ಬೆಂಗಳೂರು:ಚರ್ಚ್ ಸ್ಟ್ರೀಟ್​ನ ಪಬ್​ವೊಂದಲ್ಲಿ ಪಾರ್ಟಿ ಮಾಡುವಾಗ ಸುನಾಮಿ ಕಿಟ್ಟಿ ಟೀಂ ಗಲಾಟೆ ಮಾಡಿ ಹಲ್ಲೆ ಮಾಡಿದೆ ಎಂದು ಪ್ರಶಾಂತ್ ಎಂಬುವರು ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜುಲೈ 24ರ ರಾತ್ರಿ ಈ ಗಲಾಟೆ ನಡೆದಿದ್ದು, ಸುನಾಮಿ ಕಿಟ್ಟಿ ಕೂಡ ಪ್ರತಿ ದೂರು ನೀಡಿದ್ದು ಸ್ಟೇಷನ್​ ಬೇಲ್​ ಮೇಲೆ ಹೊರ ಬಂದಿದ್ದಾರೆ.
ಈ ಕುರಿತು ಇಂದು(ಸೋಮವಾರ) ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸುನಾಮಿ ಕಿಟ್ಟಿ, ಘಟನೆ ದಿನ ನಾನು ಸ್ಥಳದಲ್ಲಿ ಇದ್ದೆ. ಆದರೆ ನನಗೂ ಘಟನೆಗೂ ಯಾವುದೇ ಸಂಬಂಧವಿಲ್ಲ. ನನ್ನ ಸ್ನೇಹಿತರ ಜತೆ ಪಬ್​ಗೆ ಹೋಗಿದ್ದೆ. ನಾನು ವಾಶ್ ರೂಮ್‌ಗೆ ಹೋಗಿ ಬರೋವಷ್ಟರಲ್ಲಿ ಗಲಾಟೆಯಾಗಿತ್ತು. ಆದ್ರೆ ಆ ಗಲಾಟೆ ನನ್ನಿಂದ ಆಗಿದೆ ಅಂತಾ ಹೇಳಲಾಗ್ತಿದೆ. ಅವತ್ತೇ ಸ್ಟೇಷನ್​ಗೆ ಹೋಗಿ ಮಾತನಾಡಿ ಬಂದಿದ್ದೇನೆ. ಸ್ಟೇಷನ್ ಬೇಲ್ ಪಡೆದು ಬಂದಿದ್ದೇನೆ. ನನಗೂ ಅವತ್ತಿನ ಗಲಾಟೆಗೂ ಸಂಬಂಧವಿಲ್ಲ ಎಂದಿದ್ದಾರೆ.
ಏನಿದು ಘಟನೆ?:ಪಾರ್ಟಿಯಲ್ಲಿ ತೊಡಗಿದ್ದ ಚೇತನ್ ಗೌಡ, ಸುನಾಮಿ ಕಿಟ್ಟಿ ಮತ್ತು ಆತನ ಸ್ನೇಹಿತರು ಶ್ಯಾಂಪೇನ್ ಓಪನ್ ಮಾಡುವಾಗ ಪಕ್ಕದ ಟೇಬಲ್​ನಲ್ಲಿದ್ದ ಪ್ರಶಾಂತ್ ಎಂಬುವವರ ಮೇಲೆ ಬಿದ್ದಿದೆ. ‘ನೀವು ಪಾರ್ಟಿ ಮಾಡೋದು ಮಾಡಿಕೊಳ್ಳಿ, ನಮ್ಮ ಮೇಲೆ ಶಾಂಪೇನ್ ಎರಚಬೇಡಿ’ ಎಂದಿದ್ದಕ್ಕೆ ಸಿಟ್ಟಿಗೆದ್ದ ಕಿಟ್ಟಿ ಗ್ಯಾಂಗ್​ನಿಂದ ಪ್ರಶಾಂತ್ ಮತ್ತು ಅವರ ಸ್ನೇಹಿತರ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ ಎಂದು ಆರೋಪಿಸಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಶಾಂತ್ ದೂರು ನೀಡಿದ್ದರು. ಕಿಟ್ಟಿ ಟೀಂನಿಂದ ಪ್ರತಿದೂರು ದಾಖಲಾಗಿದೆ. ‘ಶಾಂಪೇನ್ ಅವರ ಮೇಲೆ ಬಿದ್ದಿದ್ದಕ್ಕೆ ನಮ್ಮನ್ನು ಪ್ರಶ್ನಿಸಿ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿದ್ದಾರೆ’ ಎಂದು ಚೇತನ್​ ಆರೋಪಿಸಿದ್ದಾರೆ.
ಖಾಸಗಿ ವಿಡಿಯೋ ಲೀಕ್ ಆಗಿದ್ದು ಹೇಗೆ? ಬಿಗ್​ ಬಾಸ್​ ಮನೆಯಲ್ಲಿ ಕಣ್ಣೀರಿಡುತ್ತಲೇ ವಿವರಿಸಿದ ಸೋನು

ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಮಾಡಂಗಿಲ್ಲ: ಜಮೀರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
