ತುಮಕೂರು:ಸಾಸಲು ಗ್ರಾಮದಲ್ಲಿ ಹುಚ್ಚುನಾಯಿ ಕಡಿದು ತೀವ್ರ ಗಾಯಗೊಂಡಿದ್ದ 2 ವರ್ಷದ ಮಗು ತ್ರಿಷಾ ಮೃತಪಟ್ಟಿದೆ.
ತಿಂಗಳ ಹಿಂದೆ ಮನೆಯ ಮುಂದೆ ಆಟವಾಡುತ್ತಿದ್ದ ಪುಟ್ಟರಾಜು ಮತ್ತು ಚಿಕ್ಕಮ್ಮ ದಂಪತಿಯ ಮಗು ತಿಷಾ ಹಾಗೂ ಹಸುವಿಗೆ ಹುಚ್ಚುನಾಯಿ ಕಡಿದಿತ್ತು. ನಾಯಿ ಕಡಿದ ಮೂರೇ ದಿನಕ್ಕೆ ಹಸು ಸಾವನ್ನಪ್ಪಿತ್ತು. ಆದರೆ, ಮಗುವಿಗೆ ನಾಯಿ ಕಚ್ಚಿರುವ ಬಗ್ಗೆ ಪಾಲಕರ ಅರಿವಿಗೆ ಬಂದಿರಲಿಲ್ಲ. ಒಂದು ತಿಂಗಳ ಬಳಿಕ ಅಂದರೆ ಮಾ.5ರಂದು ಅನಾರೋಗ್ಯ ಲಕ್ಷಣಗಳು ಕಾಣಿಸಿದ್ದರಿಂದ ಜಿಲ್ಲಾಸ್ಪತ್ರೆ ಮಕ್ಕಳ ತಜ್ಞರ ಬಳಿ ಕರೆದುಕೊಂಡು ಹೋದಾಗ ರೇಬಿಸ್​ ಅಂಟಿರುವುದು ತಿಳಿದುಬಂದಿದೆ.
ಹೆಚ್ಚಿನ ಚಿಕಿತ್ಸೆಗಾಗಿ ನಗರದ ಸಿದ್ಧಾರ್ಥ ವೈದ್ಯಕೀಯ ಕಾಲೇಜಿಗೆ ದಾಖಲಿಸಿದ್ದರಾದರೂ ಮಾ.8ರಂದು ಮಗು ಮೃತಪಟ್ಟಿದೆ. ಹಸುಗೆ ನಾಯಿ ಕಚ್ಚಿದ್ದನ್ನು ತ್ರಿಷಾಳಾ ಅಜ್ಜಿ ನೋಡಿದ್ದರು. ಆದರೆ ಮೊಮ್ಮಗಳಿಗೆ ನಾಯಿ ಕಚ್ಚಿದ್ದರ ಬಗ್ಗೆ ಅಜ್ಜಿಗೆ ಅರಿವಿರಲಿಲ್ಲ ಎನ್ನಲಾಗಿದೆ. ನಾಯಿ ಓಡಿಸಿಕೊಂಡು ಬಂದಾಗ ಬಿದ್ದು ಮಗುವಿಗೆ ಗಾಯವಾಗಿದೆ ಎಂದು ಭಾವಿಸಿ ಮನೆಯವರು ನಿರ್ಲಕ್ಷ್ಯ ಮಾಡಿದ್ದರು ಎನ್ನಲಾಗಿದೆ. ಮಗುವಿಗೂ ನಾಯಿ ಕಚ್ಚಿದ್ದನ್ನು ಅಜ್ಜಿ ಸರಿಯಾಗಿ ಗ್ರಹಿಸದಿದ್ದ ಕಾರಣದಿಂದ ಮಗುವಿಗೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗಿಲ್ಲ. ಆಗಲೇ ಚಿಕಿತ್ಸೆ ಕೊಡಿಸಿದ್ದರೆ ಬದುಕುಳಿಯುವ ಸಾಧ್ಯತೆಯಿತ್ತು ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಹುಸು ಜತೆಗೆ ಮೊಮ್ಮಗಳಿಗೂ ಹುಚ್ಚುನಾಯಿ ಕಚ್ಚಿದ್ದರ ಬಗ್ಗೆ ಅಂದೇ ಅಜ್ಜಿಗೆ ವಿಷಯ ಗೊತ್ತಿದ್ದರೂ ಸೊಸೆ ಮೇಲಿನ ಭಯಕ್ಕೆ ಅಥವಾ ಕೋಪಕ್ಕೆ ವಿಷಯ ಮುಚ್ಚಿಟ್ಟಿದ್ದರೂ ಎಂಬ ಮಾತೂ ಕೇಳಿಬಂದಿದೆ. ಆದರೆ, ಮೊಮ್ಮಗಳ ಸಾವಿಂದ ಕಂಗೆಟ್ಟ ಅಜ್ಜಿ, ಪಾಲಕರ ಗೋಳಾಟ ಮನಕಲಕುವಂತಿದೆ.
ವಿಚ್ಛೇದನ ಕೇಳಿದ್ದ ಅಪ್ಪ-ಅಮ್ಮನನ್ನು ಜಡ್ಜ್​ ಎದುರೇ ಒಂದುಗೂಡಿಸಿದ ಮಗ! ಶಿವಮೊಗ್ಗದಲ್ಲಿ ಮನಮಿಡಿಯುವ ಘಟನೆ

ಕಲಬುರಗಿಯಲ್ಲಿ ಘೋರ ದುರಂತ: ಗೋಧಿ ರಾಶಿ ಮಾಡುವ ಯಂತ್ರಕ್ಕೆ ಸಿಲುಕಿ ಪಿಯು ವಿದ್ಯಾರ್ಥಿನಿ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
