ತುಮಕೂರು:ಅಪಾಯವನ್ನೂ ಲೆಕ್ಕಿಸದೆ ರಭಸವಾಗಿ ಹರಿಯುವ ನೀರಿನಲ್ಲಿ ಬಸ್ ಚಾಲಕ ಹುಚ್ಚಾಟ ಮೆರೆದ ಘಟನೆ ಪಾವಗಡ ತಾಲೂಕಿನ ವೆಂಕಟಾಪುರದಲ್ಲಿ ಸಂಭವಿಸಿದೆ. ಅದೃಷ್ಟವಶಾತ್​​ ಬಸ್​ನಲ್ಲಿದ್ದ 50ಕ್ಕೂ ಹೆಚ್ಚು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಜಿಲ್ಲೆಯಲ್ಲಿ ನಿರಂತರ ಮಳೆಗೆ ಹಲವೆಡೆ ರಸ್ತೆಗಳು ಜಲಾವೃತಗೊಂಡಿವೆ. ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಕೆರೆಗಳು ಕೋಡಿಬಿದ್ದಿವೆ. ವೆಂಕಟಾಪುರದಲ್ಲೂ ರಸ್ತೆ ಜಲಾವೃತಗೊಂಡಿದೆ. ಹಾಗಾಗಿ ಈ ಭಾಗದಲ್ಲಿ ವಾಹನಗಳ ಸಂಚಾರಕ್ಕೆ ಗ್ರಾಮಸ್ಥರು ತಾತ್ಕಾಲಿಕ ನಿರ್ಬಂಧ ಹೇರಿದ್ದಾರೆ. ಆದರೂ ಖಾಸಗಿ ಬಸ್​ ಚಾಲಕರೊಬ್ಬರು ಗ್ರಾಮಸ್ಥರ ಮನವಿಗೂ ಕಿವಿಗೊಡದೆ ನೀರಲ್ಲೇ ಬಸ್​ ಚಲಾಯಿಸಿಕೊಂಡು ಹೋಗಲು ಯತ್ನಿಸಿದ್ದು, ಬಸ್​ ಹಳ್ಳದಲ್ಲಿ ಸಿಲುಕಿದೆ.
ಪಾವಗಡದಿಂದ ಹಿಂದೂಪುರಕ್ಕೆ ಹೊರಟಿದ್ದ ಈ ಬಸ್​ನಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಕೂಡಲೇ ಹಳ್ಳದ ನೀರಲ್ಲಿ ಸಿಲುಕಿದ ಬಸ್​ಅನ್ನು ಜೆಸಿಬಿ ಮೂಲಕ ಸ್ಥಳೀಯರು ಹೊರ ತಂದರು.
ಹಾರ್ಲೆ ಡೆವಿಡ್ಸನ್​ ಬೈಕ್​ ಓಡಿಸಿ ಬೇಬಿ ಬಂಪ್​ ಫೋಟೋಶೂಟ್ ಮಾಡಿಸಿಕೊಂಡ ಮಲೆನಾಡ ಬೆಡಗಿ!

ಪಾವಗಡದ ಸೋಲಾರ್ ಪಾರ್ಕ್ ಮುಳುಗಡೆ: ಏಷ್ಯಾದ ಅತಿ ದೊಡ್ಡ ಸೌರ ಘಟಕದಲ್ಲಿ ಯುವಕನೊಬ್ಬ ಈಜಾಡುತ್ತಿರುವ ದೃಶ್ಯ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
