ಚಿಕ್ಕಬಳ್ಳಾಪುರ:ನನ್ನ ಸಾವಿಗೆ ಚಿಕ್ಕಬಳ್ಳಾಪುರ ನಗರಸಭೆ ಸದಸ್ಯ ಅಂಬರೀಷ್​ ಕಾರಣ ಎಂದು ವಾಟ್ಸ್​ಆ್ಯಪ್​ ಸ್ಟೇಟಸ್​ ಹಾಕಿ ಭಗ್ನಪ್ರೇಮಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಎಲ್​ಐಸಿ ಕಚೇರಿ ಮುಂಭಾಗದ ಮನೆಯಲ್ಲಿ ಸಂಭವಿಸಿದೆ. ಇದಕ್ಕೆ ಪ್ರಿಯತಮೆ ಹಾಗೂ ನಗರಸಭೆ ಸದಸ್ಯನ ಕಿರುಕುಳವೇ ಸಾವಿಗೆ ಕಾರಣ ಎಂಬ ಆರೋಪ ಕೇಳಿ ಬಂದಿದೆ.
ಎಸ್​.ಎನ್​.ಎನ್​.ಆರ್ಟ್ಸ್​ ಅಂಗಡಿ ಮಾಲೀಕ ಅಂಗಡಿ ಮಾಲೀಕ ಪ್ರಶಾಂತ (37) ಮೃತ ದುರ್ದೈವಿ. 15ನೇ ವಾರ್ಡ್​ನ ನಗರಸಭೆ ಸದಸ್ಯ ಅಂಬರೀಷ್​ ಮತ್ತು ಪ್ರಿಯತಮೆ ಸುಮಾ ಆರೋಪಿಗಳು. ತ್ರಿಕೋನ ಪ್ರೇಮದ ಹಿನ್ನೆಲೆಯ ಗಲಾಟೆಯಿಂದ ಬೇಸತ್ತು ಪ್ರಶಾಂತ್​ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದಾಗಿ ಮೃತನ ಸಂಬಂಧಿಕರು ಆರೋಪಿಸಿದ್ದಾರೆ.
ನಗರದ ಎಲ್​ಐಸಿ ಕಚೇರಿ ಮುಂಭಾಗ ಎಸ್​ಎನ್​ಎನ್​ ಆರ್ಟ್ಸ್​ ಅಂಗಡಿ ಇಟ್ಟುಕೊಂಡಿರುವ ಪ್ರಶಾಂತ್​ಗೆ ಕಳೆದ 12 ವರ್ಷಗಳ ಹಿಂದೆ ಶಿಡ್ಲಘಟ್ಟದ ಮಂಗಳಾ ಎಂಬುವರೊಂದಿಗೆ ಮದುವೆಯಾಗಿತ್ತು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕೌಟುಂಬಿಕ ಕಲಹದಿಂದ ದಂಪತಿ ವಿಚ್ಛೇದನ ಪಡೆದುಕೊಂಡಿದ್ದಾರೆ. ಇದರ ನಡುವೆ ನಗರದ ನಂದಿ ರಸ್ತೆಯಲ್ಲಿ ಮನೆ ಬಾಡಿಗೆ ಪಡೆದುಕೊಂಡು ವಾಸವಿದ್ದ ಪ್ರಶಾಂತ್​, ಮನೆ ಮಾಲಕಿ ಸುಮಾ ಜತೆಯಲ್ಲಿ ವಾಸವಾಗಿದ್ದರು. ಸುಮಾರ ಪತಿ ತೀರಿಕೊಂಡಿದ್ದಾರೆ. ಹಾಗಾಗಿ ಇವರಿಬ್ಬರೂ ಮದುವೆಯಾಗಲು ಬಯಸಿದ್ದರು. ಹೀಗಿರುವಾಗ ನಗರಸಭೆ ಸದಸ್ಯ ಅಂಬರೀಷ್​, ಸುಮಾ ಜತೆ ಸಲುಗೆ ಬೆಳೆಸಿಕೊಂಡು ಅನ್ಯೋನ್ಯವಾಗಿ ಇದ್ದರು ಎನ್ನಲಾಗಿದೆ. ಇದರಿಂದ ಮೂವರ ನಡುವೆ ಗಲಾಟೆ ನಡೆದಿದ್ದು, ಬೇಸತ್ತು ಪ್ರಶಾಂತ್​ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಾಟ್ಸ್​ ಆ್ಯಪ್​ನಲ್ಲಿ ಡೆತ್​ ನೋಟ್​?:ಸಾವಿಗೂ ಮುನ್ನ ಅಹೋದರಿ ವೀಣಾಗೆ ಕರೆ ಮಾಡಿದ್ದ ಪ್ರಶಾಂತ್​, ಗಲಾಟೆ-ಕಿರುಕುಳದ ಬಗ್ಗೆ ಅಳಲು ತೋಡಿಕೊಂಡು ಆತ್ಮಹತ್ಯೆಗೆ ಶರಣಾಗುವುದಾಗಿ ಹೇಳಿದ್ದಾನೆ. ಇದೇ ವೇಳೆ ಪ್ರಶಾಂತ್​ನನ್ನು ಸಹೋದರಿ ಸಮಾಧಾನ ಮಾಡಿದ್ದರು. ಇದರ ನಡುವೆ ವಾಟ್ಸ್ಆ್ಯಪ್​ ಸ್ಟೇಟಸ್​ನಲ್ಲಿ ”ನನ್ನ ಸಾವಿಗೆ ನಗರಸಭೆ ಸದಸ್ಯ ಅಂಬರೀಷ್​ ಕಾರಣ” ಎಂಬುದಾಗಿ ಹಾಕಿಕೊಂಡಿದ್ದಾನೆ ಎನ್ನಲಾಗಿದೆ. ಬಳಿಕ ಮನೆಯಲ್ಲಿನ ಫ್ಯಾನ್​ಗೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಗರ ಪೊಲೀಸ್​ ಠಾಣೆಯಲ್ಲಿ ಅಂಬರೀಷ್​ ಮತ್ತು ಸುಮಾ ವಿರುದ್ಧ ದೂರು ದಾಖಲಾಗಿದೆ.
ಜಿಪಂ, ತಾಪಂ ಚುನಾವಣೆ: ಸರ್ಕಾರಕ್ಕೆ 12 ವಾರ ಕಾಲಾವಕಾಶ ನೀಡಿದ ಹೈಕೋರ್ಟ್​

ಖುಷಿ ಕ್ಷಣ ಕಳೆಯಲು ಬಂದ ಮೂವರು ಬಿಇ ವಿದ್ಯಾರ್ಥಿಗಳು ದುರಂತ ಅಂತ್ಯ! ಉಡುಪಿಯಲ್ಲಿ ದುರ್ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
