ತುಮಕೂರು:ಸ್ವಗ್ರಾಮಕ್ಕೆ ಮಗುವಿನ ಶವ ಸಾಗಿಸಲು ಹಣವಿಲ್ಲದೆ ತುಮಕೂರಿನ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ಬಾಣಂತಿ ಸೇರಿದಂತೆ ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ.
ದಾವಣಗೆರೆ ಜಿಲ್ಲೆ ಗೋಪನಾಳ್ ಗ್ರಾಮದ ಮಂಜುನಾಥ್ ಮತ್ತು ಗೌರಮ್ಮ ದಂಪತಿ ತುಮಕೂರು ನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ನಾಲ್ಕು ದಿನದ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ಗೌರಮ್ಮ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ, ಇಂದು(ಸೋಮವಾರ) ಮುಂಜಾನೆ 4 ಗಂಟೆಯಲ್ಲಿ ಆಸ್ಪತ್ರೆಯಲ್ಲೇ ಮಗು ಮೃತಪಟ್ಟಿದೆ. ಮಗುವಿನ ಶವ ತೆಗೆದುಕೊಂಡು ಹೋಗುವಂತೆ ವೈದ್ಯರು ತಿಳಿಸಿದ್ದಾರೆ.
ಆದರೆ, ಮಗುವನ್ನ ಕಳೆದುಕೊಂಡ ನೋವು ಒಂದೆಡೆಯಾದರೆ, ಕಂದನ ಶವವನ್ನು ಊರಿಗೆ ತೆಗೆದುಕೊಂಡು ಹೋಗಲು ಹಣ ಇಲ್ಲದ ದುಸ್ಥಿತಿ ಒಂದೆಡೆ. 40 ಕಿಲೋ ಮೀಟರ್ ವ್ಯಾಪ್ತಿಗೆ ಮಾತ್ರವೇ ಆಂಬುಲೆನ್ಸ್ ನೀಡುವುದಾಗಿ ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಖಾಸಗಿ ಆಂಬುಲೆನ್ಸ್​ನಲ್ಲಿ ಮಗುವಿನ ಶವ ತೆಗೆದುಕೊಂಡು ಹೋಗಲು ಅಶಕ್ತವಾಗಿರುವ ದಂಪತಿ. ಕೊನೆಗೆ ಬಸ್​ನಲ್ಲೇ ಹೋಗಲು ನಿರ್ಧರಿಸಿ, ನಗರದ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣಕ್ಕೆ ನೋವಿನಲ್ಲೇ ಬಂದಿದ್ದಾರೆ. ಇವರ ಜತೆಗೆ ಗೌರಮ್ಮರ ತಾಯಿಯೂ ಇದ್ದಾರೆ.
ಮೂವರು ಮಗುವಿನ ಶವವನ್ನು ಎತ್ತಿಕೊಂಡೇ ದಾವಣಗೆರೆ ಬಸ್​ ಹತ್ತಲು ಮುಂದಾಗಿದ್ದು, ಇದಕ್ಕೆ ಕಂಡಕ್ಟರ್ ಮತ್ತು ಚಾಲಕರು ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ. ದಿಕ್ಕು ತೋಚದ ಕುಟುಂಬಸ್ಥರು ಕಣ್ಣೀರಿಡುತ್ತಲೇ ಬಸ್ ನಿಲ್ದಾಣದಲ್ಲೇ ಮಗುವಿನ ಶವ ಎತ್ತಿಕೊಂಡು ಕುಳಿತ್ತಿದ್ದ ಮನಕಲಕುವ ದೃಶ್ಯ ಕಂಡು ಬಂತು.
ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಆಗುತ್ತಿದ್ದಂತೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ತುಮಕೂರು ಬಿಜೆಪಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ಹನುಮಂತರಾಜು, ಮಗುವಿನ ಕುಟುಂಬಸ್ಥರಿಗೆ ಊರಿಗೆ ಹೋಗಲು ಕಾರಿನ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದರು. (ದಿಗ್ವಿಜಯ ನ್ಯೂಸ್​, ತುಮಕೂರು)
ತಂದೆ ಸಾಲಕ್ಕೆ ಮಗನಿಂದ ಬೆತ್ತಲೆ ಪೂಜೆ ಮಾಡಿಸಿದ ದುರುಳರು! ಕೊಪ್ಪಳದಲ್ಲಿ ಅಮಾನವೀಯ ಘಟನೆ

ICU ಬೆಡ್​ ಮೇಲೆ ಮಲಗಿಕೊಂಡೇ ಸಬ್​ರಿಜಿಸ್ಟ್ರಾರ್​ ಕಚೇರಿಗೆ ಬಂದು ಆಸ್ತಿ ಪತ್ರಕ್ಕೆ ಸಹಿ ಹಾಕಿದ ವೃದ್ಧೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 20 =
Remember me
