ತುಮಕೂರು:ನಾಪತ್ತೆಯಾಗಿದ್ದ ಹುಳಿಯಾರು ಪೊಲೀಸ್ ಠಾಣೆ ಮಹಿಳಾ ಪೇದೆ ಎಸ್.ಸುಧಾ(39) ಶವವಾಗಿ ಅರಸೀಕೆರೆ ತಾಲೂಕಿನ ಪೊದೆಯೊಂದರಲ್ಲಿ ಪತ್ತೆಯಾಗಿದ್ದಾರೆ.
ಸೆ.13ರಂದು ಸುಧಾ ನಾಪತ್ತೆಯಾಗಿದ್ದರು. ಈ ನಡುವೆ ಇವರ ಚಿಕ್ಕಪ್ಪನ ಮಗ, ಚಿಕ್ಕನಾಯಕನಹಳ್ಳಿ ತಾಲೂಕು ಹುಳಿಯಾರು ಹೋಬಳಿ ಕೆರೆಸೂರಗೊಂಡನಹಳ್ಳಿಯ ಮಂಜುನಾಥ್(26) ಶಿವಮೊಗ್ಗ ನಗರದ ಲಾಡ್ಜ್​ವೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ. ಇದಕ್ಕೂ ಮುನ್ನ ಅಂದರೆ ಸೆ.13ರಂದು ಸುಧಾ ಮತ್ತು ಮಂಜುನಾಥ್​ ಇಬ್ಬರೂ ಚಿಕ್ಕನಾಯಕನಹಳ್ಳಿಯಲ್ಲಿ ಜತೆಯಾಗಿ ಕಾರಿನಲ್ಲಿ ಹೊರಟಿದ್ದರು. ಸಂಜೆ 8.40ರಿಂದ ಇಬ್ಬರ ಫೋನ್ ಸಂಪರ್ಕ ಕಡಿತವಾಗಿತ್ತು. ಸುಧಾ ನಾಪತ್ತೆಯಾಗಿದ್ದಾರೆ ಎಂದು ಹುಳಿಯಾರು ಪೊಲೀಸ್​ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ಬಳಿಕ ಶಿವಮೊಗ್ಗದ ಲಾಡ್ಜ್​​ನಲ್ಲಿ ಸೆ.16ರ ಸಂಜೆ ಮಂಜುನಾಥ್​ ಶವವಾಗಿ ಪತ್ತೆಯಾಗಿದ್ದ. ಅಲ್ಲಿ ಡೆತ್​ನೋಟ್​ ಕೂಡ ಸಿಕ್ಕಿತ್ತು. ನನ್ನ ದೊಡ್ಡಮ್ಮನ ಮಗಳಾದ ಅಕ್ಕ ಸುಧಾಳನ್ನು ಕೊಲೆಮಾಡಿದ್ದು ಬೀದಿ ಹೆಣ ಮಾಡಿದ್ದೇನೆ ಎಂದು ಡೆತ್‌ನೋಟ್ ಬರೆದಿಟ್ಟು, ಆತ್ಮಹತ್ಯೆಗೆ ಶರಣಾಗಿದ್ದ. ಈ ಪ್ರಕರಣ ಸುಧಾ ಅವರ ಮನೆಯಲ್ಲಿ ಆತಂಕ ಸೃಷ್ಟಿಸಿತ್ತು. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಧಾ ನಾಪತ್ತೆ ಪ್ರಕರಣ ಜಿಲ್ಲೆಯಲ್ಲಿ ಭಾರೀ ಸುದ್ದಿಯಾಗಿತ್ತು. ಪೊಲೀಸರೂ ಸುಧಾಗಾಗಿ ಹುಡುಕಾಟ ಮುಂದುವರಿಸಿದ್ದರು.
ಇಂದು(ಸೆ.17)ರಂದು ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಅರಸೀಕೆರೆ-ತಿಪಟೂರು ರಾಷ್ಟ್ರೀಯ ಹೆದ್ದಾರಿ 206ರ ಮೈಲನಹಳ್ಳಿ ಗ್ರಾಮದ ಬಳಿ ಪೊದೆಯೊಂದರಲ್ಲಿ ಸುಧಾ ಶವ ಪತ್ತೆಯಾಗಿದೆ. ಹಣಕಾಸು ವ್ಯವಹಾರಕ್ಕೆ ಸುಧಾರನ್ನು ಕಾರಿನಲ್ಲಿ ಕರೆದುಕೊಂಡು ಬಂದು ಮಂಜುನಾಥ್ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ಅರಸೀಕೆರೆ ಗ್ರಾಮಾಂತರ ಠಾಣೆ ಪೊಲೀಸರು ಮತ್ತು ತುಮಕೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಅರಸೀಕೆರೆ ತಾಲೂಕು ಆಸ್ಪತ್ರೆಗೆ ಸುಧಾರ ಶವ ರವಾನಿಸಲಾಗಿದ್ದು, ಸುಧಾರ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಆನ್​ಲೈನ್​ ಬೆಟ್ಟಿಂಗ್​ಗೆ ದಾಸನಾಗಿದ್ದ ಮಂಜುನಾಥ್​:ಹುಳಿಯಾರು ಸಮೀಪದ ಕೆರೆ ಸೂರಗನಹಳ್ಳಿಯ ಮಂಜುನಾಥ್​ ಆನ್​ಲೈನ್​ ಬೆಟ್ಟಿಂಗ್​ಗೆ ದಾಸನಾಗಿದ್ದು, ಹಣಕಾಸು ವಿಚಾರದಲ್ಲಿಯೂ ಎಡವಟ್ಟು ಮಾಡಿಕೊಂಡಿದ್ದ ಎನ್ನಲಾಗಿದೆ. ಆರೋಗ್ಯ ಸರಿ ಇಲ್ಲ, ಆಸ್ಪತ್ರೆಗೆ ತೋರಿಸುವಂತೆ ಸಹೋದರಿ ಸುಧಾಗೆ ಒತ್ತಾಯಿಸಿದ್ದ ಮಂಜುನಾಥ್​ ಸೆ.13ರಂದು ಚಿಕ್ಕನಾಯಕನಹಳ್ಳಿಗೆ ಹೋಗಿ ಆಸ್ಪತ್ರೆಗೆ ತೋರಿಸಿಕೊಳ್ಳುವ ನೆಪದಲ್ಲಿ ಸುಧಾ ಜತೆ ಕಾರಿನಲ್ಲಿ ತೆರಳಿದ್ದ ಎನ್ನಲಾಗಿದೆ. ಸುಧಾ ಅವರ ಪತಿ ಎರಡು ವರ್ಷದ ಹಿಂದೆ ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ಇದ್ದಾರೆ.
ತಮ್ಮನ ಪತ್ನಿಯ ಕಿರುಕುಳಕ್ಕೆ ಬೇಸತ್ತು ಸಾವಿನ ದಾರಿ ಹಿಡಿದ ತಾಯಿ-ಮಗ! ಸಾವಿಗೂ ಮುನ್ನ ಮನದ ನೋವನ್ನು ಬಿಚ್ಚಿಟ್ಟ ಮಹಿಳೆ

ವರದಕ್ಷಿಣೆಗಾಗಿ ಪತ್ನಿಗೆ ಬೆಂಕಿ ಹಚ್ಚಿದ ಗಂಡ… ಚೀರಾಡುತ್ತಾ ಗಂಡನನ್ನೇ ಬಿಗಿದಪ್ಪಿಕೊಂಡ ಪತ್ನಿ! ಮೈಸೂರಲ್ಲಿ ಭೀಕರ ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 14 =
Remember me
