ತುಮಕೂರು:ನಿರಂತರಾವಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ತುಮಕೂರಿನ ಹೆಬ್ಬಾಕ ಕೆರೆ ತುಂಬಿ ಕೋಡಿ ಹೊಡೆದಿದೆ. ಪರಿಣಾಮ ರಾಷ್ಟ್ರೀಯ ಹೆದ್ದಾರಿ-48 ಜಲಾವೃತಗೊಂಡಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ. ಕ್ಯಾತಸಂದ್ರ ಟೋಲ್​ನಿಂದ ಕೋರಾ ಗ್ರಾಮದವರೆಗೆ ಟ್ರಾಫಿಕ್ ಜಾಮ್ ಉಂಟಾಗಿದೆ.
ಊರುಕೆರಿಯ ಗ್ರಾಮದ ಬಳಿಯಿರುವ ರಾಷ್ಟ್ರೀಯ ಹೆದ್ದಾರಿ 48ಕ್ಕೆ ಕೆರೆ ಕೋಡಿ ನೀರು ನುಗ್ಗಿದ್ದು, ಬೆಂಗಳೂರು ಕಡೆಯಿಂದ ಚಿತ್ರದುರ್ಗ, ದಾವಣಗೆರೆ, ಪುಣೆ ಕಡೆಗೆ ಹೋಗುವ ವಾಹನ ಸವಾರರು ಪರದಾಡುತ್ತಿದ್ದಾರೆ. ಸುಮಾರು 10 ಕಿಲೋ ಮೀಟರ್ ದೂರದವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದ ದೃಶ್ಯ ಗುರುವಾರ ಬೆಳಗ್ಗೆ ಕಂಡು ಬಂತು.

ಹೆಬ್ಬಾಕ ಗ್ರಾಮ, ನರಸಾಪುರ, ಊರುಕೆರೆ ಭಾಗದ ಬಹುತೇಕ ಅಡಿಕೆ-ತೆಂಗು ತೋಟಗಳೂ ಜಲಾವೃತಗೊಂಡಿವೆ. ಹೆಬ್ಬಾಕ ಗ್ರಾಮದ ಆಂಜನೇಯ ದೇಗುಲ, ಕೆರೆ ಅಂಚಿನ‌ ಮನೆಗಳು ಮುಳುಗಡೆಯಾಗಿವೆ. ಹೆಬ್ಬಾಕ-ಊರುಕೆರೆ ನಡುವೆ ಸಂಪರ್ಕ‌ ಕಡಿತಗೊಂಡಿದೆ.

ಇನ್ನು ಟ್ರಾಫಿಕ್​ ಕ್ಲಿಯರ್​ ಮಾಡಲು ಹಾಗೂ ರಸ್ತೆಯಲ್ಲಿ ನಿಂತಿದ್ದ ನೀರನ್ನು ಹೊರ ಹಾಕಲು ಪೊಲೀಸರು ಮತ್ತು ಸಿಬ್ಬಂದಿ ಜತೆ ಖುದ್ದು ತುಮಕೂರು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಕಾರ್ಯಾರಣೆಗೆ ಇಳಿದರು. ನೀರು ಸರಾಗವಾಗಿ ಹೊರ ಹರಿಯಲು ರಸ್ತೆಬದಿಯಲ್ಲಿದ್ದ ಗಿಡಗಂಟಿಗಳನ್ನ ಜಿಲ್ಲಾಧಿಕಾರಿಗಳೇ ಕೀಳುತ್ತಿದ್ದ ದೃಶ್ಯ ಕಂಡು ಬಂತು. ಮಧ್ಯಾಹ್ನ 12 ಗಂಟೆಯಾದರೂ ರಸ್ತೆಯಲ್ಲಿ ಕೆರೆ ನೀರು ಕಡಿಮೆ ಆಗಿರಲಿಲ್ಲ.
ಹಾಸನಾಂಬೆ ದೇವಾಲಯದಲ್ಲಿ ಹೃದಯಾಘಾತದಿಂದ ಭಕ್ತ ಸಾವು

‘ಸ್ವಾಮಿ ಕೊರಗಜ್ಜ ಆದಿಸ್ಥಳ ಕುತ್ತಾರು’ ವೆಬ್​ಸೈಟ್ ಬಿಡುಗಡೆ

Sign in to your account
Please enter an answer in digits:20 − fifteen =
Remember me
