ತುಮಕೂರು:ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ಮಾಜಿ ಸಿಎಂ ಕುಮಾರಸ್ವಾಮಿ ಇಂದು ಬೆಳಗ್ಗೆ ಬೆಂಗಳೂರಿನ ವೈಟ್​ಫೀಲ್ಡ್​ನ ವಿವಂತಾ ಹೋಟೆಲ್​ನಲ್ಲಿ ಶಾಸಕರ ಜೊತೆ ಒಂದು ಸುತ್ತಿನ ಸಭೆ ನಡೆಸಿದ್ದಾರೆ. ಮತ್ತೊಂದು ಸುತ್ತಿನ ಸಭೆ ಯಶವಂತಪುರದ ತಾಜ್ ವಿವಂತಾ ಹೋಟೆಲ್​ಗೆ ಶಿಫ್ಟ್​ ಆಗಿದೆ. ಎಲ್ಲರೂ ಕಡ್ಡಾಯವಾಗಿ ಬರಬೇಕು ಎಂಬ ಸೂಚನೆ ಇದೆ. ಆದರೆ ಟ್ರಿಪ್ ನೆಪದಲ್ಲಿ ತುಮಕೂರು ಗ್ರಾಮಾಂತರ ಶಾಸಕ ಶಾಸಕ ಗೌರಿಶಂಕರ್ ನಾಪತ್ತೆಯಾಗಿದ್ದಾರೆ.
ಕುಟುಂಬದ‌ ಜೊತೆ ಫಾರಿನ್ ಟ್ರಿಪ್​ನಲ್ಲಿ ಇದ್ದೀನಿ. ಫಾರಿನ್​ನಿಂದ ಇಂದು ಸಂಜೆ ಬೆಂಗಳೂರಿಗೆ ಬರುವೆ. ನಾಳೆ ಮತ ಹಾಕ್ತೀನಿ ಎಂದು ಶಾಸಕ ಗೌರಿಶಂಕರ್ ಹೇಳಿರುವುದು ಜೆಡಿಎಸ್​ನಲ್ಲಿ ಆತಂಕ ಹೆಚ್ಚಿಸಿದೆ. ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿಸಲು ಕಾಂಗ್ರೆಸ್ ಸಂಚು ರೂಪಿಸಿದ್ದು, ಗೌರಿಶಂಕರ್‌ ಅವರು ಕಾಂಗ್ರೆಸ್ ನಾಯಕರ ಆಮಿಷಕ್ಕೆ ಒಳಗಾಗಿ ಉಲ್ಟಾ ಹೊಡೀತಾರಾ? ಎಂಬ ಆತಂಕ ಜೆಡಿಎಸ್​ಗೆ ಕಾಡುತ್ತಿದೆ.
ಇಂದು ಸಂಜೆ ಬೆಂಗಳೂರಿನಲ್ಲಿ ನಡೆಯಲಿರುವ ಜೆಡಿಎಸ್ ಸಭೆಗೆ ಗೌರಿಶಂಕರ್ ಹಾಜರಾಗೋದು ಅನುಮಾನ ಎನ್ನುತ್ತಿವೆ ಮೂಲಗಳು. ಅತ್ತ ಗುಬ್ಬಿ ಶಾಸಕ ಶ್ರೀನಿವಾಸ್​ ಕೂಡ ಜೆಡಿಎಸ್​ಗೆ ಕೈಕೊಡುವ ಸಾಧ್ಯತೆ ಇದೆ. ಒಟ್ಟಾರೆ ಜೆಡಿಎಸ್​ ಭದ್ರಕೋಟೆಯಂತಿದ್ದ ತುಮಕೂರು ಜಿಲ್ಲೆಯ ಶಾಸಕರಿಬ್ಬರ ನಡೆ ಜೆಡಿಎಸ್​ ಪಾಲಿಗೆ ಮುಳ್ಳಾಗಿರುವುದಂತೂ ನಿಜ.
ಕುಮಾರಸ್ವಾಮಿ ಅವ್ರೇ ಬಿಜೆಪಿಯನ್ನು ಸೋಲಿಸಬೇಕಾ? ಹಾಗದ್ರೆ ನಮ್ಮನ್ನು ಬೆಂಬಲಿಸಿ… ಜೆಡಿಎಸ್​ಗೆ ಆಫರ್​ ಇಟ್ಟ ಸಿದ್ದು

ನನ್ನನ್ನು JDS​ ವರಿಷ್ಠರು ಸಂಪರ್ಕಿಸಿಲ್ಲ.. ರಾಜ್ಯಸಭೆ ಎಲೆಕ್ಷನ್​ನಲ್ಲಿ ಖಂಡಿತ BJP ಗೆಲ್ಲುತ್ತೆ: ಗುಬ್ಬಿ ಶಾಸಕ ಶ್ರೀನಿವಾಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + four =
Remember me
