ತುಮಕೂರು:ನೂರಾರು ಕನಸುಗಳನ್ನು ಹೊತ್ತು ಪತ್ರಿಕೋದ್ಯಮ, ಸಿನಿಮಾ ರಂಗದಲ್ಲಿ ಮಹತ್ತರ ಸಾಧನೆ ಮಾಡುವ ಹಂಬಲದಲ್ಲಿ ಬಹಳ ಚಟುವಟಿಕೆಯಿಂದ ಕೂಡಿದ್ದ ಪ್ರತಿಭಾವಂತ ವಿದ್ಯಾರ್ಥಿಯೊಬ್ಬ ಕನಸು ನನಸಾಗುವ ಮೊದಲೇ ದುರಂತ ಅಂತ್ಯ ಕಂಡಿದ್ದಾನೆ. ಸಾವಿನಲ್ಲೂ ನೇತ್ರದಾನ ಮಾಡಿ ಸಾರ್ಥಕತೆ ಮೆರೆದಿದ್ದಾನೆ. ಇದ್ದೊಬ್ಬ ಮಗನನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ನೆಚ್ಚಿನ ಸಹಪಾಠಿ- ವಿದ್ಯಾರ್ಥಿ ಬಾರದ ಲೋಕಕ್ಕೆ ಹೋಗಿರುವ ಸುದ್ದಿ ಕೇಳಿ ತರಗತಿಯಲ್ಲೂ ನೀರವ ಮೌನ ಆವರಿಸಿದೆ.
ಇಂತಹ ಮನಕಲಕುವ ಘಟನೆ ತುಮಕೂರು ಜಿಲ್ಲೆಯಲ್ಲಿ ಸಂಭವಿಸಿದೆ. ತುರುವೇಕೆರೆ ತಾಲೂಕಿನ ನರಿಗೇಹಳ್ಳಿ ಸಮೀಪ ಸಂಭವಿಸಿದ ಬೈಕ್​ ಅಪಘಾತದಲ್ಲಿ ತುಮಕೂರು ವಿವಿ ಕಲಾ ಕಾಲೇಜು ಪದವಿ ವಿದ್ಯಾರ್ಥಿ ದರ್ಶನ್​(21) ಮೃತಪಟ್ಟಿದ್ದಾನೆ. ಮಗನ ಕಣ್ಣುಗಳನ್ನು ಕುಟುಂಬಸ್ಥರು ದಾನ ಮಾಡಿದ್ದಾರೆ.
ಪತ್ರಿಕೋದ್ಯಮ ವಿಭಾಗದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ ದರ್ಶನ್​, ಗ್ರಾಮದ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ. ಲೇಖನ-ಕವಿತೆಗಳನ್ನು ಬರೆದು ಪ್ರಕಟಿಸುತ್ತಿದ್ದ. ಅನೇಕ ಕಿರುಚಿತ್ರ ಕೂಡ ನಿರ್ದೇಶಿಸಿದ್ದ. ಆತ ನಟಿಸಿ ನಿರ್ದೇಶಿಸಿದ್ದ ‘ವಿಹಂಗಮಾಯ’ ಎಂಬ ಕಿರುಚಿತ್ರ ಸೆಮ್ಕಾ-ಯುನೆಸ್ಕೋ ನಡೆಸಿದ ಹವಾಮಾನ ಬದಲಾವಣೆ ಕುರಿತ ರಾಷ್ಟ್ರಮಟ್ಟದ ಕಿರುಚಿತ್ರ ಸ್ಪರ್ಧೆಗೆ ಆಯ್ಕೆಯಾಗಿತ್ತು. ಇತ್ತೀಚಿಗೆ ನಡೆದ ಕಾಲೇಜು ವಾಷಿರ್ಕೋತ್ಸವದಲ್ಲಿ ಕುಲಪತಿಯಿಂದ ಅತ್ಯುತ್ತಮ ಎನ್ನೆಸ್ಸೆಸ್​ ಸ್ವಯಂಸೇವಕ ಪ್ರಶಸ್ತಿಯನ್ನೂ ದರ್ಶನ್ ಪಡೆದಿದ್ದ.
ಶುಕ್ರವಾರ ಸಂಜೆ ತುರುವೇಕೆರೆ ತಾಲೂಕಿನ ನರಿಗೇಹಳ್ಳಿ ಸಮೀಪ ಸಂಭವಿಸಿದ ಬೈಕ್​ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ದರ್ಶನ್​ನನ್ನು ಬೆಳ್ಳೂರು ಕ್ರಾಸ್​ನ ಬಿಜಿಎಸ್​ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸಲಿಲ್ಲ. ನೇತ್ರ ದಾನ ಮಾಡುವ ಮೂಲಕ ಸಾವಿನಲ್ಲೂ ದರ್ಶನ್ ಇತರರ ಬಾಳಿಗೆ ಬೆಳಕಾಗಿದ್ದಾನೆ. ಹುಟ್ಟೂರು ನರಿಗೇಹಳ್ಳಿಯಲ್ಲಿ ಶನಿವಾರ ಅಂತ್ಯಕ್ರಿಯೆ ನಡೆಯಿತು.
ಬಡತನ ಮೆಟ್ಟಿ ನಿಲ್ಲಬೇಕು ಅನ್ನುವಷ್ಟರಲ್ಲಿ ಆಟವಾಡಿದ ವಿಧಿ… ಸಾವಲ್ಲೂ ಸಾರ್ಥಕತೆ ಮೆರದ ಪಿಯು ವಿದ್ಯಾರ್ಥಿನಿ…

ಚನ್ನಪಟ್ಟಣದಲ್ಲಿ ಅಪರೂಪದ ಅಟ್ಲಾಸ್​ ಪ್ರಭೇದದ ಪತಂಗ ಪತ್ತೆ: 10-15 ದಿನ ಬದುಕುವ ಜೀವಿಗೆ ಹಾವಿನ ರೂಪದ ರೆಕ್ಕೆಗಳೇ ಆಕರ್ಷಣೆ

ತುಮಕೂರಲ್ಲಿ‌‌ ಜೆಡಿಎಸ್​ಗೆ ಶಾಕ್: ಒಂದೇ ದಿನ ನೂರಕ್ಕೂ ಹೆಚ್ಚು ಮಂದಿ ರಾಜೀನಾಮೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 7 =
Remember me
