ಷಣ ರಕ್ಷಣಾತ್ಮಕ ಕಾರ್ಯ ಕೈಗೊಳ್ಳಲಾಯಿತು.
ಹರ್ಷನ ಕುರಿತು ಮನದನೋವು ಬಿಚ್ಚಿಟ್ಟ ಅಕ್ಕ-ಅಪ್ಪ, 3ನೇ ದಿನದ ಕಾರ್ಯದಲ್ಲೂ ಮುಗಿಲುಮುಟ್ಟಿದೆ ಆಕ್ರಂದನ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:eight + twenty =
Remember me
