ತುಮಕೂರು:ಜಿಲ್ಲೆಯಲ್ಲಿ ಫ್ಲೆಕ್ಸ್ ಅವಾಂತರ ಮುಂದುವರಿದಿದ್ದು, ಮಧುಗಿರಿಯಲ್ಲಿ ಸ್ವಾತಂತ್ರ್ಯೋತ್ಸವಕ್ಕೆ ಶುಭಕೋರುವ ಫ್ಲೆಕ್ಸ್​ನಲ್ಲಿ ನಾಥೂರಾಮ್ ಗೂಡ್ಸೆ ಫೋಟೋ ಹಾಕಿರುವುದು ಈಗ ವಿವಾದ ಸೃಷ್ಠಿಸಿದೆ.
ಪಟ್ಟಣದ ದಂಡಿನ ಮಾರಮ್ಮ ದೇವಸ್ಥಾನ ಸಮೀಪ ಭಗತ್​ಸಿಂಗ್​ ಯೂಥ್​ ಅಸೋಸಿಯೇಷನ್​ ಹೆಸರಿನಿಂದ ಹಾಕಲಾಗಿದ್ದ ಫ್ಲೆಕ್ಸ್​​ನಲ್ಲಿ ಡಿಎಂ ಬಾಯ್ಸ್​ ಎಂದು ಬರೆದುಕೊಂಡಿದ್ದು, ಗಾಂಧೀಜಿ ಫೋಟೋಗಿಂತ ಮೇಲ್ಭಾಗದಲ್ಲಿ ಗೋಡ್ಸೆ ಫೋಟೋ ಹಾಕಿ ಸಂಭ್ರಮಿಸಿದ್ದಾರೆ. ಮಹಾತ್ಮಗಾಂಧಿ ಅವರನ್ನು ಕೊಂದಿರುವ ಗೂಡ್ಸೆ ಫೋಟೋವನ್ನು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಜತೆ ಹಾಕಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಸ್ಥಳದಲ್ಲಿ ಬಿಗಿಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಫ್ಲೆಕ್ಸ್​ನ ಮೇಲ್ಭಾಗದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಭಗತ್​ಸಿಂಗ್​, ಸುಭಾಷ್​ ಚಂದ್ರಬೋಸ್​, ಜತೆಗೆ ಗೋಡ್ಸೆ ಫೋಟೋ ಹಾಕಿದ ಕಿಡಿಗೇಡಿಗಳು, ಕೆಳಭಾಗದಲ್ಲಿ ಸರ್ದಾರ್​ ವಲ್ಲಭಾಯ್​ ಪಟೇಲ್​, ಚಂದ್ರಶೇಖರ್​ ಆಜಾದ್​, ಮಹಾತ್ಮಗಾಂಧೀಜಿ, ಲಾಲ್​ ಬಹುದ್ದೂರ್​ ಶಾಸ್ತ್ರಿಯವರ ಫೋಟೋ ಹಾಕಿ ಸಂಭ್ರಮಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ವೈರಲ್​ ಆಗುತ್ತಿದ್ದಂತೆ ರಾತ್ರೋರಾತ್ರಿ ಕಿಡಿಗೇಡಿಗಳು ಫ್ಲೆಕ್ಸ್ ತೆರವುಗೊಳಿಸಿದ್ದಾರೆ.
ಇದೊಂದು ವಿಕೃತ ಮನಸ್ಥಿತಿಯುಳ್ಳವರು ಮಾಡಿರುವ ಕೆಲಸ. ಈ ಬಗ್ಗೆ ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ರಾತ್ರೋರಾತ್ರಿ ಫ್ಲೆಕ್ಸ್​ ತೆರವುಗೊಳಿಸಿರುವುದು ಕಂಡು ಬಂದಿದೆ. ಫ್ಲೆಕ್ಸ್​ ಅಳವಡಿಸಿದವರು ಯಾರು ಎಂಬುದು ಪತ್ತೆಯಾಗಿಲ್ಲ.| ಸುರೇಶಾಚಾರ್ತಹಸೀಲ್ದಾರ್​, ಮಧುಗಿರಿ
PSI ಆಗುವ ಕನಸು ಕಂಡಿದ್ದ ಬೆಂಗ್ಳೂರಿನ ಯುವಕ ಕಳ್ಳನಾದ! ಇಂಜಿನಿಯರಿಂಗ್​ನಲ್ಲಿ ಟಾಪರ್ ಆಗಿದ್ದವ ದಾರಿ ತಪ್ಪಿದ್ದೇಕೆ?

ರಾಷ್ಟ್ರಮಟ್ಟದಲ್ಲಿ ಯಡಿಯೂರಪ್ಪಗೆ ದೊಡ್ಡ ಜವಾಬ್ದಾರಿ: BSYರ ಹಿರಿತನ ಪರಿಗಣಿಸಿದ ಬಿಜೆಪಿ

ನಾಗರಹಾವಿನ ಹೆಡೆಯಿಂದ ಕ್ಷಣಾರ್ಧದಲ್ಲಿ ಮಗನನ್ನು ರಕ್ಷಿಸಿದ ತಾಯಿ! ಮಂಡ್ಯದಲ್ಲಿ ಎದೆ ಝಲ್​ ಅನ್ನಿಸೋ ಘಟನೆ, ವಿಡಿಯೋ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + one =
Remember me
