ತುಮಕೂರು:ಗಣೇಶೋತ್ಸವ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸುವಾಗ ವ್ಯಕ್ತಿಯೊಬ್ಬರಿಗೆ ಹೃದಯಾಘಾತವಾಗಿ ಮೃತಪಟ್ಟ ಘಟನೆ ತುಮಕೂರು ತಾಲೂಕಿನ ಹೆಬ್ಬಾಕ ಗ್ರಾಮದಲ್ಲಿ ನಡೆದಿದೆ.
ವಿರೂಪಾಕ್ಷ (48) ಮೃತ ದುರ್ದೈವಿ. ಹೆಬ್ಬಾಕ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ನಿಮಜ್ಜನದ ಮೆರವಣಿಗೆ ವೇಳೆ ಶನಿವಾರ ಡಿಜೆ ಸೌಂಡ್ಸ್ ಹಾಕಲಾಗಿತ್ತು. ಸೌಂಡ್​ಗೆ ತಕ್ಕಂತೆ ಮೆರವಣಿಗೆಯಲ್ಲಿ ಜನ ಸಂಭ್ರಮ-ಸಡಗರದೊಂದಿಗೆ ಕುಣಿದು ಕುಪ್ಪಳಿಸುತ್ತಿದ್ದರು. ವಿರೂಪಾಕ್ಷ ಕೂಡ ಕುಣಿಯುತ್ತಿದ್ದರು. ಈ ವೇಳೆ ಕುಸಿದು ಬಿದ್ದ ವಿರೂಪಾಕ್ಷರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಬದುಕಲಿಲ್ಲ.
ಡಿಜೆ ಸೌಂಡ್ಸ್ ಹೆಚ್ಚಿತ್ತು. ಪರಿಣಾಮ ಹೃದಯಾಘಾತವಾಗಿ ವಿರೂಪಾಕ್ಷ ಮೃತಪಟ್ಟಿರುವ ಶಂಕೆ‌ ವ್ಯಕ್ತವಾಗಿದೆ. ಈ ಸಂಬಂಧ ಬೆಳ್ಳಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಳಿಯಾರು ಪೊಲೀಸ್​ ಠಾಣೆಯ ಸುಧಾ ಕೊಲೆ ಕೇಸ್​ಗೆ ಟ್ವಿಸ್ಟ್​: ಸುಪಾರಿ ಕೊಟ್ಟದ್ದು ಅದೇ ಠಾಣೆಯ ಮತ್ತೊಬ್ಬ ಮಹಿಳಾ ಪೇದೆ!

‘ಶ್ರೀನಿವಾಸಪುರದ ಮಹಾನಾಯಕ’ನೇ ಸಿದ್ದುಗೆ ಕಿವಿಯೂದಿ ಮೈತ್ರಿ ಸರ್ಕಾರದ ಕತೆ ಮುಗಿಸಿದ್ದು: ಎಚ್​ಡಿಕೆ ವಾಗ್ದಾಳಿ

ರಾಯಚೂರಲ್ಲಿ ದುರ್ಘಟನೆ: ಸೆಲ್ಫಿ ಹುಚ್ಚಾಟಕ್ಕೆ ಪಿಯು ವಿದ್ಯಾರ್ಥಿಗಳಿಬ್ಬರ ಸಾವು!

ಹುಳಿಯಾರು ಠಾಣೆ ಮಹಿಳಾ ಪೇದೆ ಕೊಲೆ: ಸ್ನೇಹಿತನ ಜತೆ ಸೇರಿ ಗಂಡನನ್ನು ಕೊಂದಿದ್ದಳಾ ಅಕ್ಕ? ಡೆತ್​ನೋಟಲ್ಲಿದೆ ಆಘಾತಕಾರಿ ವಿಷ್ಯ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
